ಜಿಲ್ಲೆಯ 30 ಜನ ವಿಕಲಚೇತನ ವ್ಯಕ್ತಿಗಳಿಗೆ ಸಾಮಗ್ರಿ ವಿತರಣೆ
ದಾವಣಗೆರೆ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ (ಎಪಿಡಿ) ಇವರುಗಳ ಸಹಯೋಗದಲ್ಲಿ ಇಲಾಖೆಯ ವತಿಯಿಂದ ಉಚಿತವಾಗಿ ನೀಡುವ ಸಾಧನ ಸಲಕರಣೆ ಯೋಜನೆಯಡಿ ಬೆನ್ನು ಹುರಿ ಅಪಘಾತಕ್ಕೊಳಗಾದ ಜಿಲ್ಲೆಯ 30 ಜನ ವಿಕಲಚೇತನ ವ್ಯಕ್ತಿಗಳಿಗೆ ನೀರಿನ ಹಾಸಿಗೆ, ಟಾಯ್ಲೆಟ್ ಕಮೋಡ್ ಮತ್ತು ವಾಕರ್‌ಗಳನ್ನು ವಿತರಿಸಲಾಯಿತು.
ಈ ವೇಳೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಿಬ್ಬಂದಿಗಳಾದ ದುರುಗೇಶ. ಜೆ, ಸೈಯದ್ ಅಹ್ಮದ್ ಹಾಗೂ ಎಪಿಡಿ ಸಂಸ್ಥೆಯ ಸಿಬ್ಬಂದಿಗಳಾದ ನಿಂಗಪ್ಪ ಕೆ ದೊಡ್ಮನಿ ಹಾಗೂ ಪುಷ್ಪಾವತಿ.ಟಿ, ಫಲಾನುಭವಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.