ಜಾತ್ರೆ ಬಲೂನ್‌ಗೆ ಗಾಳಿ ಹಾಕುವಾಗ ಸಿಂಡರ್ ಸ್ಫೋಟ-4 ಸಾವು
ಪಶ್ಚಿಮ ಬಂಗಾಳ : ಜಾತ್ರೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಬಲೂನ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬಂತ್ರಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹಳ್ಳಿಯಲ್ಲಿ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಬಲೂನುಗಳಿಗೆ ಗಾಳಿ ತುಂಬಿ ಮಾರಾಟ ಮಾಡಲಾಗುತ್ತಿತ್ತು. ಆಗ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಸನಿಹದಲ್ಲಿದ್ದ ಐವರು ಗಾಯಗೊಂಡಿದ್ದಾರೆ.
ಮೃತರನ್ನು ಸಚಿನ್ ಮೊಲ್ಲಾ (13), ಕುತುಬುದ್ದೀನ್ ಮಿಸ್ತ್ರೀ (35), ಅಬಿರ್ ಘಜಿ (8) ಮತ್ತು ಬಲೂನ್ ವ್ಯಾಪಾರಿ, ಮುಚಿರಾಮ್ ಮೊಂಡಲ್ (35) ಎಂದು ಗುರುತಿಸಲಾಗಿದೆ.