ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡಿ ಆರ್ ಆರ್ ಕಾಲೇಜು ಜಾಗದ ಸಮಸ್ಯೆ ಬಗೆಹರಿಸಿದ ಆಯುಕ್ತ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡಿ ಆರ್ ಆರ್ ಕಾಲೇಜು ಜಾಗದ ಸಮಸ್ಯೆ ಬಗೆಹರಿಸಿದ ಆಯುಕ್ತ

ದಾವಣಗೆರೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಪ್ರದೀಪ್ ಪಿ ರವರು ಭೇಟಿ ನೀಡಿದರು.

ಕಾಲೇಜಿಗೆ ಮಂಜೂರು ಆಗಿರುವ ನಿವೇಶನವಿರುವ ಡಿ ಆರ್ ಆರ್ ಪಾಲಿಟೆಕ್ನಿಕ್ ಕಾಲೇಜಿನ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು , ಕಾಲೇಜಿನ ಪ್ರಾಂಶುಪಾಲರಿಂದ ಹಾಗೂ ಅಧ್ಯಾಪಕರಿಂದ ಮಾಹಿತಿ ಪಡೆದರು , ಕಾಲೇಜಿಗೆ ಮಂಜೂರು ಆಗಿರುವ ನಿವೇಶನವನ್ನು ನೀಡುವಂತೆ ಡಿ ಆರ್ ಆರ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದರು .ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು , ನಿವೇಶನ ಸಮಸ್ಯೆಯನ್ನು ಬಗೆಹರಿಸಿದ ಮಾನ್ಯ ಆಯುಕ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!