ಮುಂದಿನ ಚುನಾವಣೆಗೆ ಸಾಮೂಹಿಕ ನಾಯಕತ್ವ! ಅಧಿವೇಶನದ ಬಳಿಕ ಸಾಮೂಹಿಕ ರಾಜ್ಯಪ್ರವಾಸ: ಕುತೂಹಲ ಮೂಡಿಸಿದ ಯಡಿಯೂರಪ್ಪರ ಹೇಳಿಕೆ! ಎಲ್ಲಿಂದಲೋ ಬಂದವನು ನಾನು ಎನ್ನುತ್ತಾ ಶಿಕಾರಿಪುರದ ಜನತೆಗೆ ಬಿಎಸ್​ವೈ ಹೇಳಿದ್ದೇನು?

ಶಿಕಾರಿಪುರದಲ್ಲಿ ನಡೆದ ರೈತಾಭಿಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಂದು ಬೆಳಗ್ಗೆ ಅಡುಗಂಟಿಯಲ್ಲಿ ತುಂಗಭದ್ರಾ ನೀರು ಹರಿಯುತ್ತಿರುವುದು ನನ್ನ ಜೀವನದಲ್ಲಿ ಅತ್ಯಂತ ತೃಪ್ತಿ, ಸಂತಸ ತಂದಿರುವ ದಿನ ಎಂದರು.

 ಕೆರೆಗಳನ್ನು ತುಂಬಿಸಿದರೆ ಸಾಕು ಅಂತರ್ಜಲ ಹೆಚ್ಚುತ್ತದೆ. ಇದರಿಂದ ರೈತರು ಎರಡು ಬೆಳೆಯನ್ನು ಸುಲಭವಾಗಿ ಬೆಳೆಯಬಹುದು. ಜೊತೆಗೆ ಬೋರ್ ವೆಲ್ ಕೊರೆಯುವುದು ತಪ್ಪಲಿದೆ. ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದ್ರು.

ಎಲ್ಲಿಂದಲೋ ಬಂದ ನನ್ನನ್ನು ಶಿಕಾರಿಪುರದ ಜನ ಸಿಎಂ ಆಗುವವರೆಗೂ ಬೆಳೆಸಿದವರು. ಜನರ ಋಣವನ್ನು ಮುಂದಿನ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ.

ಶಿಕಾರಿಪುರ ತಾಲೂಕನ್ನು ಅಭಿವೃದ್ಧಿ ಹೊಂದಿದ ತಾಲೂಕನ್ನು ಮಾಡಿದ್ದೇವೆ. ಜೊತೆಗೆ ಇಡೀ ರಾಜ್ಯದ ಜನತೆ ಶಿಕಾರಿಪುರ ತಾಲೂಕು ನೀರಾವರಿಯಾಗಿದ್ದನ್ನು ನೋಡುತ್ತಿದ್ದಾರೆ. ನನ್ನ ಕೊನೆಯುಸಿರು ಇರುವವರೆಗೂ ಶಿಕಾರಿಪುರದ ಜನರ ಕಲ್ಯಾಣಕ್ಕಾಗಿ ಶಕ್ತಿ ಮೀರಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಬಜೆಟ್ ಅಧಿವೇಶನದ ಬಳಿಕ ಪ್ರತಿ ಜಿಲ್ಲೆಗೆ ಪ್ರವಾಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ. ಸಾಮೂಹಿಕ ನಾಯಕತ್ವದಲ್ಲಿ ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರೋಣ. ಬೊಮ್ಮಾಯಿ ಅವರು ಕೊಟ್ಟಿರುವ ಬಜೆಟ್ ಆಧಾರದ ಮೇಲೆ ಮತ್ತೆ ನಾವು ಅಧಿಕಾರಕ್ಕೆ ಬರೋಣ ಎಂದರು.

ತುಂಗಭದ್ರಾ ನದಿಯಿಂದ 38 ಕಿಲೋಮೀಟರ್ ಪೈಪ್ ಲೈನ್ ಮಾಡಿ 250 ಕೆರೆಗಳನ್ನು ತುಂಬಿಸುವ ಯೋಜನೆ ಮಾಡಿದ್ದೇವೆ. ಇಂಥ ಯೋಜನೆ ರಾಜ್ಯದ ಯಾವ ಭಾಗದಲ್ಲಿಯೂ ಆಗಲು ಸಾಧ್ಯವಿಲ್ಲ. ನಾನು ಯೋಜನೆಗೆ ಹಣ ನೀಡಿರಬಹುದು. ಆದರೆ ಹಗಲು ರಾತ್ರಿ ಕೆಲಸ ಮಾಡಿಸಿದ್ದು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮುಖಂಡರು ಎಂದರು.

 ಶಿಕಾರಿಪುರಕ್ಕೆ ತುಂಗಭದ್ರೆಯ ನೀರು! ಭಾಗೀನ ಅರ್ಪಿಸಿ ಬಿಎಸ್ವೈ ಹೇಳಿದ್ದೇನು? ಮೋದಿ ಗಮನ ಸೆಳೆವ ಯೋಜನೆ ಏನಿದು!?

 

Leave a Reply

Your email address will not be published. Required fields are marked *

error: Content is protected !!