ಶೀಘ್ರದಲ್ಲೇ 2 ರಿಂದ 18 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ.! ಶಿಫಾರಸ್ಸು ಮಾಡಿದ ಕೋವಿಡ್ ತಜ್ಞರ ಸಮಿತಿ

ನವದೆಹಲಿ: ಕೋವಿಡ್ ನಿಂದ ಮಕ್ಕಳನ್ನು ರಕ್ಷಿಸುವ ಸವಾಲು ಈಗ ಸರ್ಕಾರಗಳ ಕಣ್ಮುಂದಿದ್ದು, ಈಗ ತಜ್ಞರ ಸಮಿತಿ ಸಿಹಿ ಸುದ್ದಿಯೊಂದನ್ನು ತಿಳಿಸಿದೆ.!
ಹೌದು! ಇದೀಗ 2 ರಿಂದ 18 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ (covaxin Vaccine) ನೀಡಲು ಗ್ರೀನ್ ಸಿಗ್ನಲ್ ನೀಡಿದೆ.
ಕೊವೀಡ್ ನಿಂದಾಗಿ ಕಳೆದ ಎರಡು ವರ್ಷಗಳಿಂದ ಜನರು ದೈಹಿಕ ಮತ್ತು ಮಾನಸಿಕವಾಗಿ ಪಡಬಾರದ ಬಾಧೆ ಪಡುತ್ತಿದ್ದಾರೆ. ಮಾರ್ಗಸೂಚಿ ಅನ್ವಯವೇ ಸುರಕ್ಷತೆ ಅನುಸರಿಸಿ ಬದುಕು ನಡೆಸುವ ಅನಿವಾರ್ಯ ಈಗ ಜನರ ಮುಂದಿದೆ.
ಕಳೆದ ಜನವರಿಯಿಂದ ಕೋವಿಡ್ ನಿರೋಧಕ ಲಸಿಕೆ ಬಂದು ಜನರಿಗೆ ಒಂದಿಷ್ಟು ಮಾನಸಿಕವಾಗಿ ಧೈರ್ಯ ತುಂಬಿತು. ಶುರುವಾತಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ, ನಂತರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ, ಆನಂತರದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕಾಕರಣ ನಡೆಸಲಾಗುತ್ತಿದೆ.
ಆದರೆ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆ ಉಂಟಾಗಲಿದೆ ಎಂದು ತಜ್ಞರ ತಂಡ ಎಚ್ಚರಿಕೆ ನೀಡಿದ ಕಾರಣ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳಿಗೂ ಲಸಿಕೆ ನೀಡಲು ಅನುವು ಮಾಡಬೇಕೆಂದು ಹಲುಬುತ್ತಿದ್ದಾರೆ.
ಈ ನಡುವೆ ಕೋವಿಡ್ ತಜ್ಞರ ಸಮಿತಿಯೊಂದು ಸಿಹಿ ಸುದ್ದಿ ನೀಡಿದ್ದು, ಇದೀಗ 2 ರಿಂದ 18 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ (covaxin Vaccine) ನೀಡಲು ಗ್ರೀನ್ ಸಿಗ್ನಲ್ ನೀಡಿದೆ.
ಇದುವರೆಗೆ ಮಕ್ಕಳಿಗೆ ಕೊರೋನಾ ಲಸಿಕೆ ಬಂದಿರದೇ ಮಕ್ಕಳ ಪೋಷಕರಿಗೆ ಆತಂಕ ಸೃಷ್ಠಿಸಿತ್ತು. ಈ ಸಿಹಿ ಸುದ್ದಿಯಿಂದಾಗಿ ಪೋಷಕರ ಮುಖದಲ್ಲಿ ಹರುಷ ಮೂಡಿದೆ.