ಶಾಸಕರೇ ನೀವು ದೊಡ್ಡವರ ಬಗ್ಗೆ ಗೌರವದಿಂದ ನಡೆದುಕೊಳ್ಳುವುದನ್ನ ಮೊದಲು ಕಲಿಯಿರಿ. ಅದನ್ನ ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆದು ನೀವೇನೂ ದೊಡ್ಡವರಾಗುವುದಿಲ್ಲ. ಏಕೆಂದರೆ, ಹೈಕಮಾಂಡ್‌ಗೆ ಎಸ್.ಎಸ್ ಕುಟುಂಬದವರು ಪಕ್ಷಕ್ಕೆ ಎಷ್ಟು ಸೇವೆ ಸಲ್ಲಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ನೀವು ಮೊದಲು ಕ್ಷೇತ್ರದ ಜನರ ಫೋನ್ ಎತ್ತಿ ಸಮಸ್ಯೆಗಳಿಗೆ ಸ್ಪಂದಿಸುವುದನ್ನ ಕಲಿಯಿರಿ. ಅದನ್ನ ಬಿಟ್ಟು 4 ದಿನ ಬೆಂಗಳೂರು 2 ದಿನ ಟ್ರಿಪ್ ಅಂತಾ ಓಡಾಡುವುದನ್ನ ನಿಲ್ಲಿಸಿ 24*7 ಕ್ಷೇತ್ರದ ಜನರ ಜೊತೆ ಇರುವುದನ್ನ ಕಲಿಯಿರಿ. ಸಚಿವರ ಜೊತೆ ಮುಕ್ತವಾಗಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಿ, ಚುನಾವಣೆಯ ಸಮಯದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಮಾತನ್ನ ಉಳಿಸಿಕೊಳ್ಳಿ. ಅದನ್ನ ಬಿಟ್ಟು ಸಚಿವರಾದ ಮಲ್ಲಣ್ಣನವರ ಬಗ್ಗೆ ಹಗರುವಾಗಿ ಮಾತನಾಡಿದರೆ ನಾನು ಸಹಿಸುವುದಿಲ್ಲವೆಂದು ಸಹೋದರ ಶಿವಗಂಗಾ ಶ್ರೀನಿವಾಸ್ ಶಾಸಕರಿಗೆ ಖಡಕ್ ಎಚ್ಚರಕೆ ನೀಡಿದ್ದಾರೆ.
ಶಾಸಕ ಶಿವಗಂಗಾ ಬಸವರಾಜ್ ಅವರೇ ನೀವು ರಾಜಕೀಯಕ್ಕೆ ಎಂಟ್ರಿ ಕೊಡಲಿಕ್ಕೆ ನಾನು ಕಾರಣ ಎನ್ನುವುದನ್ನ ಮರೆಯಬೇಡಿ. ಈ ಹಿಂದೆ ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್ ತಂದವರು ಯಾರು ? ನಾನು ಇದೇ ನಮ್ಮ ಸಚಿವರಾದ ಎಸ್.ಎಸ್. ಮಲ್ಲಣ್ಣನವರಿಗೆ ಅಂಗಲಾಚಿ ನಿಮಗೆ ಟಿಕೆಟ್ ಕೊಡಿಸಿದ್ದೆ. ನಿಮ್ಮ ಗೆಲುವಿಗೆ ಸಚಿವರು ಹಾಗು ನಾನು ಕೂಡಾ ಶ್ರಮ ಪಟ್ಟಿದ್ದೇನೆ. ಇದನ್ನೆಲ್ಲಾ ತಾವು ಮರೆತು ಶಾಸಕರಾದ ನಂತರ ಉಸ್ತುವಾರಿ ಸಚಿವರ ಬಗ್ಗೆ ಹಗರುವಾಗಿ ಮಾತನಾಡುತ್ತಿದ್ದೀರಿ. ಈ ಹಿಂದೆಯೂ ನೀವು ನಮ್ಮ ಮಲ್ಲಣ್ಣನವರ ಬಗ್ಗೆ ಹಗರುವಾಗಿ ಮಾತನಾಡಿದ್ದಿರಿ. ಆಗಲೇ ನಾನು ನಿಮಗೆ ಎಚ್ಚರಿಕೆ ಮಾತುಗಳನ್ನ ಹೇಳಿದ್ದೆ.
ನಮ್ಮ ಮಲ್ಲಣ್ಣನವರು ನಿಮ್ಮ ತಪ್ಪನ್ನ ಕ್ಷಮಿಸಿದ್ದರು. ಆದರೆ ನೀವು ಯಾರದ್ದೋ ಕುಮ್ಮಕ್ಕಿನಿಂದ ಪದೇ ಪದೇ ಸಚಿವರ ವಿರುದ್ಧ ಮಾತನಾಡಿ ನಮ್ಮ ಅವರ ನಡುವಿನ ಸಹೋದರ ಬಾಂಧವ್ಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದೀರಿ. ಇದು ಸರಿಯಲ್ಲ ಇನ್ನು ಮುಂದೆಯಾದರೂ ತಮ್ಮ ವರ್ತನೆಯನ್ನು ಬದಲಿಸಿಕೊಂಡು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.