ಮಣ್ಣಿಗೆ ಸಾವಯವ ಇಂಗಾಲದ ಪ್ರಯೋಜನ

ಮಣ್ಣಿಗೆ ಸಾವಯವ ಇಂಗಾಲದ ಪ್ರಯೋಜನ

ದಾವಣಗೆರೆ: ಬಿರುಬಿಸಿಲಿಗೆ ಬೆಂಡಾಗಿ ಬಸವಳಿದಿರುವ ನಮ್ಮ ಮಣ್ಣುಗಳು ದಾಹ ಮತ್ತು ಹಸಿವಿನಿಂದ ಕಂಗೆಟ್ಟಿದೆ. ಶಾಶ್ವತವಾಗಿ ಈ ಮಣ್ಣುಗಳ ಬಾಯಾರಿಕೆ ಮತ್ತು ಹಸಿವು ನೀಗಿಸಲು ನಮ್ಮ ಮಣ್ಣುಗಳಿಗೆ ಸಾವಯವ ಇಂಗಾಲ ಸೇರಿಸುವುದೇ ಈಗಿರುವ ಏಕೈಕ ಪರಿಹಾರ.  ನಮ್ಮ ಮಣ್ಣಿಗೆ ಒಂದು ಬಗೆಯ ರೂಪವನ್ನು ನೀಡಿ – ಚೇತರಿಕೆ ತುಂಬಿ – ತಾಕತ್ತು ತರುವ ಇಂಗಾಲಾಂಶದಿಂದ ಬಹುಬಗೆಯ ಪ್ರಯೋಜನಗಳಿವೆ.

  • ಸಾವಯವ ಅಂಶದ ರೂಪದಲ್ಲಿ ಮಣ್ಣಿಗೆ ಸೇರುವ ಸಾವಯವ ಇಂಗಾಲಾಂಶ ನಮ್ಮ ಮಣ್ಣನ್ನು ಸಜೀವಗೊಳಿಸುತ್ತವೆ.
  • ತನ್ನ ಒಡಲಲ್ಲಿರುವ ಪೋಷಕಾಂಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಉತ್ಪಾದಕಾ ಘಟಕಗಳಾಗಿ ಮಣ್ಣನ್ನು ಪರಿವರ್ತಿಸುತ್ತವೆ.
  • ಮಣ್ಣಲ್ಲಿನ ಜೀವಾಣುಗಳಿಗೆ ಹಾಗೂ ಬೆಳೆಯುವ ಗಿಡಗಳಿಗೆ ಅಗತ್ಯವಾದ ಸಾವಯವ ಆಹಾರ – ಪೋಷಕಾಂಶಗಳನ್ನು ಹಂತಹಂತವಾಗಿ ಹಾಗೂ ಸಾವಧಾನದಿಂದ ಬಿಡುಗಡೆ ಮಾಡುತ್ತದೆ
  • ಅತೀ ಹೆಚ್ಚು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ, ತನ್ನಲ್ಲಿನ ತೇವಾಂಶವನ್ನು ಅಗತ್ಯ ಸಮಯದಲ್ಲಿ ಗಿಡಗಳಿಗೆ ನೀಡಿ, ಗಿಡಗಳು ಬಿಸಿಲಿನಿಂದ ಒಣಗುವುದನ್ನು ತಪ್ಪಿಸುತ್ತವೆ
  • ಮಣ್ಣಿನ ರಸಸಾರದ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ
  • ಮಣ್ಣಲ್ಲಿನ ಕ್ಷಾರೀಯ ಹಾಗೂ ಆಮ್ಲೀಯ ಅಂಶವನ್ನು ತಗ್ಗಿಸುತ್ತದೆ
  • ಇಂಗಾಲಾಂಶ ಹೊಂದಿರುವ ಮಣ್ಣುಗಳು ದಟ್ಟವಾದ ಬಣ್ಣಗಳಲ್ಲಿರುತ್ತವೆ.
  • ಮಣ್ಣಲ್ಲಿ ಬೆರೆಯುವ ಸಾವಯವ ಅಂಶ ಮಣ್ನಿನ ಕಣಕಣಗಳನ್ನು (ಮರಳು – ಗೋಡು – ಜೇಡಿ ಕಣಗಳು) ಒಂದುಗೂಡಿಸುತ್ತವೆ. ಇದರಿಂದ ಮಣ್ಣು ಸವೆಯುವುದು ತಪ್ಪುತ್ತದೆ.
  • ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೇಷಿಯಂ ಮತ್ತಿತರ ಸಹಜ ಪೋಷಕಾಂಶಗಳನ್ನು ಮಣ್ಣಲ್ಲಿಯೇ ಬೆರೆಯುವಂತೆ ಮಾಡುವುದರ ಮೂಲಕ ಈ ಪೋಷಕಾಂಶಗಳು ಸೋರಿಕೆಯಾಗುವುದನ್ನು ತಡೆಯುತ್ತವೆ.

Leave a Reply

Your email address will not be published. Required fields are marked *

error: Content is protected !!