ಅಕ್ರಮ ಮರಳಿನ ದಾಹಕ್ಕೆ, ಮುಗ್ದ ಮಕ್ಕಳಿಬ್ಬರ ಬಲಿ, ಯಾರ ಜೀವ ಹೋದರೇ ನಮಗೇನೂ.? ಎಸಿ ರೂಂನಲ್ಲಿ ಕುಳಿತ ಗಣಿ ಅಧಿಕಾರಿಗಳೇ ಇನ್ನೆಷ್ಟು ಬಲಿಗಳು ಬೇಕು ನಿಮಗೆ.!!

ಹರಿಹರ: ಗಣಿ ಸಚಿವರ ಊರಿನಲ್ಲಿ ಅಕ್ರಮ ಮರಳು ದಂಧೆ ಜೋರಾಗಿದ್ದು, ಮುಗ್ದ ಎರಡು ಜೀವಗಳು ಗಣಿ ಅಧಿಕಾರಿಗಳ ನಿರ್ಲಕ್ಷಕ್ಕೆ ಬಲಿಯಾಗಿವೆ.

ಹೌದು…ಕಳೆದ ರಾತ್ರಿ ನದಿ ಹರಳಹಳ್ಳಿ ಹಾಗೂ ಗುತ್ತೂರು ಗ್ರಾಮದ ಮಧ್ಯೆ ಹರಿಯುತ್ತಿರುವ ತುಂಗಭದ್ರ ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಎರಡು ಮುಗ್ಧ ಬಾಲಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ನದಿ ಹರಳಹಳ್ಳಿ ಗ್ರಾಮದ ಬಸವರಾಜ್ (12) ಹಾಗೂ ನಾಗರಾಜ್ (10) ವರ್ಷದ ಬಾಲಕರಿಬ್ಬರು ತುಂಗಭದ್ರ ನದಿ ಮಧ್ಯದಲ್ಲಿ ಇರುವ ನೀರು ತುಂಬಿದ ಗುಂಡಿಯಲ್ಲಿ ಈಜು ಬಾರದೆ ಸಾವನ್ನಪ್ಪಿದ್ದಾರೆ. ಇವರು ನದಿ ಅರಳಹಳ್ಳಿ ಗ್ರಾಮದ ಮಂಜಪ್ಪ ಎಂಬುವರ ಮಕ್ಕಳು ಎಂದು ಗುರುತಿಸಲಾಗಿದೆ.

ಈ ಇಬ್ಬರು ಬಾಲಕರು ನಿನ್ನ ದಿನ ಮಧ್ಯಾಹ್ನ 12:00 ಸಮಯದಲ್ಲಿ ನದಿಯ ಕಡೆ ಹೋಗಿದ್ದಾರೆ. ಅಲ್ಲದೇ ಬೇಸಿಗೆ ಎಂದು ಈಜಾಡಲು ನದಿಗೆ ಇಳಿದಿದ್ದಾರೆ. ಆದರೆ ನದಿಯ ಮಧ್ಯದಲ್ಲಿ ಇವರಿಗೆ ಅರಿವಿಲ್ಲದ ದೊಡ್ಡ ದೊಡ್ಡ ಗಾತ್ರದ ಗುಂಡಿಗಳಿದ್ದು ಅವು ನೀರು ತುಂಬಿಕೊಂಡ ಪರಿಣಾಮ ಈ ಮಕ್ಕಳ ಅರಿವಿಗೆ ಗುಂಡಿ ಇರುವುದು ಕಂಡುಬಂದಿಲ್ಲ.‌ ಪರಿಣಾಮ ಗುಂಡಿಯಲ್ಲಿ ಮಕ್ಕಳು ಈಜಾಡಿ ಮೇಲೆ ಬರಲು ಸಾಧ್ಯವಾಗದೆ ಅಲ್ಲೇ ಮೃತಪಟ್ಟಿದ್ದಾರೆ.

ಅಕ್ರಮ ಮರಳು ಸಾಗಣೆ ತಡೆಯಲು ದಾವಣಗೆರೆ ಗಣಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ

ದಾವಣಗೆರೆ ಜಿಲ್ಲೆಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಅಮಾಯಕ ಜೀವಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ .ಅವರಿಗೆ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವಗಳೇಂದರೇ ಡೋಂಟ್ ಕೇರ್, ಇವರಿಗೆ ಸಾವಿನ ದಾಹ ನೀಗಿದಂತೆ ಕಾಣುತ್ತಿಲ್ಲ. ಇವರಿಗೆ ಇನ್ನೆಷ್ಟು ಅಮಾಯಕ ಜನರ ಜೀವಗಳು ಬೇಕಾಗಿದೆ.

ಇಲಾಖೆಯ ರೂಮಿನಲ್ಲಿ ಕುಳಿತುಕೊಳ್ಳುವ ದಪ್ಪ ಚರ್ಮದ ಮಂದ ಬುದ್ಧಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅವರು ಕ್ರಮ ಕೈಗೊಂಡಿದ್ದರೇ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೈನ್ಯ ಜಿಲ್ಲಾಧ್ಯಕ್ಷರಾದ ಮಾಕನೂರು ಹೀರಣ್ಣ ಅವರು ನಮ್ಮ ಮಾಧ್ಯಮದೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.

ಭೂ ಮತ್ತು ಗಣಿ ಇಲಾಖೆಯವರ ಬೇಜವಾಬ್ದಾರಿತನದಿಂದ ಈ ಸಾವುಗಳು ಸಂಭವಿಸಿದೆ. ಈ ಸಾವಿನ ನೇರ ಹೊಣೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಹೊತ್ತುಕೊಳ್ಳಬೇಕು. ಅವರ ನಿರ್ಲಕ್ಷವೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಕೂಡಲೆ ನೊಂದ ಕುಟುಂಬದವರಿಗೆ ಸರ್ಕಾರ ಪರಿಹಾರವನ್ನು ಒದಗಿಸಬೇಕು ಹಾಗೂ ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು, ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರುತ್ತಿಲ್ಲ ಎಂಬುದು ಈ ನದಿ ದಡದಲ್ಲಿರುವ ಗುಂಡಿಗಳೇ ಸಾಕ್ಷಿಯಾಗಿ ಹೇಳುತ್ತಿವೆ. ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿದ್ದರೆ ತುಂಗಭದ್ರಾ ನದಿಯ ನೈಸರ್ಗಿಕ ಸೌಂದರ್ಯ ಹಾಳಾಗುತ್ತಿರಲಿಲ್ಲ.

ನದಿಯ ಮಧ್ಯ ಭಾಗದಲ್ಲಿ ಬೃಹತ್ ಗಾತ್ರದ ಗುಂಡಿಗಳು ಸೃಷ್ಟಿಯಾಗುತ್ತಿರಲಿಲ್ಲ. ಒಮ್ಮೆ ಇಲ್ಲಿ ಕಣ್ಣಾಯಿಸಿದರೆ ಬಳ್ಳಾರಿ ಗಣಿಗಾರಿಕೆಯನ್ನ ಮೀರಿಸುವಂತಿದೆ ಈ ಪ್ರದೇಶ. ಇದಕ್ಕೆಲ್ಲಾ ಕುಮ್ಮಕ್ಕು ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಎಂದು ನದಿ ಹರಳಹಳ್ಳಿ ಗ್ರಾಮದ ಶಿವಕುಮಾರ್ ಅವರು ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದಿಚೆಗೆ ಭೂ ಮತ್ತು ಗಣಿ ಇಲಾಖೆಯ ಬೇಜವಾಬ್ದಾರಿತನದಿಂದ 5 ಸಾವುಗಳು ಸಂಭವಿಸಿದಂತೆ. ಇವರಿಗೆ ಅಮಾಯಕ ಜೀವಿಗಳ ಸಾವಿನ ದಾಹ ತೀರಿದಂತೆ ಕಾಣುತ್ತಿಲ್ಲ .ಇವರಿಗೆ ಇನ್ನೆಷ್ಟು ಬಲಿಗಳು ಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳೇ ಮುಗ್ಧ ಮಕ್ಕಳ ಸಾವಿನ ಹೊಣೆಯನ್ನ ಹೊತ್ತು ತಮ್ಮ ಕುರ್ಚಿಗೆ ಅಂಟಿಕೊಳ್ಳದೆ ಕರ್ತವ್ಯದಿಂದ ನಿರ್ಗಮಿಸಿ. ನಿಮ್ಮ ಕೈಯಲ್ಲಿ ಇಲಾಖೆಯನ್ನು ನಡಿಸುವ ನೈತಿಕತೆ ನಿಮಗಿಲ್ಲ. ಕೂಡಲೇ ಕರ್ತವ್ಯದಿಂದ ನಿರ್ಗಮಿಸಿ. ನಿಮ್ಮಿಂದ ಭೂತಾಯಿಯ ಒಡಲು ದಿನದಿಂದ ದಿನಕ್ಕೆ ಬಸಿಯುತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಭೂ ಮತ್ತು ನದಿಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಅಮಾಯಕ ಜೀವಿಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಕೂಡಲೇ ನೀವು ಈ ಸಾವಿನ ಜವಾಬ್ದಾರಿಯನ್ನ ಹೊತ್ತು ನೊಂದ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿ ಇಲ್ಲದಿದ್ದರೆ ಕರ್ತವ್ಯದಿಂದ ನಿರ್ಗಮಿಸಿ ಎನ್ನುತ್ತಾರೆ ಸಾರ್ವಜನಿಕರು.

ಪ್ರತಿ ಬಾರಿಯೂ ಮಾಧ್ಯಮದವರು ಅಕ್ರಮ ಕಲ್ಲು, ಮಣ್ಣು, ಮರಳು ಗಣಿಗಾರಿಕೆಯಿಂದ ಮುಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಅಮಾಯಕ ಜೀವಿಗಳನ್ನು ಬಲಿಪಡಿಸುತ್ತಿದ್ದಾರೆ. ನಿಜವಾಗಿಯೂ ಮಕ್ಕಳ ಸಾವಿನ ದೃಶ್ಯವನ್ನು ನೋಡಿದರೆ ಎಂತವರಿಗಾದರೂ ಕರುಳು ಚುರ್ ಎನ್ನುವುದಂತು ಸತ್ಯ..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!