ದಾವಣಗೆರೆ ವಿಶ್ವವಿದ್ಯಾಲಯ (ಡುಟಾ) ಅಧ್ಯಕ್ಷರಾಗಿ ಕಣಸೋಗಿ, ಉಪಾಧ್ಯಕ್ಷರಾಗಿ ಜೆ.ಕೆ.ರಾಜು ಆಯ್ಕೆ
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ಟೀರ್ಸ್ ಅಸೋಸಿಯೇಷನ್ (ಡುಟಾ)ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಾ.ಶಿವಕುಮಾರ ಕಣಸೋಗಿ ಉಪಾಧ್ಯಕ್ಷರಾಗಿ ಪ್ರೊ.ಜೆ.ಕೆ.ರಾಜು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜೇಂದ್ರಪ್ರಸಾದ್ ಎಸ್. ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಪತ್ರಿಕೋದ್ಯಮ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ ಅವರು ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ವಿಶ್ವನಾಥ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಆಡಳಿತ ನಿರ್ವಹಣೆ ವಿಭಾಗದ ಅಧ್ಯಕ್ಷ ಪ್ರೊ.ಜೆ.ಕೆ.ರಾಜು ಅವರು ಆಯ್ಕೆಯಾಗಿದ್ದಾರೆ. ಅವರು ತಮ್ಮ ಎದುರಾಳಿ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಮಲ್ಲಿಕಾರ್ಜುನ ಅವರನ್ನು ಸೋಲಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಸ್ಪಧೆಯಲ್ಲಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಜೇಂದ್ರ ಪ್ರಸಾದ್ ಎಸ್ ಅವರು ತಮ್ಮ ಎದುರಾಳಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ ಬಾರ್ಕಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಖಚಾಂಚಿಯಾಗಿ ಕಂಪ್ಯೂಟರ್ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧಾನೇಶ ಆರ್, ಜಂಟಿ ಕಾರ್ಯದರ್ಶಿಗಳಾಗಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಸವರಾಜ ಬೆನಕನಹಳ್ಳಿ, ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ರೂಪೇಶಕುಮಾರ್ ಆರ್. ಆಯ್ಕೆಯಾಗಿದ್ದಾರೆ.
ಕಾರ್ಯನಿರ್ವಾಹಕ ಸದಸ್ಯರಾಗಿ ಡಾ.ಸುಪ್ರಿಯಾ ಆರ್., ಹಳ್ಳಳ್ಳಿ ಫಕ್ಕೀರೇಶ, ಡಾ. ಕಕ್ಕಳಮೇಲಿ ಸಿದ್ದಪ್ಪ, ಅನುಪ್ ರಿತ್ತಿ, ಡಾ.ಪಟವರ್ಧನ ರಾಠೋಡ, ಡಾ. ಪೂರ್ಣಿಮಾ ಡಿ.ವಿ., ಡಾ. ನಾಗಭೂಷಣಗೌಡ, ಡಾ.ನೀಲಮ್ಮ ಜಿ., ಡಾ. ವೀರೇಶ ಅವರು ಆಯ್ಕೆಯಾಗಿದ್ದಾರೆ. ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಬಿ.ರಂಗಪ್ಪ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.