Consumer Rights: ಗ್ರಾಹಕರ ಹಕ್ಕುಗಳ ಅರಿವಿನ ಜೊತೆಗೆ ಮೋಸ ಹೋದಲ್ಲಿ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಲು ಸಲಹೆ

Untitled

ದಾವಣಗೆರೆ: (Consumer Rights) ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ತೊಂದರೆಗಳಾದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳಲ್ಲಿ ನಿಯಮಾನುಸಾರ ದೂರು ಸಲ್ಲಿಸಿ ಪರಿಹಾರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಹೇಳಿದರು.

ಸೋಮವಾರ(ಮಾ.24) ರಂದು ನಗರದ ಎಂಎಸ್‍ಬಿ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ವಿಶ್ವಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಗುಣಮಟ್ಟ ಮತ್ತು ನಿಖರ ಪ್ರಮಾಣವನ್ನು ಪರಿಶೀಲಿಸಿ ಖರೀದಿಸಲು ಹಾಗೂ ಪೆಟ್ರೋಲ್ ಬಂಕ್‍ಗಳಲ್ಲಿ ಲೋಪದೋಷಗಳಿದ್ದಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಮಹಾವೀರ ಮ.ಕರೆಣ್ಣವರ ಇವರು ಗ್ರಾಹಕ ಸಂರಕ್ಷಣಾ ಕಾಯಿದೆಯ ಬಗ್ಗೆ ತಿಳಿಸಿದರು.

ಸಂಪನ್ಮೂಲವ್ಯಕ್ತಿಯಾದ ಸಹಾಯಕ ಪ್ರಾಧ್ಯಾಪಕರಾದ ಡಾ.ವೇಂಕಟೇಶ್ ಬಾಬು ಈ ಸಾಲಿನ ಘೋಷ ವಾಕ್ಯವಾದ“ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ”ವಿಷಯದ ಕುರಿತು ದಿನನಿತ್ಯ ಖರೀದಿ ವಸ್ತುಗಳ ಉದಾಹರಣೆಗಳ ಸಮೇತ ಉಪನ್ಯಾಸ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ತ್ಯಾಗರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಶಿದ್ರಾಮ ಮಾರಿಹಾಳ, ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಹಿಳಾ ಸದಸ್ಯರಾದ ಬಿ.ವಿ.ಗೀತಾ, ಡಿ.ಸಿ.ಐ.ಸಿ ಪ್ರಾಂಶುಪಾಲರಾದ ಅನಿತಾ, ಪೆÇ.ಸಿ.ನೀಲಾಂಬಿಕಾ, ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕರಾದ ವಿಶ್ವನಾಥಗೌಡ, ಸಹಾಯಕ ನಿರ್ದೇಶಕರಾದ ಟಿ.ಶಿವಾಜಿ, ಆಹಾರ ನಿರೀಕ್ಷಕರಾದ ಮಂಜುನಾಥ.ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!