ಶಿವನಿಗೆ ಪ್ರಿಯವಾದ ಬಿಲ್ವಪತ್ರೆ : ಇಂತಹ ಬಿಲ್ವಪತ್ರೆ ಅರ್ಪಣೆಯಿಂದ ದೋಷ ಕಟ್ಟಿಟ್ಟ ಬುತ್ತಿ..!

11

ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಬಿಲ್ವಪತ್ರೆಯಿಲ್ಲದೆ ಶಿವ ಪೂಜೆ ಅಪೂರ್ಣವೆಂದರೆ ತಪ್ಪಾಗಲಾರದು. ಮಹಾಶಿವರಾತ್ರಿಯಂದು ಪೂಜೆಯಲ್ಲಿ ಬಿಲ್ವಪತ್ರೆಯನ್ನು ಬಳಸುವುದು ಹೇಗೆ..? ಬಿಲ್ವಪತ್ರೆಗೆ ಸಂಬAಧಿಸಿದ ಈ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಬಿಲ್ವಪತ್ರೆಯು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಶಿವನ ಆರಾಧನೆಯಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಆದರೆ ಬಿಲ್ವಪತ್ರೆಯನ್ನು ನೀಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಆ ಮುನ್ನೆಚ್ಚರಿಕೆಗಳ ಬಗ್ಗೆ ಮತ್ತು ಬಿಲ್ವಪತ್ರೆಗೆ ಸಂಬAಧಿಸಿದ ಪ್ರಮುಖ ವಿಷಯಗಳ ಬಗ್ಗೆ ಹೇಳಲಿದ್ದೇವೆ.
ಬಿಲ್ವಪತ್ರೆಯು ೧, ೩ ಅಥವಾ ೫ ಎಲೆಗಳಿಂದ ಕೂಡಿರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಬಿಲ್ವಪತ್ರೆಯು ಹೆಚ್ಚು ಎಲೆಗಳನ್ನು ಹೊಂದಿದ್ದರೆ ಅದು ಉತ್ತಮವಾಗಿರುತ್ತದೆ ಎಂದು ಶಾಸ್ತçಗಳಲ್ಲಿ ಹೇಳಲಾಗಿದೆ. ಆದ್ದರಿಂದ, ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವಾಗ, ಅದು ಕನಿಷ್ಠ ೩ ಎಲೆಗಳನ್ನಾದರೂ ಹೊಂದಿರಬೇಕು. ಈ ೩ ಎಲೆಯೂ ಪೂರ್ಣವಾಗಿದ್ದರೆ ಅದನ್ನು ಬಿಲ್ವಪತ್ರೆ ಎಂದು ಕರೆಯಲಾಗುತ್ತದೆ.
ಈ ಬಿಲ್ವವನ್ನು ಬಳಸಬಾರದು :
ಬಿಲ್ವ ಎಲೆಗಳನ್ನು ಶಿವಲಿಂಗದ ಮೇಲೆ ಅರ್ಪಿಸಲು ಆರಿಸುವಾಗ, ಬಿಲ್ವ ಎಲೆಗಳ ಮೇಲೆ ಹೆಚ್ಚು ಪಟ್ಟಿಗಳು ಅಥವಾ ಗೆರೆಗಳು ಇರಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಅನೇಕ ಪಟ್ಟಿಗಳನ್ನು ಹೊಂದಿರುವ ಬಿಲ್ವಪತ್ರೆ ಎಲೆಯನ್ನು ಶಿವ ಪೂಜೆಯಲ್ಲಿ ಬಳಸಬಾರದು ಎಂಬುದು ತಿಳಿದಿರಲಿ. ಇಂತಹ ಬಿಲ್ವಪತ್ರೆಯನ್ನು ಹಾಳಾದ ಬಿಲ್ವಪತ್ರೆ ಅಥವಾ ಶಿವಪೂಜೆಗೆ ಅರ್ಹವಲ್ಲದ ಬಿಲ್ವಪತ್ರೆ ಎಂದು ಪರಿಗಣಿಸಲಾಗುತ್ತದೆ.
ಬಿಲ್ವಪತ್ರೆ ತುಂಡಾಗಿರಬಾರದು :
ಮಹಾ ಶಿವರಾತ್ರಿಯಂದು ಬಿಲ್ವ ಎಲೆಗಳನ್ನು ಶಿವನಿಗೆ ಅರ್ಪಿಸುವ ವೇಳೆ ಎಲೆಗಳನ್ನು ವಿಂಗಡಿಸುವಾಗ, ಬಿಲ್ವ ಎಲೆಗಳು ಎಲ್ಲಿಯೂ ಕತ್ತರಿಸದಂತೆ ಅಥವಾ ಹರಿದು ಹೋಗದಂತೆ ನೋಡಿಕೊಳ್ಳಿ. ನಿಮಗೆ ಹೆಚ್ಚು ಬಿಲ್ವ ಎಲೆಗಳನ್ನು ಸಂಗ್ರಹಿಸಲು ಸಾಧ್ಯವಾಗದಿದ್ದರೆ, ಒಂದೇ ಒಂದು ಎಲೆಯನ್ನು ಕೂಡ ಸಂಗ್ರಹಿಸಬಹುದು. ಆದರೆ ಅದು ಎಲ್ಲಿಯೂ ಹರಿದಿರಬಾರದು ಎನ್ನುವುದು ಬಹಳ ಮುಖ್ಯ.
ಈ ಬಿಲ್ವ ಎಲೆಯನ್ನು ಕೂಡ ಅರ್ಪಿಸಬಹುದು:
ಬಿಲ್ವ ಎಲೆಗಳನ್ನು ಶಿವನಿಗೆ ಅರ್ಪಿಸುವಾಗ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಅದೇನೆಂದರೆ ನಯವಾದ ಎಲೆಗಳ ಭಾಗವನ್ನು ಶಿವಲಿಂಗದ ಮೇಲೆ ಇಡಬೇಕು. ಒಂದು ವೇಳೆ ನಿಮ್ಮ ಬಳಿ ಹೆಚ್ಚು ಬಿಲ್ವ ಎಲೆಗಳು ಇಲ್ಲದಿದ್ದರೆ ಆಗ ನೀವು ಒಮ್ಮೆ ಪೂಜೆಯಲ್ಲಿ ಬಳಸಿದ ಎಲೆಗಳನ್ನು ನೀರಿನಿಂದ ತೊಳೆದು ಮತ್ತೆ ಮತ್ತೆ ನೈವೇದ್ಯ ಮಾಡಬಹುದು ಎಂದು ಶಾಸ್ತçದಲ್ಲಿ ಹೇಳಲಾಗಿದೆ. ನೀರನ್ನು ಅರ್ಪಿಸದೆ ಶಿವಲಿಂಗಕ್ಕೆ ಬಿಲ್ವ ಎಲೆಗಳನ್ನು ಅರ್ಪಿಸಬೇಡಿ.

ಈ ದಿನ ಬಿಲ್ವಪತ್ರೆಯನ್ನು ಮುರಿಯಬೇಡಿ:
ಸೋಮವಾರ ಅಥವಾ ಚತುರ್ದಶಿಯಂದು ಬಿಲ್ವಪತ್ರೆ ಎಲೆಯನ್ನು ಮುರಿಯಬಾರದು ಎಂಬ ನಿಯಮವನ್ನು ಶಾಸ್ತçಗಳಲ್ಲಿ ಹೇಳಲಾಗಿದೆ. ಈ ಬಾರಿಯ ಮಹಾಶಿವರಾತ್ರಿ ಮಂಗಳವಾರ ಬಂದಿದೆ. ಆದ್ದರಿಂದ ಈ ಬಾರಿ ನೀವು ಭಾನುವಾರದಂದು ಬಿಲ್ವ ಎಲೆಗಳನ್ನು ಎತ್ತಿಟ್ಟುಕೊಳ್ಳಬೇಕು. ಏಕೆಂದರೆ ಮರುದಿನ ಸೋಮವಾರ ಮತ್ತು ಮರುದಿನ ಚತುರ್ದಶಿ ಅಂದರೆ ಮಹಾಶಿವರಾತ್ರಿ. ಸೋಮವಾರ ಮತ್ತು ಚತುರ್ದಶಿಯಂದು ಬಿಲ್ವ ಎಲೆಗಳನ್ನು ಕಿತ್ತು ಶಿವಲಿಂಗದ ಮೇಲೆ ಅರ್ಪಿಸುವವನ ಮೇಲೆ ಶಿವನು ಅಸಂತೋಷಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!