ಪೌರ ಕಾರ್ಮಿಕರಿಗೆ ಸ್ಟೀಲ್ ಬಿಂದಿಗೆ ನೀಡುವ ಮೂಲಕ ದಸರಾ ಹಬ್ಬದ ಶುಭಾಶಯ ತಿಳಿಸಿದ ಪಾಮೇನಹಳ್ಳಿ ನಾಗರಾಜ್.

ದಾವಣಗೆರೆ :ಪ್ರತಿದಿನ ವಾರ್ಡ್ ನಲ್ಲಿ ಸ್ವಚ್ಛತಾ ಕೆಲಸ ಮಾಡುವ ಪೌರಕಾರ್ಮಿಕ ನೌಕರರಿಗೆ ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಸ್ಟೀಲ್ ಬಿಂದಿಗೆ ನೀಡುವ ಮೂಲಕ ವಿಶೇಷವಾಗಿ ದಸರಾ ಹಬ್ಬದ ಶುಭಾಶಯ ಕೋರಿದರು.
31 ಮತ್ತು 41 ನೇ ವಾರ್ಡಿನ 20 ಪೌರ ಕಾರ್ಮಿಕರಿಗೆ ಇಂದು ಬೆಳಗ್ಗೆ ಸ್ಟೀಲ್ ಬಿಂದಿಗೆ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಎರಡು ವಾರ್ಡಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಮ್ಮ ಕೆಲಸವನ್ನು ಶ್ಲಾಘಿಸಿ ಗೌರವಿಸಿದ ಪಾಲಿಕೆ ಸದಸ್ಯರಿಗೆ ಪೌರ ಕಾರ್ಮಿಕರು ಧನ್ಯವಾದ ಅರ್ಪಿಸಿದರು.

 
                         
                       
                       
                       
                       
                       
                       
                      