ಕೃಷ್ಣಮೃಗದ ಕೊಂಬು – ಚರ್ಮ ಮಾರಾಟ: ಚನ್ನಗಿರಿ ಸಿಐಡಿ ಪೊಲೀಸ್ ರಿಂದ ಓರ್ವನ ಬಂಧನ

ದಾವಣಗೆರೆ: ಅಕ್ರಮವಾಗಿ ಕೃಷ್ಣ ಮೃಗದ ಕೊಂಬು ಹಾಗೂ ಚರ್ಮವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿಯ ಗರಗ ಕ್ರಾಸ್ ನಂದಿ ಹೋಟೆಲ್ ಹತ್ತಿರ ಮೇ 18ರಂದು ಆರೋಪಿ ಮಲ್ಲಪ್ಪ ಮಾಂಡಾಲಿ, ಪರವಾನಗಿ ಇಲ್ಲದೆ 2 ಕೃಷ್ಣ ಮೃಗದ ಕೊಂಬು ಹಾಗೂ 3 ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ.ಈ ವೇಳೆ ದಾಳಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಂಬು ಹಾಗೂ ಚರ್ಮವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪಿಎಸ್‌ಐ ಮೇಘರಾಜ್ ಎಂ.ಪಿ. ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಪ್ರಕಾಶ್ ಟಿಸಿ., ರವಿಕುಮಾರ್, ರಾಘವೇಂದ್ರ, ಶಿಲಿಂಗ್, ರಿಜ್ವಾನ್, ಅಹಮದ್ ಗುಬ್ಬಿ ಭಾಗವಹಿಸಿದ್ದರು.