ಕೊಂಡಜ್ಜಿ ಕೆರೆಯಲ್ಲಿ ಅಪಾಯ.! ಪಕ್ಷಿಗಳ ಸಂತತಿ ನಾಶವಾಗುವ ಸಾಧ್ಯತೆ.!
ದಾವಣಗೆರೆ: ದಾವಣಗೆರೆಯ ಒಂದೇ ಒಂದು ಜೀವವೈವಧ್ಯತೆಯ ತಾಣ ಆಗಿರುವ ಕೊಂಡಜ್ಜಿ ಕೆರೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಹೂಳು ತೆಗೆಯುತ್ತಿದ್ದಾರೆ.
ಈ ರೀತಿಯ ಕೆಲಸದಿಂದ ಹೊರ ದೇಶಗಳಿಂದ ಸಾವಿರಾರು ವಿವಿಧ ಪ್ರಭೇದಗಳ ಪಕ್ಷಿಗಳು ನೆಚ್ಚಿನ ತಾಣವಾದ ಕೊಂಡಜ್ಜಿ ಕೆರೆಗೆ ಬರುತ್ತವೆ. ಈ ರೀತಿಯಲ್ಲಿ ಕೆರೆ ಮಧ್ಯೆ ಇರುವ ಗಿಡ ಮರಗಳನ್ನು ಕಡಿದು ಹಾಕಿ ಆ ಸ್ಥಳದಿಂದ ಫಲವತ್ತಾದ ಮಣ್ಣನ್ನು ಬೇರೆಕಡೆ ಸಾಗಿಸುವ ಕೆಲಸವಾಗುತ್ತಿದೆ.
ಈ ಕೆರೆಯ ಮಣ್ಣನ್ನು ಕೆಲವರು ತಮ್ಮ ಹೊಲಗಳಲ್ಲಿ ಬಳಕೆ ಮಾಡಿದ್ರೆ ಇನ್ನು ಕೆಲವರು ಬಡಾವಣೆ ನಿರ್ಮಾಣಕ್ಕೆ ಬಳಸುತ್ತಿದ್ದಾರೆ ಎಂ ಆರೋಪ ಕೇಳಿಬರುತ್ತಿದೆ. ದಯವಿಟ್ಟು ಇದನ್ನು ನಿಲ್ಲಿಸುವಂತೆ ಪರಿಸರ ಹಾಗೂ ಪಕ್ಷಿಗಳ ಪ್ರಿಯರು ಆಗ್ರಹಿಸಿದ್ದಾರೆ.
ಕೊಂಡಜ್ಜಿ ಕೆರೆಯಲ್ಲಿ ಹೂಳು ತೆಗೆಯಲಾಗುತ್ತಿದೆ, ಕೊಂಡಜ್ಜಿಯಲ್ಲಿ ಹೂಳು ತೆಗೆಯುವ ಹೆಸರಿನಲ್ಲಿ ರಾತ್ರಿಯ ಬೆಳ್ಳಕ್ಕಿ, ಐಬಿಸ್ ಮತ್ತು ಕಾರ್ಮೊರಂಟ್‌ಗಳ ಗೂಡುಗಳನ್ನ ನಾಶಮಾಡಲಾಗುತ್ತಿದೆ.
ಕೊಂಡಜ್ಜಿ ಕೆರೆಗೆ ವಿಶ್ವದಾದ್ಯಂತ ಪಕ್ಷಿಗಳು ಬರುತ್ತವೆ. ದಯವಿಟ್ಟು ಈ ವಿಷಯದಲ್ಲಿ ನಮಗೆ ಸಹಾಯ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನೈಸರ್ಗಿಕ ಸಂಪನ್ಮೂಲ ಪಕ್ಷಿಗಳನ್ನು ಕೊಲ್ಲುವುದು ಅಪರಾಧವೆಂದು ತಿಳಿದಿದ್ದರು ಈ ರೀತಿಯಲ್ಲಿ ನಾಶಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೊಂಡಜ್ಜಿ ದಾವಣಗೆರೆಯ ಏಕೈಕ ಜೀವವೈವಿಧ್ಯ ತಾಣವಾಗಿದೆ,ಮಣ್ಣಿನ ಮಾಫಿಯಾ ಹಲವಾರು ಹೊಸ ಬಡಾವಣೆಗಳಿಗೆ ಮಣ್ಣು ಪೂರೈಸುತ್ತಿದೆಯಂತೆ, ಆದಷ್ಟು ಬೇಗ ಯಾವುದೇ ಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮನವಿ ಮಾಡಲಾಗಿದೆ.