Cricket: ವರದಿಗಾರರ ಕೂಟದ ಪಿಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

IMG-20241221-WA0035

ದಾವಣಗೆರೆ: (Cricket) ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿವರ್ಷದಂತೆ ಆಯೋಜಿಸಿರುವ ಪಿಪಿಎಲ್-3 ಕ್ರಿಕೆಟ್ ಪಂದ್ಯಾವಳಿಯನ್ನು ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ. ಏಕಾಂತಪ್ಪ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಎಲ್ಲರೂ ನಮ್ಮ ಕೂಟದ ಸದಸ್ಯರುಗಳೇ ಇರುವುದರಿಂದ ಎಲ್ಲರೂ ಸಂತೋಷದಿAದ, ಸ್ಪರ್ಧಾತ್ಮಕವಾಗಿ ಆಟವನ್ನು ಆಡಿರಿ. ವೈಷಮ್ಯ ಬೇಡ ಜಿದ್ದಿನಿಂದ ಆಟವನ್ನು ಆಡಿರಿ. ಎಂದು ಶುಭ ಕೋರಿದರು.

ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು ಮಾತನಾಡಿ, ಈ ಕ್ರಿಕೆಟ್ ಅನ್ನುವುದು ಶಕ್ತಿ ಮತ್ತು ಯುಕ್ತಿಯ ಸಮ್ಮಿಲನದ ಆಟವಾಗಿದೆ. ಈ ಕಪ್‌ಗಳನ್ನು ನೋಡಿದರೆ ನಮಗೂ ಆಟ ಆಡಬೇಕು ಎನ್ನಿಸುತ್ತಿದೆ. ಕ್ರಿಕೆಟ್ ವಿಶ್ವಖ್ಯಾತಿಯನ್ನು ಪಡೆದಿದೆ. ನಮ್ಮ ವರದಿಗಾರರ ಕೂಟದಿಂದ ನಾಲ್ಕು ತಂಡಗಳು ಫ್ರಾಂಚೈಸಿಗಳನ್ನಾಗಿ ಮಾಡಿಕೊಂಡು ಆಟ ಆಡುತ್ತಿರುವುದು ಸಂತೋಷದ ವಿಷಯ. ಜಗಳ ಬೇಡ ಜಿದ್ದಿನಿಂದ ಆಟವನ್ನು ಆಡಿರಿ ಎಂದು ಶುಭ ಹಾರೈಸಿದರು.

ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ ಮಾತನಾಡಿ, ಇಲ್ಲಿ ಎಲ್ಲರೂ ಕೂಡಿ ಒಂದಾಗಿ ಕ್ರಿಕೆಟ್ ಆಡಲು ಸೇರಿದ್ದೀರಿ. ಇಂದಿನ ದಿನಗಳಲ್ಲಿ ಪರಸ್ಪರ ಹೊಂದಾಣಿಕೆಯಿAದ ಆಟವನ್ನು ಆಡುವುದು ಬಹಳ ಮುಖ್ಯವಾಗಿದೆ. ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಆಟವನ್ನು ಆಡಿರಿ. ಏನೇ ಕಷ್ಟ ಬಂದರೂ ಸಹಾ ಎಲ್ಲರೂ ಜೊತೆಯಲ್ಲಿ ಇರುತ್ತೇವೆ. ಎಲ್ಲರೂ ಕೂಡಾ ಸ್ಪರ್ಧಾ ಮನೋಭಾವದಿಂದ ಆಟವನ್ನು ಆಡಿರಿ ಎಂದು ಶುಭ ಕೋರಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಮ್ಮ ವರದಿಗಾರರ ಕೂಟದಿಂದ ಕ್ರಿಕೆಟ್ ಪಂದ್ಯಾವಳಿ  ಆಯೋಜಿಸಿಕೊಂಡು ಬಂದಿದ್ದೇವೆ. ಈ ಬಾರಿ ನಾಲ್ಕು ರಾಜಮನೆತನಗಳ ಹೆಸರು ಇರುವುದರಿಂದ ಕಿಚ್ಚು ಸ್ವಲ್ಪ ಜಾಸ್ತಿ ಇದೆ. ನಾವು ಎಲ್ಲಾ ಒಂದೇ ಮನೆಯವರು. ಈ ಕ್ರೀಡಾಕೂಟದಲ್ಲಿ ಸ್ಪರ್ಧೆ ಇರಲಿ, ಎಲ್ಲ ತಂಡಗಳಲ್ಲೂ ಆರೋಗ್ಯಕರ ಪೈಪೋಟಿ ಇರಲಿ. ಈ ಚಟುವಟಿಕೆಗಳು ಬರೀ ಕೂಟದ ಸದಸ್ಯರುಗಳಿಗೆ ಮಾತ್ರ ಆಗಿದೆ. ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಅವರ ಕುಟುಂಬದವರಿಗೂ ಸಹಾ ವಿವಿಧ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳೋಣ. ಈ ಬಾರಿ ಕಪ್‌ಗಳ ಜೊತೆಗೆ ನಗದು ಬಹುಮಾನವನ್ನು ಸಹಾ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳಿಗೆ ಶುಭ ಕೋರಿದರು.

ಕೂಟದಿಂದ ಚಾಲುಕ್ಯ, ಹೊಯ್ಸಳ, ಚಾಲುಕ್ಯ, ಕದಂಬ ಎಂಬ ನಾಲ್ಕು ತಂಡಗಳನ್ನು ಮಾಡಲಾಗಿತ್ತು. ಮೊದಲ ದಿನದ ಪಂದ್ಯಗಳು ನಡೆದವು. ಪೊಲೀಸ್ ತಂಡದೊಂದಿಗೂ ವರದಿಗಾರರ ಕೂಟದ ಕ್ರೀಡಾಪಟುಗಳು ಸೆಣಸಿದರು.

ಪೂರ್ವ ವಲಯ ಐಜಿಪಿ ರಮೇಶ್ ಬಾನೋಟ್, ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಪಂದ್ಯಾವಳಿ ವೀಕ್ಷಣೆ ಮಾಡಿ ಕ್ರೀಡಾಪಟುಗಳಿಗೆ ಶುಭಾಷಯ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!