ಎಚ್ಚರ.. ದಾವಣಗೆರೆಯ 23ಕಡೆ ಅಡಾಪ್ಟಿವ್ ಸಿಗ್ನಲ್ಸ್ ಇವೆ
ದಾವಣಗೆರೆ: ನಗರದ 23 ಸಿಗ್ನಲ್ ಸ್ಥಳಗಳಲ್ಲಿ ಸೆನ್ಸಾರ್ ಆಧಾರಿತ ಅಡಾಪ್ಟಿವ್ ಸಿಗ್ನಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
ನಗರದ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ವ್ಯವಸ್ಥೆಯಲ್ಲಿ ಸಂಚಾರ ಉಲ್ಲಂಘನೆಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಿ, ಚಲನ್ ಜನರೇಟ್ ಮಾಡಿ ವಾಹನ ಮಾಲೀಕರಿಗೆ ಕಳುಹಿಸಲಾಗುತ್ತದೆ.
ಸರ್ಕಲ್‌ಗಳಲ್ಲಿ ಪೊಲೀಸರು ಇಲ್ಲ ಎಂದುಕೊಂಡು ಸಂಚಾರಿ ನಿಯಮಗಳನ್ನು ಯಾರೂ ಇಲ್ಲಂಘಿಸಬಾರದು ಎಂದು ಎಸ್ಪಿ ಹೇಳಿದರು.
ಹಳೆಯ ಸಿಗ್ನಲ್‌ಗಳಿಗೆ ಹೋಲಿಸಿದರೆ ಅಡಾಪ್ಟಿವ್ ಸಿಗ್ನಲ್ ವ್ಯವಸ್ಥೆಯಿಂದ ವಾಹನ ಸವಾರರ ಕಾಯುವಿಕೆ ಸಮಯ ಉಳಿಯುತ್ತದೆ ಎಂದರು.
ಪಿ.ಬಿ. ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಸಿಗ್ನಲ್‌ನಲ್ಲಿ ಆರ್‌ಎಲ್‌ವಿಡಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 9 ಕಡೆ ಇಂತಹ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಎಸ್ಪಿ ರಿಷ್ಯಂತ್ ಹೇಳಿದರು.
ವಾಹನ ಸವಾರರು ಸಿಗ್ನಲ್ ಜಂಪ್ ಮಾಡಿದರೆ ಹಾಗೂ ಹೆಲ್ಮೆಟ್ ಹಾಕದೇ ಇದ್ದರೆ ಸ್ಥಳದಲ್ಲಿ ಪೊಲೀಸರು ಇರದಿದ್ದರೂ ಸ್ವಯಂ ಚಾಲಿತವಾಗಿ ಗುರುತಿಸಿ ದಂಡದ ಚನಲ್ ತಯಾರಾಗುತ್ತದೆ. ಈಗಾಗಲೇ ಕಳೆದ ಎರಡು ತಿಂಗಳಿನಿಂದ 5 ಸಾವಿರ ವಾಹನ ಮಾಲೀಕರಿಗೆ ದಂಡದ ಚನಲ್ ರವಾನಿಸಲಾಗಿದೆ ಎಂದು ಹೇಳಿದರು.