ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ.! ಮನವಿ ಸ್ವೀಕರಿಸಲು ನಕಾರ.!

ದಾವಣಗೆರೆ : ಜನರ ತೆರಿಗೆಯಿಂದ ನಡೆಯುವ ಸರ್ಕಾರದ ಸಚಿವರು, ಮುಖ್ಯಮಂತ್ರಿಗಳು ತಮಗಿಷ್ಟ ಬಂದ0ತೆ ಸರ್ಕಾರದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಮಂತ್ರಿಗಳು ಜನರ ಸಮಸ್ಯೆ ಕೇಳುವಲ್ಲಿ ರೆಡಿ ಇಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ತಮ್ಮ ತಾವು ದುಡಿದ ಸ್ವಂತ ಹಣ, ಕಾರು ಇತ್ಯಾದಿ ಖರ್ಚುವೆಚ್ಚಗಳನ್ನು ಭರಿಸಬೇಕಾದ ಇವರು ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಇಂದು ದಾವಣಗೆರೆ ನಗರಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದು, ಅವರು ಬಂದಿದ್ದು, ಅವರು ದುಡಿದ ಹಣ ಮತ್ತು ಕಾರಿನಲ್ಲಲ್ಲ, ಬದಲಿಗೆ ಸರ್ಕಾರದ ವಾಹನದಲ್ಲಿ ಖಾಸಗಿ ಕಾರ್ಯಕ್ರಮ ಆಗಮಿಸಿದ್ದರು. ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಖರ್ಚು ಕಡಿಮೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಖಾಸಗಿ ಕಾರ್ಯಕ್ರಮಕ್ಕೆ ಬರಲು ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ.

ದಾವಣಗೆರೆ ನಗರದ ಎಸ್.ಎಸ್. ಮಹಲ್ ನಲ್ಲಿ ನಡೆದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮೊಮ್ಮಗಳ ಮದುವೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದ್ದರು. ಅದೂ ಸರ್ಕಾರಿ ವಾಹನದಲ್ಲಿ. ಜೀರೋ ಟ್ರಾಫಿಕ್ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದ ಇವರು ಮದುವೆ ಮನೆಯ ತನಕ ಜೀರೋ ಟ್ರಾಫಿಕ್ ನಲ್ಲೇ ಬಂದಿದ್ದು, ಕೆಲಹೊತ್ತು ಟ್ರಾಫಿಕ್ ಜಾಮ್ ಕೂಡಾ ಆಗಿತ್ತು. ಇದರಿಂದ ಸಾಮಾನ್ಯವಾಗಿ ತುರ್ತಾಗಿ ಆಸ್ಪತ್ರೆ, ಕೆಲಸ ಇತ್ಯಾದಿ ಕಡೆ ಹೋಗಬೇಕಾದ ಸಾರ್ವಜನಿಕರಿಗೆ ತೊಂದರೆಯು0ಟಾಗಿತ್ತು.

ಮುಖ್ಯಮ0ತ್ರಿಗಳಷ್ಟೇ ಅಲ್ಲದೆ ಇವರ ಹಿಂದೆ ಹಿಂಬಾಲಕರು, ಅಧಿಕಾರಿಗಳು, ಸಚಿವರು ಕೂಡ ಬಂದಿದ್ದು, ಅವರು ಕೂಡ ಸರಕಾರಿ ವಾಹನಗಳನ್ನೇ ಬಳಸಿದರು. ಮುಖ್ಯಮಂತ್ರಿಗಳ ಬಳಿ ತಮ್ಮ ಕಷ್ಟ ಬಗೆಹರಿಸಿಕೊಳ್ಳೋಣ ಎಂದು ಆಗಮಿಸಿದ್ದ ಅಸಾಮಾನ್ಯ ಪ್ರಜೆಗಳಿಗೆ ಪೊಲೀಸರು ಮುಖ್ಯಮಂತ್ರಿಗಳ ಬಳಿ ಬಿಡಲಿಲ್ಲ. ಅವರು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ಮನವಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದು, ಅಸಾಮಾನ್ಯ ಪ್ರಜೆಗಳು ಮರು ಮಾತಾಡದೆ ಹಿಂತಿರುಗಿದ ಘಟನೆ ನಡೆಯಿತು.

ಒಂದೆಡೆ ತೈಲ ಬೆಲೆ, ಸಿಲಿಂಡರ್ ಬೆಲೆ ಜಾಸ್ತಿಯಾಗಿ ಜನ ಸಂಕಷ್ಟದಲ್ಲಿದ್ದರೆ ರಾಜಕೀಯ ಮುಖಂಡರು ತಮ್ಮ ಸ್ವಂತ ವಾಹನ ಬಳಸದೆ ಜನರ ಹಣದಿಂದ ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಓಡಾಡುತ್ತಿದ್ದಾರೆ. ಅಂಗನವಾಡಿ, ಪೌರ ಕಾರ್ಮಿಕರು, ಗುತ್ತಿಗೆದಾರರು ವೇತನ ಹೆಚ್ಚಳಕ್ಕಾಗಿ ಮನವಿ ಮಾಡಿದರೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳುವ ಇವರು ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನ ಬಳಸುವುದು ಎಷ್ಟು ಸಮಂಜಸ.?

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!