ಐವರು ದರೋಡೆಕೋರರ ಬಂಧಿಸಿದ ದಾವಣಗೆರೆ ಪೊಲೀಸ್

Davangere police arrested five robbers

ಐವರು ದರೋಡೆಕೋರರ ಬಂಧಿಸಿದ ದಾವಣಗೆರೆ ಪೊಲೀಸ್

ದಾವಣಗೆರೆ: ಐವರು ದರೋಡೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಮೊಬೈಲ್, ಸ್ಕೂಟರ್, ಬೈಕ್ ಹಾಗೂ ಮಹಿಂದ್ರ ಆಟೋ ವಶಪಡಿಸಿಕೊಂಡಿದ್ದಾರೆ.

ಮಲ್ಲಶೆಟ್ಟಿಹಳ್ಳಿಯ ರಾಘವೇಂದ್ರ ಎಸ್., ಜಿ.ಎಂ. ಕ್ಯಾಂಪ್‌ನ ಹನುಮಂತ, ಹೊನ್ನೂರು ಗ್ರಾಮದ ಮನು, ಆವರಗೆರೆಯ ಪ್ರಮೋದ್, ನಿಟುವಳ್ಳಿಯ ಕಸ್ತೂರಿ ಬಂಧಿತರು.

ಬಂಧಿತರಿಂದ 60 ಸಾವಿರ ರೂ. ಮೌಲ್ಯದ ಯಮಹಾ ಸ್ಕೂಟರ್, 10 ಸಾವಿರ ರೂ. ಮೌಲ್ಯದ ಮೊಬೈಲ್, ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂ. ಬೆಲೆ ಬಾಳುವ ಹೊಂಡಾ ಯೂನಿಕಾರ್ನ್ ಬೈಕ್ ಹಾಗೂ 2 ಲಕ್ಷ ಮೌಲ್ಯದ ಮಹಿಂದ್ರ ಆಟೋ ವಶಪಡಿಸಿಕೊಂಡಿದ್ದಾರೆ.

ಕಳೆದ ಮಾ.12ರಂದು ಬೆಳಿಗ್ಗೆ 1.30ರ ವೇಳೆಯಲ್ಲಿ ಬಾಡಾ ಕ್ರಾಸ್ ಬಳಿಯ ಎನ್.ಹೆಚ್.-48 ಸರ್ವಿಸ್ ರಸ್ತೆಯಲ್ಲಿ 6 ಜನ ಆಪರಿಚಿತರು ಹಲ್ಲೆ ಮಾಡಿ ಮೊಬೈಲ್, ಎಟಿಎಂ, ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಷಣ್ಮುಖ ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಉಳಿದವರ ಪತ್ತೆ ನಡೆಸುತ್ತಿದ್ದಾರೆ.

ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್‌ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ.ಶೇತಸನದಿ, ಕಿಟೆಜೆ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಶಶಿಧರ್, ಪಿಎಸ್‌ಐ ಎಂ.ಎಸ್. ದೊಡ್ಡಮನಿ, ರೇಣಕಾ ಜಿ.ಎಂ., ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಆನಂದ ಮುಂದಲಮನಿ, ಗೋಪಿನಾಥ ನಾಯ್ಕ, ಮಂಜಪ್ಪ , ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜುನಾಥ, ರವಿನಾಯ್ಕ, ಬಸವರಾಜ, ರೋಜಾ, ಚಾಲಕರಾದ ಮಂಜುನಾಥ, ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ ಮತ್ತು ಪೊಲೀಸ್ ಸಿ.ಸಿ.ಟಿವಿ ಕಮಾಂಡ್ ಸೆಂಟರ್ ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!