congress; ಅನುದಾನ ವಿಚಾರ; ಕಾಂಗ್ರೆಸ್ ತಾರತಮ್ಯಕ್ಕೆ ಕಿಡಿಕಾರಿದ ಉಮಾ ಪ್ರಕಾಶ್

ದಾವಣಗೆರೆ, ಅ.30: ಬಿಜೆಪಿ ಸದಸ್ಯರ ವಾರ್ಡ್ ಎಂದು ತಾರತಮ್ಯ ಮಾಡಬೇಡಿ, ನಿಮಗೂ ಮತದಾರರಿದ್ದಾರೆ ಎಂದು ಕಾಂಗ್ರೆಸ್ (Congress) ತಾರತಮ್ಯಕ್ಕೆ ಉಮಾ ಪ್ರಕಾಶ್ ಕಿಡಿಕಾರಿದ್ದಾರೆ.

ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರವರ ಎದುರು, ಕಾಂಗ್ರೆಸ್ ಪಕ್ಷವು ವಾರ್ಡ್ ಗಳಿಗೆ ಅನುದಾನ ಹಂಚಿಕೆಯಲ್ಲಿ ಮಾಡಿರುವ ತಾರತಮ್ಯವನ್ನು ಹೇಳುವುದಾಗಿ ತಿಳಿಸಿದ್ದಾರೆ.

Siddaramaiah; ವಿಶ್ವ ಮಾನವ ಸಂಸ್ಕೃತಿಯನ್ನು ಬಂಟ ಸಮುದಾಯ ಆಚರಿಸುತ್ತಿದೆ: ಮುಖ್ಯಮಂತ್ರಿ

ಉಮಾ ಪ್ರಕಾಶ್ ಆರೋಪವೇನು?

ದಾವಣಗೆರೆ ಮಹಾನಗರ ಪಾಲಿಕೆಗೆ ಬಂದಿರುವ 15ನೇ ಹಣಕಾಸು ಯೋಜನೆಯಲ್ಲಿ ನಾನು ಪ್ರತಿನಿಧಿಸುತ್ತಿರುವ 32ನೇ ವಾರ್ಡಿಗೆ ರಸ್ತೆ ಕಾಮಗಾರಿ ಕೈಗೊಳ್ಳಲು ಕಡಿಮೆ ಅನುದಾನ ನೀಡಲಾಗಿದೆ. ಅತ್ಯಂತ ದೊಡ್ಡ ವಾರ್ಡ್ ಗಳಲ್ಲಿ ಒಂದಾಗಿರುವ 32ನೇ ವಾರ್ಡ್ಲ್ಲಿ ನೂರು ಕೋಟಿ ಕೆಲಸಗಳಷ್ಟು ಅಭಿವೃದ್ಧಿ ಕಾಮಗಾರಿಯಾಗಬೇಕಾಗಿದೆ. ಆದರೆ ಸದ್ಯ ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಅಧಿಕಾರದಲ್ಲಿ 32ನೇ ವಾರ್ಡ್ ಗೆ ಕೇವಲ 15 ಲಕ್ಷ ರೂಪಾಯಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದೆ. 32ನೇ ವಾರ್ಡ್ ಸೇರಿದಂತೆ ಸೇರಿದಂತೆ ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರು ಪ್ರತಿನಿಧಿಸುತ್ತಿರುವ ಒಂದೆರಡು ಮೂರು ವಾರ್ಡ್ಗಳು ಹೊರತುಪಡಿಸಿ ಉಳಿದಂತೆ ಬಿಜೆಪಿ ಸದಸ್ಯರ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಕಡಿಮೆ ಅನುದಾನ ನೀಡಿ ಬಿಜೆಪಿ ವಾರ್ಡ್ಗಳಿಗೆ ತಾರತಮ್ಯ ಮಾಡಲಾಗಿದೆ.

15ನೇ ಹಣಕಾಸು ಯೋಜನೆಯಲ್ಲಿ ಮಹಾನಗರ ಪಾಲಿಕೆ ಅಭಿವೃದ್ಧಿ ಕಾಮಗಾರಿಗಳಿಗೆ ವಾರ್ಡ್ವಾರು ಅನುದಾನವನ್ನು ನೀಡಿದ್ದು ಒಂದೆರಡು ವಾರ್ಡ್ಗಳನ್ನು ಬಿಟ್ಟರೆ ಮಹಾನಗರ ಪಾಲಿಕೆಯ 32 33, 39, 41, 42 ಹೀಗೆ ಇನ್ನು ಅನೇಕ ನಗರದ ಹೊರಭಾಗದ ವಾರ್ಡ್ ಗಳಲ್ಲಿ ಹೆಚ್ಚಿನ ಕಾಮಗಾರಿ ಅವಶ್ಯಕತೆ ಇರುತ್ತದೆ. ಉಚಿತ ಗ್ಯಾರಂಟಿಗಳಿಂದಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 32ನೇ ವಾರ್ಡ್ ಸಹ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಕೊಟ್ಟಿದೆ. ಕೇವಲ ಬಿಜೆಪಿ ಸದಸ್ಯರು ಪ್ರತಿನಿಧಿ ಪ್ರತಿನಿಧಿಸುವ ವಾರ್ಡ್ ಎಂಬ ಕಾರಣಕ್ಕೆ ವಾರ್ಡ್ ಗೆ ಹೆಚ್ಚಿನ ಅನುದಾನ ನೀಡಿಲ್ಲ.

bjp; ಬಿಜೆಪಿ ಸ್ವಂತ ಶಕ್ತಿ ಮೇಲೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ: ಶಾಸಕ

ಅಲ್ಲದೆ ಸುಮಾರು ಮೂರು ವರ್ಷಗಳಿಂದ 32ನೇ ವಾರ್ಡಿನ ರೈಲ್ವೆ ಟ್ರ್ಯಾಕ್ ಬಳಿ ಇರುವ ಅವರಿಗೆ ಸರ್ವೇ ನಂಬರ್ 2042 243- 244 ರಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ನಕಾಶೆ ಪ್ರಕಾರ ಬಯಲು ಜಾಗ ಬಿಟ್ಟಿದ್ದು ಸದರಿ ಬಯಲು ಜಾಗಕ್ಕೆ ಮಹಾನಗರ ಪಾಲಿಕೆಯಿಂದ 2017-18 ರ ಸಮಯದಲ್ಲಿ ಅಕ್ರಮ ಡೋರ್ ನಂಬರ್ ಗಳನ್ನು ನೀಡಿದ್ದು ಅವುಗಳನ್ನು ರದ್ದು ಪಡಿಸುವಂತೆ ಪ್ರತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು ಸಹ ಇದುವರೆಗೂ ರದ್ದುಪಡಿಸಲು ಕ್ರಮ ಕೈಗೊಂಡಿರುವುದಿಲ್ಲ. ಅದನ್ನು ಸಹ ಪ್ರಸ್ತಾಪಿಸಿ ಆದಷ್ಟು ಬೇಗ ಅಕ್ರಮ ಡೋರ್ ನಂಬರ್ ಗಳನ್ನು ರದ್ದುಪಡಿಸಿ ಮಹಾನಗರ ಪಾಲಿಕೆ ವಶಕ್ಕೆ ಪಡೆದುಕೊಂಡು ಬೇಲಿ ಹಾಕಿಸಿ ಸಾರ್ವಜನಿಕ ಉಪಯೋಗಕ್ಕೆ ಸದರಿ ಬಯಲು ಜಾಗವನ್ನು ಅಭಿವೃದ್ಧಿಪಡಿಸಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!