ಹಬ್ಬ ಆಚರಿಸಿದಂತೆ ಪ್ರಜಾಪ್ರಭುತ್ವದ ಹಬ್ಬ ಆಚರಿಸಿ, ಮತದಾನ ಮಾಡಿ: ಬಸವಪ್ರಭು ಶ್ರೀಗಳು

ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿರಕ್ತ ಮಠದ ಪೀಠಾಧ್ಯಕ್ಷರೂ, ಚಿತ್ರದುರ್ಗ ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷರಾದ ಬಸವ ಪ್ರಭು ಸ್ವಾಮಿಗಳು ಕಾಯಿಪೇಟೆಯ ಜೀಜಾಮಾತಾ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಯಾವುದೇ ಹಬ್ಬ ಬಂದಾಗ ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಹೊಸ ಬಟ್ಟೆ ಹಾಕಿಕೊಂಡು, ಸಿಹಿ ಊಟ ಮಾಡಿ ಸಂಭ್ರಮ ಪಟ್ಟು ಸಂತೋಷದಿಂದ ಕಾಲ ಕಳೆಯುತ್ತಾರೆ. ಅದರಂತೆ ಮತದಾನ ಕೂಡ ಪ್ರಜಾಪ್ರಭುತ್ವದ ಹಬ್ಬ. ಸಂವಿಧಾನದ ಹಬ್ಬ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಪ್ಪದೇ ತಮ್ಮ ಕ್ಷೇತ್ರದ ಮತಗಟ್ಟೆಗಳಿಗೆ ತರಳಿ ಮತದಾನ ಮಾಡಬೇಕೆಂದರು.
ಸಂಭ್ರಮದಿಂದ ನಾವೆಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂತಸದಿಂದ ಆಚರಿಸಬೇಕು. ಪ್ರತಿಯೊಬ್ಬರು ತಪ್ಪದೇ ಮತದಾನ ಮಡಬೇಕು. ಹಬ್ಬದಂತೆ ಆಚರಿಸಿದಾಗ ಮಾತ್ರ ಮತದಾನದ ಹಬ್ಬ ಕೂಡ ಯಶಸ್ಸು ಕಾಣುತ್ತದೆ. ಅಲ್ಲದೇ ನಿಮಗೆ ಇಷ್ಟವಾದ ನಾಯಕನನ್ನು ಆಚರಿಸಲು ನಿಮಗೆ ಸ್ವಾತಂತ್ರ ಇರುತ್ತದೆ ಎಂದರು.
ಜನಪರ, ಬಡವರ ಪರವಾಗಿ ಕೆಲಸ ಮಾಡುವ ಉತ್ತಮ ನಾಯಕರ ಪರವಾಗಿ ತಪ್ಪದೇ ಮತದಾನ ಮಾಡಿ. ಮತದಾನ ಮಾಡುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಲು ಸಾಧ್ಯ. ಆದ್ದರಿಂದ ಯಾವುದೇ ಕಾರಣಕ್ಕೂ ಮತದಾನದ ಅವಕಾಶದಿಂದ ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತಿದೆ. ದೇಶದ ಜನಸಂಖ್ಯೆಗೆ, ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಮತದಾನ ಆಗಿಲ್ಲ. ಪ್ರತಿ ಚುನಾವಣೆಯಲ್ಲಿ ಕೇವಲ ಶೇ.50ರಿಂದ 60ರಷ್ಟು ಮತದಾನ ಆಗುತ್ತಿದೆ. ಕಾರಣ ಈ ಬಾರಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಶೇ.90ರಷ್ಟು ಮತದಾನ ಮಾಡಿ ದಾಖಲೆ ನಿರ್ಮಿಸಬೇಕೆಂದರು ಕರೆ ನೀಡಿದರು.