ಸೇವೆಯೇ ಸಂಘಟನೆ:62 ಚನ್ನಗಿರಿ ಬಿಜೆಪಿ ಯುವ ಮೊರ್ಚಾದ ಕಾರ್ಯಕರ್ತರಿಂದ ರಕ್ತದಾನ
ದಾವಣಗೆರೆ: ಹದಿನೆಂಟು ವಯಸ್ಸಿನವರಿಗಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನ ಈಗಾಗಲೇ ಪ್ರಾರಂಭವಾಗಿದ್ದು ಲಸಿಕೆ ಹಾಕಿಸಿಕೊಂಡವರು ಸುಮಾರು ಒಂದು ತಿಂಗಳು ರಕ್ತದಾನ ಮಾಡುವಂತಿಲ್ಲ. ಅಂತಹಾ ಕಾಲದಲ್ಲಿ ರಕ್ತದ ಅಭಾವ ಸೃಷ್ಟಿ ಆಗದೇ ಇರಲಿ ಅನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮಾಗಿ ಚನ್ನಗಿರಿ ಯುವ ಮೊರ್ಚಾದ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡು 62 ಜನ ಸ್ವಯಂ ಪೇರಿತರಾಗಿ ಭಾಗವಹಿಸಿ ರಕ್ತ ದಾನ ಮಾಡಿದ್ದಾರೆ
ಇದು ನಮ್ಮ ಸಂಘಟನೆ,ಪಕ್ಷ ನಮಗೆ ಸದಾ ಕಲಿಸಿದ,ನೆನಪಿಸದ ಪಾಠ. ಕರೋನದ ಕಷ್ಟ ಕಾಲದಲ್ಲಿ ನಾವು ಎಲ್ಲವನ್ನು ಎಲ್ಲರನ್ನು ದೂರುವ ಬದಲು ನಮ್ಮಿಂದ ಸಾದ್ಯಾಗುವ ಉಪಕಾರವನ್ನು ನಮ್ಮ ಸಮಾಜಕ್ಕೆ ಮಾಡುವ. ನಿನಗೆ ಈ ದೇಶದಿಂದ ಏನು ಸಿಕ್ಕಿತು ಎಂದು ಕೇಳುವ ಬದಲು ನೀನು ಈ ದೇಶಕ್ಕೆ ಏನು ಕೊಟ್ಟೆ ಎಂದು ಕೇಳಿಕೊಳ್ಳುವ ಭಾವಕ್ಕೆ ಪೂರಕವಾಗಿ ನಡೆಯೋಣ. ಕರೋನದ ಕಷ್ಟ ಕಾಲದಲ್ಲಿ ನಾವು ಸಮಾಜಕ್ಕೆ ಹೊರೆಯಾಗದೆ, ಸಮಾಜದ ಭಾರಕ್ಕೆ ಹೆಗಲು ಕೊಡುವ. ಈ ಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಚನ್ನಗಿರಿ ಯುವ ಮೊರ್ಚಾದ ಕಾರ್ಯಕರ್ತರು ಸಾಕ್ಷಿ ಆಗಿದ್ದಾರೆ ನಿಜಕ್ಕೂ ಹೆಮ್ಮೆಯ ವಿಷಯ.