ಅಡುಗೆ ಸಿಲಿಂಡರ್ ದರ 50 ರೂ. ಹೆಚ್ಚಳ
ನವದೆಹಲಿ: ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂ.ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯು 1,105.50 ರೂ.ಗಳಿಗೆ ತಲುಪಿದೆ. ಸರಿಸುಮಾರು ಎಂಟು ತಿಂಗಳ ನಂತರದಲ್ಲಿ ಬೆಲೆ ಏರಿಕೆ ಆಗಿದೆ.
2022ರ ಜುಲೈ ನಂತರದಲ್ಲಿ ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಪರಿಷ್ಕರಣೆ ಆಗುತ್ತಿರುವುದು ಇದೇ ಮೊದಲು.
ಉಜ್ವಲಾ ಯೋಜನೆಯ ವ್ಯಾಪ್ತಿಯಲ್ಲಿ ಇಲ್ಲದ ಹೆಚ್ಚಿನ ಗ್ರಾಹಕರಿಗೆ ಈಗ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗುತ್ತಿಲ್ಲ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಡಿಯಲ್ಲಿ ಎಲ್‌ಪಿಜಿ ಸಂಪರ್ಕ ಪಡೆದವರಿಗೆ ಪ್ರತಿ ಸಿಲಿಂಡರ್‌ಗೆ ಕೇಂದ್ರದಿಂದ 200ರಷ್ಟು ಸಬ್ಸಿಡಿ ದೊರೆಯುತ್ತದೆ.
ವಾಣಿಜ್ಯ ಬಳಕೆಯ, 19 ಕೆ.ಜಿ. ತೂಕದ ಎಲ್‌ಪಿಜಿ ಬೆಲೆಯನ್ನು ತೈಲ ಮಾರಾಟ ಕಂಪನಿಗಳು ಸಿಲಿಂಡರ್‌ಗೆ 350.50ರಂತೆ ಹೆಚ್ಚಳ ಮಾಡಿವೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯು 2,190.50 ರೂ.ಗಳಿಗೆ ಏರಿಕೆಯಾಗಿದೆ.