ಕಲಾಸಕ್ತರಿಗೆ ಮುದ ನೀಡಿದ `ಚಿತ್ರಸಂತೆ’

ಕಲಾಸಕ್ತರಿಗೆ ಮುದ ನೀಡಿದ `ಚಿತ್ರಸಂತೆ'
ದಾವಣಗೆರೆ: ದಾವಣಗೆರೆ ಚಿತ್ರಕಲಾ ಪರಿಷತ್ ವತಿಯಿಂದ ಭಾನುವಾರ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಆಯೋಜಿಸಲಾಗಿದ್ದ ಚಿತ್ರಸಂತೆಗೆ ಉತ್ತಮ ಸ್ಪಂದನೆ ದೊರೆಯಿತು.
ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳು ಹೊರ ರಾಜ್ಯಗಳಿಂದ ಸುಮಾರು 130ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರು. ಕಲಾಸಕ್ತರಿಗೆ ಚಿತ್ರಸಂತೆ ಮುದ ನೀಡಿತು.
ಪ್ರಕೃತಿ, ರೈತಾಪಿ ವರ್ಗ, ರಾಜಕಾರಣಿಗಳು, ದೇವಾಲಯಗಳು ಹೀಗೆ ನಾನಾ ಬಗೆಯ ಚಿತ್ರಗಳು ಕಲಾವಿದನ ಕುಂಚದಲ್ಲಿ ಅರಳಿ ಇಂದು ಪ್ರದರ್ಶನಕ್ಕಿದ್ದವು. ನೂರಾರು ಜನರು ಆಗಮಿಸಿ ಚಿತ್ರಸಂತೆಯ ಸವಿ ಉಂಡರು.
ಚಿತ್ರಸಂತೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿ, ಕಲಾವಿದರು ಹಾಗೂ ಜನರ ನಡುವಿನ ಅಂತರ ಕಡಿಮೆ ಮಾಡಲು ಚಿತ್ರಸಂತೆ ಪರಿಣಾಮಕಾರಿಯಾಗಿದೆ. ಅಜಯ್ ಕುಮಾರ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.
ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ವಿಶ್ವಚೇತನ ಸಂಸ್ಥೆ ಸಂಸ್ಥಾಪಕಿ ವಿಜಯಲಕ್ಷ್ಮಿ ವೀರಮಾಚಿನೇನಿ, ಚಿತ್ರಸಂತ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್, ಚಿತ್ರಕಲಾ ಪರಿಷತ್‌ನ ರವಿ ಹುದ್ದಾರ್, ಸದಾನಂದ ಹೆಗಡೆ, ವಿಜಯ ಜಾಧವ್, ಗಣೇಶ್ ಆಚಾರ್, ಡಿ.ಶೇಷಾಚಲ, ಶಾಂತಯ್ಯ ಪರಡಿಮಠ, ಬಿಇಒ ದಾರುಕೇಶ್, ಈಶ್ವರಸಿಂಗ್ ಕವಿತಾಳ, ಬಾಡಿ ರಾಕರ್ಸ್ ಜಿಮ್‌ನ ಜೀವನ್ ಇತರರು ಈ ಸಂದರ್ಭದಲ್ಲಿದ್ದರು.