ಸೂಡಾನ್‍ನಲ್ಲಿರುವ ಜಿಲ್ಲೆಯ 41 ಹಕ್ಕಿಪಿಕ್ಕಿ ಜನರು, ಕುಟುಂಬದವರಿಗೆ ಧೈರ್ಯ ತುಂಬಿದ ಡಿಸಿ ಶಿವಾನಂದ ಕಾಪಶಿ

ಸೂಡಾನ್‍ನಲ್ಲಿರುವ ಜಿಲ್ಲೆಯ 41 ಹಕ್ಕಿಪಿಕ್ಕಿ ಜನರು, ಕುಟುಂಬದವರಿಗೆ ಧೈರ್ಯ ತುಂಬಿದ ಡಿಸಿ ಶಿವಾನಂದ ಕಾಪಶಿ

ದಾವಣಗೆರೆ: ಆಫ್ರಿಕಾದ ಸೂಡಾನ್ ದೇಶದಲ್ಲಿ ಸೇನೆ ಮತ್ತು ಅರೆ ಸೇನೆ ನಡುವೆ ಘರ್ಷಣೆ ನಡೆಯುತ್ತಿದ್ದು ಕೆಲವು ಹಾನಿಯುಂಟಾಗಿದೆ.

ಸೂಡಾನ್ ರಾಜಧಾನಿ ಖಾರ್ಟೂಮ್‍ಗೆ ಉದ್ಯೋಗಕ್ಕಾಗಿ ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಹಳ್ಳಿಯ ಹಕ್ಕಿಪಿಕ್ಕಿ ಜನರು ತೆರಳಿದ್ದು ಸೇನೆ ಮತ್ತು ಅರೆ ಸೇನಾ ಘರ್ಷಣೆಯಿಂದ ಭಯಭೀತರಾಗಿ ಕುಟುಂಬದವರಿಗೆ ಕರೆ ಮಾಡುತ್ತಿರುವ ಬಗ್ಗೆ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಲು ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಏಪ್ರಿಲ್ 19 ರಂದು ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮತ್ತು ಸೂಡಾನ್‍ನಲ್ಲಿರುವ ಈ ಜನರೊಂದಿಗೆ ಮಾತನಾಡಿ ಕುಟುಂಬದವರಿಗೆ ಧೈರ್ಯ ತುಂಬಿದರು.

ಸೂಡಾನ್‍ನಲ್ಲಿರುವ ಜಿಲ್ಲೆಯ 41 ಹಕ್ಕಿಪಿಕ್ಕಿ ಜನರು, ಕುಟುಂಬದವರಿಗೆ ಧೈರ್ಯ ತುಂಬಿದ ಡಿಸಿ ಶಿವಾನಂದ ಕಾಪಶಿ

ಅಸ್ತಾಪನಹಳ್ಳಿಯಿಂದ ಸುಮಾರು 13 ಮತ್ತು ಗೋಪನಾಳ್ ಗ್ರಾಮದಿಂದ 29 ಜನರು ಉದ್ಯೋಗಕ್ಕಾಗಿ ಸೂಡಾನ್ ತೆರಳಿದ್ದಾರೆ. ಇವರೆಲ್ಲರೂ ಒಟ್ಟಿಗೆ ಇದ್ದಾರೆ, ಸೂಡಾನ್‍ನಲ್ಲಿರುವವರ ಜೊತೆಗೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕ ಮಾಡಿ ಯಾವುದೇ ಆತಂಕಪಡುವ ಅಗತ್ಯವಿರುವುದಿಲ್ಲ ಎಂದರು, ಸುಡಾನ್ ನಿಂದ ಜಿಲ್ಲಾಧಿಕಾರಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತ, ಅಲ್ಲಿನ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ವೊವರಿಸಿದರು, ನಂತರ ಅವರ ಜೊತೆ 15 ನಿಮಿಷಗಳ ಕಾಲ ಮಾತನಾಡಿ ಅವರ ಸಮಸ್ಯೆ ಬಗ್ಗೆ ಹಾಗೂ ಕುಟುಂಬದವರ ಜೊತೆ ಮಾತನಾಡಿದರು.

ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು ಭಾರತೀಯ ರಾಯಭಾರ ಕಚೇರಿಯು ನಿಮ್ಮೊಂದಿಗೆ ಇರಲಿದೆ. ರಾಯಭಾರ ಕಚೇರಿಯಿಂದ ತಮ್ಮ ಕ್ಯಾಂಪ್ ಸಂಪರ್ಕಿಸಿದಾಗ ಸಮರ್ಪಕ ಮಾಹಿತಿಯನ್ನು ನೀಡಲು ತಿಳಿಸಿದರು. ಮತ್ತು ಅನಗತ್ಯವಾಗಿ ಯಾವುದೇ ಬೇರೆಕರೆಗಳಿಗೆ ಉತ್ತರಿಸದಂತೆ ಎಚ್ಚರವಹಿಸಲು ಮತ್ತು ಜಿಲ್ಲಾ ಅಡಳಿತದಿಂದ ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಹ ನೀಡಲಾಗುತ್ತದೆ ಎಂದು ಸಾಂತ್ವಾನ ಹೇಳಿ ಕುಟುಂಬದವರಿಗೂ ಧೈರ್ಯ ತುಂಬಿದರು.

ಸೂಡಾನ್‍ನಲ್ಲಿರುವ ಜಿಲ್ಲೆಯ 41 ಹಕ್ಕಿಪಿಕ್ಕಿ ಜನರು, ಕುಟುಂಬದವರಿಗೆ ಧೈರ್ಯ ತುಂಬಿದ ಡಿಸಿ ಶಿವಾನಂದ ಕಾಪಶಿ

ಭಾರತೀಯ ರಾಯಭಾರಿ ವಾಟ್ಸ್ ಗ್ರೂಪ್ ಮಾಡಿದ್ದು ಎಲ್ಲರೂ ಅದರಲ್ಲಿ ಸೇರಿಕೊಳ್ಳಲು ಸಲಹೆ ನೀಡಿದರು, ಎಂಬಸಿ ತಿಳಿಸಿದಾಗ ಮಾತ್ರ ಆಹಾರ ಪದಾರ್ಥಗಳನ್ನು ತರಲು ಹೊರಗಡೆ ಹೋಗಿ, ಅನ್ಯಥಾ ಹೊರಗಡೆ ಹೋದರೆ ಆಪಾಯವಿದೆ ಎಂದು ಸೂಕ್ಷ್ಮತಯೆ ಬಗ್ಗೆ ತಿಳಿ ಹೇಳಿದರು

ದಕ್ಷಿಣ ಆಫ್ರಿಕಾದ ಸೂಡಾನ್ ನಲ್ಲಿ ಅಸ್ಥಪ್ಪನಹಳ್ಳಿಯಿಂದ 13 ಗೋಪನಾಳ್ ಗ್ರಾಮದ 29 ಮಂದಿ ಸೇರಿ ಒಟ್ಟು 42 ಜನರು ಗಲಭೆ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದಾರೆ. 800 ಕ್ಕೂ ಹೆಚ್ಚು ಭಾರತೀಯರು ಒಂದೇ ಪ್ರದೇಶದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ.

ಇದೇ ಸಂದರ್ಭದಲ್ಲಿ ಸುಡಾನ್ ನಲ್ಲಿರುವ ಹಕ್ಕಿಪಿಕ್ಕಿ ಜನರ ಕುಟುಂಬದವರ ಜೊತೆ ಮಾತನಾಡಿದ ದಾವಣಗೆರೆ ಜಿಲ್ಲಾಧಿಕಾರಿ, ರಾಜ್ಯ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಇಂಡಿಯನ್ ಎಂಬಸಿ ಸೂಚಿಸುವಂತೆ ನಡೆದುಕೊಳ್ಳುವಂತೆಯೂ, ಸುರಕ್ಷಿತವಾಗಿರುವಂತೆಯೂ ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!