ಯಶಸ್ಸಿನ ಕಿಲಿಕೈ ಆತ್ಮವಿಶ್ವಾಸ: ಪ್ರೊ. ಬಾಬು

ದಾವಣಗೆರೆ : ಪ್ರತಿಯೊಬ್ಬ ವ್ಯಕ್ತಿಯಾಗಲಿ ವಿದ್ಯಾರ್ಥಿಯಾಗಲಿ ತಾನು ಯಶಸ್ವಿಯಾಗಬೇಕಾದರೆ ತನ್ನಲ್ಲಿರುವ ಆತ್ಮವಿಶ್ವಾಸ ಪ್ರಮುಖ ಪಾತ್ರ ವಹಿಸುತ್ತದೆ ಆತ್ಮ ವಿಶ್ವಾಸವೇ ಗೆಲುವಿನ ಹಾದಿ ಹಾಗಾಗಿ ಆತ್ಮವಿಶ್ವಾಸ ಇದ್ದಲ್ಲಿ ಗೆಲುವು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಹಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ಭಾಷಣಕಾರ ಪ್ರೊ ವೆಂಕಟೇಶ್ ಬಾಬು ರವರು ಹೇಳಿದರು.


ಅವರು ಇಂದು ನಗರದ ಪಿಜೆ ಬಡಾವಣೆಯ ವಿನ್ನರ್ಸ್ ಕೆರಿಯರ್ ಅಕಾಡೆಮಿ ಯಲ್ಲಿ ಸಿಇಟಿ ನೀಟ್ ಜೇ ಇ ಇ ಪರೀಕ್ಷೆಗಳ ತರಬೇತಿಯಲ್ಲಿರುವ ವಿದ್ಯಾರ್ಥಿಗಲಿಗೆ ಆತ್ಮವಿಶ್ವಾಸವೇ ಗೆಲುವಿನ ದಾರಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡಿದ್ದರು.

ಯಾವುದೇ ಪರೀಕ್ಷೆಗಳಾಗಲಿ ಅಥವಾ ಕೆಲಸಗಳಲ್ಲಿ ಗುರಿ ಮುಟ್ಟಬೇಕೆಂದರೆ ಆತ್ಮವಿಶ್ವಾಸದಿಂದ ಕಾರ್ಯಪ್ರವೃತ್ತರಾದಾಗ ಯಶಸ್ಸು ಸಾಧ್ಯವಾಗುತ್ತದೆ ಆತ್ಮವಿಶ್ವಾಸ ಎಂಬುದು ಯಶಸ್ಸಿನ ಕೀಲಿ ಕೈ ಯಾಗಿ ಕೆಲಸ ಮಾಡುತ್ತದೆ ಆತ್ಮವಿಶ್ವಾಸ ಇದ್ದಲ್ಲಿ ಗೆಲುವು ಇರುತ್ತದೆ ಎಂಬುದು ಸತ್ಯ ಹಾಗಾಗಿ ಪ್ರತಿಯೊಬ್ಬರೂ ತಾವು ತಮ್ಮಲ್ಲಿರುವ ಕೀಳರಮೆಯನ್ನು ಬಿಟ್ಟು ಆತ್ಮವಿಶ್ವಾಸದಿಂದ ಪ್ರಯತ್ನ ಪಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರಾಯೋಕವಾಗಿ ಆತ್ಮವಿಶ್ವಾಸ ರೂಡಿಸಿಕೊಳ್ಳುವುದು ಹೇಗೆ ಕೇಳಿರಿಮೆಯಿಂದ ಹೊರಬರುವುದು ಹೇಗೆ ಎಂಬ ವಿಚಾರಗಳನ್ನು ತಿಳಿಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷರಾದ ಡಾ ಶಿವರಾಜ ಕಬ್ಬುರವರು ಮಾತನಾಡಿ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಸಲಹೆಗಳನ್ನು ಪಡೆದು ಅದನ್ನು ಅಳವಡಿಸಿಕೊಂಡಾಗ ನಿಮ್ಮ ಯಶಸ್ಸು ನಿಮ್ಮದಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಗುರುರಾಜ್ ಹಾಗೂ ಇತರ ಸಿಬ್ಬಂದಿಯವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!