ನಾನೊಬ್ಬನೇ ಸಾಕು ಎನ್ನುತ್ತಿದ್ದ ಬಿಜೆಪಿ: 38 ಪಕ್ಷ ಗುಡ್ಡೆ ಹಾಕಿದ್ದು ಯಾಕೆ
ಬೆಂಗಳೂರು: ಏಕ್ ಅಖೇಲ ಆಪ್ ಕೊ ಭಾರೀ ಪಡ್ ರಹ ಹೈ… ಹೀಗೆ ಒಮ್ಮೆ ಸಂಸತ್ ನಲ್ಲಿ ಪ್ರಧಾನಿ ಮೋದಿ ಗುಡುಗಿದ್ದರು. ಇದರ ಅರ್ಥ ನಾನೊಬ್ಬ ನಿಮಗೆ ಭರ್ಜರಿ ಭಾರ ಆಗಿದ್ದೇನೆ ಎಂದು. ಹೀಗೆ ಹೇಳಲು ಕಾರಣ ಇತ್ತು. ಅಂದು ಸಂಸತ್ತಿನಲ್ಲಿ ಅತನ ವಿಷಯ ಕುರಿತು ಭಾರೀ ಚರ್ಚೆ ನಡೆದಿತ್ತು. ಪ್ರಧಾನಿ ಮೋದಿಗೂ ಅತನಿಗೆ ಏನು ಸಂಬಂಧ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಂಖಾನುಪುಂಖವಾಗಿ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಉತ್ತರ ನೀಡುವಾಗ ಪ್ರಧಾನಿ ಮೋದಿ ಒಂದೇ ಒಂದು ಸಾಲು ಅತನ ವಿಷಯ ಕುರಿತು ಸ್ಪಷ್ಟನೆ ನೀಡಲಿಲ್ಲ. ಬದಲಿಗೆ ದೇಶ ಪ್ರೇಮ ಕುರಿತು ಉಪನ್ಯಾಸ ಮಾದರಿಯಲ್ಲಿ ಮಾತನಾಡಿದ್ದರು. ನಾನೊಬ್ಬ ಸಾಕು ನಿಮ್ಮೆಲ್ಲರ ಮಣಿಸಲು ಎಂದು ಟೇಂಕರಿಸಿದ್ದ ಮೋದಿ ಇದೀಗ 2024 ರಲ್ಲಿ ಮತ್ತೆ ಚುನಾವಣೆ ಗೆಲ್ಲಲು ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಒಗ್ಗೂಡಿಸಲು ಮುಂದಾಗಿದ್ದಾರೆ.
ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಒಂದೇ 303 ಸೀಟು ಗಳೀಸಿತ್ತು. ಉಳಿದ 37 ಮಿತ್ರ ಪಕ್ಷಗಳು ಬರೀ 50 ಸೀಟು ಮಾತ್ರ ಗೆದ್ದಿದ್ದವು.
ಆದರೂ ಈ ಬಾರಿ ಎಲ್ಲ ಮಿತ್ರ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಸ್ವತಃ ಪ್ರಧಾನಿ ಮೋದಿಯೇ ಮುಂದಾಗಿದ್ದಾರೆ.
ಈ ಮಧ್ಯೆ ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಪ್ರಾದೇಶಿಕ ಮಾಧ್ಯಮಗಳು ಸಹ ಪ್ರಧಾನಿ ಮೋದಿ ಸೋಲಿಸಲು 26 ಪಕ್ಷಗಳು ಒಂದಾಗಿವೆ ಎಂದು ಟೀಕೆ ಮಾಡುತ್ತಿವೆ. ಆಡಳಿತಾರೂಢ ಪಕ್ಷದ ನಾಯಕರು ಮಾಡುತ್ತಿರುವ ಹರ ಸಾಹಸ ವನ್ನು ಮಾತ್ರ ಎಲ್ಲೂ ಪ್ರಸ್ತಾಪಿಸುತ್ತಾ ಇಲ್ಲ.
ಹಾಲಿ NDA ನಲ್ಲಿ ಬಿಜೆಪಿ, ತಮಿಳುನಾಡಿನ ಎಐಡಿಎಂಕೆ, ಪಿಎಂಕೆ,ತಮಿಳು ಮನಿಲಾ ಕಾಂಗ್ರೆಸ್, ಬಿಹಾರ್ ನ ಲೋಕ ಜನಶಕ್ತಿ ಪಕ್ಷ, ಹಿಂದೂಸ್ತಾನಿ ಅವಂ ಪಕ್ಷ, ಮೇಘಾಲಯದ ಎನ್ ಪಿ ಪಿ, ಪಿಡಿಎಫ್, ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷ, ಹಿಲ್ ಸ್ಟೇಟ್ ಪೀಪಲ್ ಪಾರ್ಟಿ, ಆಂಧ್ರದ ಜನ ಸೇನಾ ಪಕ್ಷ, ಮಹಾರಾಷ್ಟ್ರದ ಶಿವಸೇನೆ, ರಾಷ್ಟ್ರೀಯ ಸಮಾಜ ಪಕ್ಷ, ರಿಪಬ್ಲಿಕ್ ಪಾರ್ಟಿ, ಉತ್ತರ ಪ್ರದೇಶ ಅಪ್ನ ದಳ, ಮಿಜೋರಾಂ ನ ಮಿಜೋ ನ್ಯಾಷನಲ್ ಪಕ್ಷ, ಜಾರ್ಖಂಡ್ ನ ಆಲ್ ಇಂಡಿಯಾ ಸ್ಟೂಡೆಂಟ್ ಯೂನಿಯನ್, ನಾಗಾಲ್ಯಾಂಡ್ ನ ಎನ್ ಡಿಪಿ, ಸಿಕ್ಕಿಂ ನ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಅಸ್ಸಾಂನ ಅಸ್ಸಾಂ ಗಣ ಪರಿಷದ್, ಯುನೈಟೆಡ್ ಪೀಪಲ್ ಪಾರ್ಟಿ, ಪುದುಚೇರಿಯ ಅಲ್ ಇಂಡಿಯಾ ಎನ್ ಅರ್ ಕಾಂಗ್ರೆಸ್, ಹರ್ಯಾಣದ ಜನನಾಯಕ ಜನತಾ ಪಕ್ಷ, ತ್ರಿಪುರ ಇಂಡಿಜೇನಿಯಸ್ ಪಕ್ಷ, ಮೂವರು ಸ್ವತಂತ್ರ ಸಂಸದರು, ಮೂವರು ರಾಜ್ಯಸಭಾ ಸದಸ್ಯರು ಎನ್ ಡಿ ಎ ನಲ್ಲಿ ಇದ್ದಾರೆ.
ಇತ್ತ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿ ಒಟ್ಟು 26 ಪಕ್ಷಗಳು ಯುಪಿಎ ಒಕ್ಕೂಟದಲ್ಲಿ ಇವೆ.