deepavali;ದೀಪಾವಳಿ ಪ್ರಯುಕ್ತ ಗೋವಿಗೆ ವಿಶೇಷ ಪೂಜೆ; ಗೋಮಾತೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ: ಬಿಜೆಪಿ ಮುಖಂಡ ಕೆ. ಬಿ. ಕೊಟ್ರೇಶ್
ದಾವಣಗೆರೆ: ನಗರದ ಪಿ. ಬಿ.ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗೋಪೂಜೆ ನೆರವೇರಿಸಲಾಯಿತು. deepavali ಬಿಜೆಪಿ ಮುಖಂಡರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಅವರು ನರಕಚತುರ್ದಶಿ ಹಿನ್ನೆಲೆಯಲ್ಲಿ ಗೋಪೂಜೆ ನೆರವೇರಿಸಿದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೀರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಕೊಟ್ರೇಶ್ ಅವರು, ಗೋವಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಬೆಳಕಿನ ಹಬ್ಬ ದೀಪಾವಳಿ ವೇಳೆಯಲ್ಲಿ ಪೂಜೆ ಸಲ್ಲಿಸುತ್ತಿರುವುದು ಖುಷಿ ತಂದಿದೆ. ಗೋವನ್ನು ದೇವರು ಎನ್ನುತ್ತೇವೆ. ಉಳಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಗೋವು ಅಂದರೆ ಮಾತೆ. ಯಾವುದೇ ಕಾರಣಕ್ಕೂ ಹತ್ಯೆ ಮಾಡಬಾರದು. ದೀಪಾವಳಿ ವೇಳೆ ಗೋವಿಗೆ ಪೂಜೆ ಸಲ್ಲಿಸಿದರೆ ಭಗವಂತ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಹಾಗಾಗಿ, ಬೀರಲಿಂಗೇಶ್ವರನ ಸನ್ನಿಧಿಯಲ್ಲಿ ಗೋ ಪೂಜೆ ಮಾಡಲಾಯಿತು. ಪ್ರತಿಯೊಬ್ಬರೂ ದೀಪಾವಳಿ ಹಬ್ಬವನ್ನು ಖುಷಿ ಖುಷಿಯಾಗಿ ಆಚರಿಸೋಣ. ಪುರಾಣದಲ್ಲಿಯೂ ಗೋವಿಗೆ ತನ್ನದೇ ಆದ ಮಹತ್ವ ಇದೆ. ಗೋವು ಎಂದರೆ ಕೇವಲ ಹಾಲು ಕೊಡುವುದಲ್ಲ. ನಮಗೆ ದೇವರಿದ್ದಂತೆ. ಗೋ ತಳಿಗಳ ಉಳಿವಿಗೆ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ಆರ್ ಎಸ್ ಎಸ್ ಮುಖಂಡರಾದ ವಿನಾಯಕ ರೊನಡೆ ಅವರು, ಭಾರತ ದೇಶದಿಂದ ಗೋವುಗಳ ಮಾಂಸ ರಫ್ತಾಗುತ್ತಿದೆ. ಭಾರತದಲ್ಲಿ ಗೋವಿಗೆ ಕೊಟ್ಟಷ್ಟು ಮಹತ್ವ, ಗೌರವ ಎಲ್ಲಿಯೂ ಸಿಗದು. ಗೋವುಗಳ ಹತ್ಯೆ ನಿಲ್ಲಬೇಕು. ಗೋವುಗಳನ್ನು ನಾವು ಪೂಜಿಸುತ್ತೇವೆ. ದೇವರ ಭಾವನೆ ಪ್ರತಿಯೊಬ್ಬರಲ್ಲಿಯೂ ಇದೆ ಎಂದು ಹೇಳಿದರು.
ದೀಪಾವಳಿ ಹಬ್ಬದಂದು ಗೋ ಪೂಜೆ ನೆರವೇರಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಂದಿಗೂ ಎಲ್ಲರೂ ಪಾಲಿಸಿಕೊಂಡು ಬರುತ್ತಿದ್ದೇವೆ. ಗೋವಿನ ಸಂಸ್ಕೃತಿ, ಇತಿಹಾಸ, ಪರಂಪರೆ, ಮಹತ್ವವನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಗೋಪಾಲ್ ರಾವ್ ಸಾವಂತ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್, ಪಾಲಿಕೆ ಮಾಜಿ ಸದಸ್ಯ ಕೃಷ್ಣಮೂರ್ತಿ ಪವಾರ್,ರೈಲ್ವೆ ಮಂಡಳಿ ಸದಸ್ಯರಾದ ಲಿಂಗರಾಜ್, ಚಂದ್ರಪ್ಪ, ಜಯಣ್ಣ, ಹಿತ ರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ದ್ಯಾಮಪ್ಪ, ಕುಶಾಲ್, ಪ್ರವೀಣ್ ಅಣಬೂರು, ಅಜಯ್, ಸಿದ್ಧನಗೌಡ, ಗೋಪಾಲ್ ಗೌಡ, ಗುರುಶಾಂತಪ್ಪ, ಮಾರುತಿ, ಭರತ್ ಮತ್ತಿತರರು ಹಾಜರಿದ್ದರು.