ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಚಿಂತನ- ಮಂಥನ ಕಾರ್ಯಕ್ರಮ
ದಾವಣಗೆರೆ; ವಿದ್ಯಾರ್ಥಿಗಳು ಹೆಚ್ಚು ಕ್ರೀಯಾಶೀಲರಾಗಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು ಎಂದು ಡಯಟ್ ಸಂಸ್ಥೆಯ ಪ್ರಾಚಾರ್ಯರಾದ ಎಸ್ ಗೀತಾ ತಿಳಿಸಿದರು.
2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಂಗಳವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ[ಡಯಟ್] ಹಾಗೂ ಉಪನಿರ್ದೇಶಕರು[ಆಡಳಿತ] ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಡಯಟ್ ಕಛೇರಿಯಲ್ಲಿ ಜರುಗಿದ ಚಿಂತನ- ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2023-24 ನೇ ಶೈಕ್ಷಣಿಕ ವರ್ಷವನ್ನು “ಗುಣಾತ್ಮಕ ಶೈಕ್ಷಣಿಕ ವರ್ಷ” ಎಂಬ ಹೆಸರಿನಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಅಚರಿಸಲಾಗುತ್ತಿದೆ. ಕಳೆದ ಸಾಲಿನ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆ 14 ನೇ ಸ್ಥಾನವನ್ನು ಪಡೆದಿದ್ದು ಈ ಬಾರಿ ಜಿಲ್ಲೆಯನ್ನು ಮೊದಲ 5 ರೊಳಗಿನ ಸ್ಥಾನಕ್ಕೆ ತರಲು ವಿಷನ್-5 ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಳೆದ ಸಾಲಿನಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಕ್ರಿಯಾ ಶೀಲರಾಗಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು. ಎ¯್ಲರೂ ಒಟ್ಟಾಗಿ ಜಿಲ್ಲೆಯ ಫಲಿತಾಂಶ ಪ್ರಗತಿಗಾಗಿ ಶ್ರಮಿಸೋಣ ಎಂದು ತಿಳಿಸಿದರು.
ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಅಧಿಕಾರಿಗಳಿಗೆ ದತ್ತು ನೀಡಿರುವ ಬಗ್ಗೆ ಹಿರಿಯ ಉಪನ್ಯಾಸಕರಾದ ವಿಶಾಲಾಕ್ಷಿ ಹೆಚ್.ಆರ್ ಇವರು ಮಾಹಿತಿ ಹಂಚಿಕೊಂಡರು.
ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿಗಳಾದ ಜಿ.ಎಸ್. ರಾಜಶೇಖರಪ್ಪ ಇವರು ಶಾಲೆಗಳಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತಾ ಮುಖ್ಯ ಶಿಕ್ಷಕರು ಮತ್ತು ಶಾಲಾ ಭೇಟಿ ಮಾಡುವ ಅಧಿಕಾರಿಗಳು ಶಿಕ್ಷಕರಿಗೆ ಮಾರ್ಗದರ್ಶನ ಮಾಡುವ ಬಗ್ಗೆ ತಿಳಿಸಿದರು.
ಡಯಟ್‍ನ ಹಿರಿಯ ಉಪನ್ಯಾಸಕರಾದ ಎಂ.ಮಂಜುನಾಥ ಸ್ವಾಮಿ, ಎಂ.ಎ. ಸೊರಬ, ಡಿ.ವೈಪಿ.ಸಿ. ಎಲ್ ರವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಂ. ದಾರುಕೇಶ, ವಿಷಯ ಪರಿವೀಕ್ಷಕರಾದ ಎಂ ಶಶಿಕಲಾ ಹಾಗೂ ಎಂ ಸುರೇಶಪ್ಪ ಇವರುಗಳು ಮುಖ್ಯ ಶಿಕ್ಷಕರಿಗೆ ವಿವಿಧ ನಿದರ್ಶನಗಳನ್ನು ನೀಡುತ್ತ ಫಲಿತಾಂಶ ವೃದ್ದಿಗಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಜಿಲ್ಲಾ ಹಂತದ , ತಾಲ್ಲೂಕು ಹಂತದ ಹಾಗೂ ಡಯಟ್ ಸಂಸ್ಥೆಯ ಉಸ್ತುವಾರಿ ಅಧಿಕಾರಿಗಳು ಉಪಸ್ಥಿತರಿದ್ದರು.