ಚನ್ನಗಿರಿ-ಭದ್ರಾವತಿ ಮಾರ್ಗಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಸೌಲಭ್ಯ ಕಲ್ಪಿಸಲು ರಸ್ತೆ ತಡೆದು ಆಗ್ರಹ
ದಾವಣಗೆರೆ: ಚನ್ನಗಿರಿ ಮಾರ್ಗದಿಂದ ಭದ್ರಾವತಿ ಕಡೆಗೆ ಹಾಗೂ ಭದ್ರಾವತಿ ಯಿಂದ ಚನ್ನಗಿರಿ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದ ಕಾರಣ, ಸರ್ಕಾರಿ ಬಸ್ ವ್ಯವಸ್ಥೆ ಕಲ್ಲಿಪಸುವಂತೆ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯಾಧ್ಯಕ್ಷ ಪುನಿತ್ ಕುಮಾರ್ ಆರ್. ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಗೋಪನಾಳ್ ಹಾಗೂ ಹನುಮಂತನಗರ ಗ್ರಾಮದ ಶಾಲಾ ಮಕ್ಕಳು ಪಕ್ಕದ ಗ್ರಾಮಗಳ ಶಾಲೆಗೆ ಬೆಳಗ್ಗೆ ತೆರಳುತ್ತಿದ್ದು ಖಾಸಗಿ ಬಸ್ ನಿಲ್ಲಿಸದ ಕಾರಣ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಸ್‌ಗಳನ್ನು ತಡೆದು ಸಂಬಂಧಿಸಿದ ಬಸ್ ಚಾಲಕ ಹಾಗೂ ಬಸ್ ಮಾಲೀಕರಿಗೆ ಮಕ್ಕಳಿಗೆ ಅನಾನುಕೂಲ ಉಂಟು ಮಾಡದಂತೆಯೂ, ಬಸ್‌ಗಳಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳುವಂತೆಯೂ ತಿಳಿಸಲಾಯಿತು.
ಚನ್ನಗಿರಿ ಮಾರ್ಗದಿಂದ ಭದ್ರಾವತಿ ಕಡೆಗೆ ಹಾಗೂ ಭದ್ರಾವತಿ ಯಿಂದ ಚನ್ನಗಿರಿ ಮಾರ್ಗವಾಗಿ ಸುಮಾರು 2000 ಕ್ಕೂ ಹೆಚ್ಚಿನ ಶಾಲಾ ಬಡ ಮಕ್ಕಳು ಪ್ರಯಾಣಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಅನುಕುಲವಾಗುವಂತೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸುವುದಾಗಿ ಪುನೀತ್ ಕುಮಾರ್ ಆರ್, ಶಿವಾನಂದ , ನಂದೀಶ , ಕೃಷ್ಣಾರೆಡ್ಡಿ ಅವರು ಹೇಳಿದ್ದಾರೆ.