ರೈತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಕೋಟ್ಯಾಂತರ ಸಾಲ.! ಯೂಕೋ ಬ್ಯಾಂಕ್‌ ಮ್ಯಾನೇಜರ್ ಸೇರಿ ಮೂವರ ಬಂಧನ

ದಾವಣಗೆರೆ: ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಹೇಳಿ ರೈತರಿಗೆ 17 ಕೋಟಿ ರೂಪಾಯಿ ವಂಚಿಸಿದ್ದ ಆರೋಪದ ಮೇರೆಗೆ ದಾವಣಗೆರೆ ನಗರದ ಮಂಡಿಪೇಟೆಯ ಯೂಕೋ ಬ್ಯಾಂಕ್‌ ಮ್ಯಾನೇಜರ್ ಸೇರಿದಂತೆ ಮೂವರನ್ನು ರಾಜ್ಯ ಅಪರಾಧ ತನಿಖಾದಳ (ಸಿಐಡಿ) ಪೊಲೀಸರು ಬಂಧಿಸಿದ್ದಾರೆ.

ಮಂಡಿಪೇಟೆಯ ಖಾಸಗಿ ಬ್ಯಾಂಕ್ ಆದ ಯೂಕೋ ಬ್ಯಾಂಕ್‌ನ ವ್ಯವಸ್ಥಾಪಕ ಭಕ್ತಿಭೂಷಣ್, ಸಿಜಿಆರ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ರೆಡ್ಡಿ ಹಾಗೂ ಏಜೆಂಟ್ ಸಂತೋಷ್ ಬಂಧಿತರು.

2019ರಲ್ಲಿ ಯೂಕೋ ಬ್ಯಾಂಕ್‌ನಲ್ಲಿ 5 ಲಕ್ಷ ಸಾಲ ಕೊಡಿಸುತ್ತೇನೆ. ಇದರಲ್ಲಿ ನಿಮಗೆ 2 ಲಕ್ಷರು ಸಬ್ಸಿಡಿ ಹಣ ವಾಪಸ್ ಕೊಡುತ್ತಾರೆ ಎಂದು ನಂಬಿಸಿ ರೈತರಿಂದ ಪಹಣಿ, ಆಧಾರ್ ಕಾರ್ಡ್, ಐಡಿ ಕಾರ್ಡ್ ಅನ್ನು ಆರೋಪಿಗಳು ಸಂಗ್ರಹಿಸಿದ್ದರು.ರೆಡ್ಡಿ ಕೃತ್ಯಕ್ಕೆ ಯೂಕೋ ಬ್ಯಾಂಕ್‌ನ ವ್ಯವಸ್ಥಾಪಕ ಭಕ್ತಿಭೂಷಣ್, ಉದ್ಯೋಗಿಗಳಾದ ಸುನೀಲ್ ಹಾಗೂ ಸಿದ್ದೇಶ್‌ ಸಾಥ್‌ ಕೊಟ್ಟಿದ್ದರು.

ಈ ದಾಖಲೆ ಬಳಸಿ ಯೂಕೋ ಬ್ಯಾಂಕ್‌ನಲ್ಲಿ ಸಾಲ ಪಡೆದ ಆರೋಪಿಗಳು, ನಂತರ ರೈತರಿಗೆ ಸಬ್ಸಿಡಿಹಣ ಎಂದು ಹೇಳಿ 1 ಲಕ್ಷ ರೂ. ನಿಂದ 50 ಸಾವಿರ ವರೆಗೆ ನಗದು ಹಣ ವಿತರಿಸಿದ್ದರು. ಆದರೆ ಬ್ಯಾಂಕ್‌ನ ಪಾಸ್‌ಬುಕ್‌ನಲ್ಲಿ ನಮೂದಾಗಿರುವ ಹಣವನ್ನು ರೈತರು ಪರಿಶೀಲಿಸಿದಾಗ ತಮ್ಮ ಹೆಸರಿನಲ್ಲಿ ತಲಾ48 ಲಕ್ಷದದಂತೆ ಒಟ್ಟು 17 ಕೋಟಿ ಸಾಲ ಪಡೆದಿರುವುದು ಗೊತ್ತಾಗಿದೆ.

4 ಜಿಲ್ಲೆಗಳ ರೈತರಿಗೆ ವಂಚನೆ 3 ವರ್ಷಗಳ ಬಳಿಕ ದಾಳಿ ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ಆರೋಪಿಗಳು ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೆಲವು ದಾಖಲೆಗಳ ಸಂಗ್ರಹ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿಗೆ ಈ ಬ್ಯಾಂಕ್‌ನ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು. ಸಿಐಡಿ ಎಡಿಜಿಪಿ ಕೆ.ವಿ.ಶರತ್ ಚಂದ್ರ ಮಾರ್ಗದರ್ಶನದಲ್ಲಿ ಎಸ್ಪಿ ಎಂ.ಡಿ.ಶರತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ವಿವೇಕ ರೆಡ್ಡಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಆತನ ಮೇಲೆ ವಂಚನೆ ಕೃತ್ಯಗಳು ದಾಖಲಾಗಿವೆ. ಈ ಹಿಂದೆ ರೆಡ್ಡಿ ವಿರುದ್ಧ ಸಿಐಡಿ ತನಿಖೆ ಸಹ ನಡೆದಿತ್ತು. ಅಡಿಕೆ ವ್ಯಾಪಾರ ನೆಪದಲ್ಲಿ ದಾವಣೆಗೆರೆ ಜಿಲ್ಲೆಗೆ ಪ್ರವೇಶಿಸಿದ ವಿವೇಕ್ ರೆಡ್ಡಿ, ‘ಸಿಜಿಆರ್’ ಹಾಗೂ ವಿನ್‌ವೇ’ ಹೆಸರಿನಲ್ಲಿ ಕಂಪನಿಗಳನ್ನು ಆರಂಭಿಸಿದ್ದ. ತನ್ನ ಕಂಪನಿಗೆ ಕೆಲವು ಏಜೆಂಟ್‌ಗಳನ್ನು ಕೂಡಾ ರೆಡ್ಡಿನೇಮಿಸಿದ್ದ. ಅಡಿಕೆ ವ್ಯಾಪಾರದ ನೆಪದಲ್ಲಿ ರೈತರನ್ನು ಸಂಪರ್ಕಿಸಿ ಸಾಲಕೊಡಿಸುವುದಾಗಿ ನಂಬಿಸಿ ವಂಚಿಸುವುದು ಈತನ ಕೃತ್ಯವಾಗಿತ್ತು.

ದಾವಣೆಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಅಣಜಿ ಸೇರಿದಂತೆ ನಾಲ್ಕು ಕಡೆ ಅಡಿಕೆ ಸಂಗ್ರಹಕ್ಕೆ ಗೋದಾಮು ಸಹತೆರೆದಿದ್ದ.ಗೋದಾಮಿನ ಹೊರನೋಟಕ್ಕೆ ಕಾಣುವಂತೆ ಮಾತ್ರ ಅಡಿಕೆ ತುಂಬಿದ್ದ. ಆದರೆ, ಗೋದಾಮುಗಳ ಒಳ ಭಾಗದಲ್ಲಿ ಖಾಲಿಯಾಗಿದ್ದವು. ಒಂದು ಕಡೆ ಉಗ್ರಾಣ ಇಲ್ಲದೆ ಇದ್ದರೂ ದಾಖಲೆಯಲ್ಲಿ ತೋರಿಸಿದ್ದ ರೆಡ್ಡಿ, ಕೊನೆಗೆ ಖಾಲಿ ಗೋದಾಮು ತೋರಿಸಿಯೇ ರೈತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಕೋಟ್ಯಾಂತರ ಸಾಲ ಪಡೆದು ವಂಚಿಸಿದ್ದ ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!