ಸೆಕ್ಸ್ ಚಾಂಪಿಯನ್ ಷಿಪ್ ನಡೆಸಲು ಜೂನ್ 8 ರಂದು ದಿನಾಂಕ ನಿಗದಿಪಡಿಸಿದ ಸ್ವೀಡನ್‌

ಸೆಕ್ಸ್ ಚಾಂಪಿಯನ್ ಷಿಪ್ ನಡೆಸಲು ಜೂನ್ 8 ರಂದು ದಿನಾಂಕ ನಿಗದಿಪಡಿಸಿದ ಸ್ವೀಡನ್‌

ನವದೆಹಲಿ : ನಾಲ್ಕು ಗೋಡೆಗಳ ನಡುವ ನಡೆಯುತ್ತದ್ದ ಸೆಕ್ಸ್ ಇದೀಗ ಕ್ರೀಡೆಯಾಗಿದೆ. ಹೌದು, ಯುರೋಪ್‌ ರಾಷ್ಟ್ರ ಸ್ವೀಡನ್‌, ಸೆಕ್ಸ್‌ ಅನ್ನು ಕ್ರೀಡೆಯಾಗಿ ಪರಿಗಣನೆ ಮಾಡಿದ್ದು, ಮೊಟ್ಟಮೊದಲ ಆವೃತ್ತಿಯ ಯುರೋಪಿಯನ್‌ ಸೆಕ್ಸ್‌ ಚಾಂಪಿಯನ್‌ಷಿಪ್‌ಗೆ ದಿನಾಂಕವನ್ನು ಕೂಡ ಪ್ರಕಟ ಮಾಡಿದೆ.

ಇದೇ ಜೂನ್‌ 8 ರಂದು ಮೊದಲ ಆವೃತ್ತಿಯ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಹಲವಾರು ವಾರಗಳ ಕಾಲ ನಡೆಯಲಿದೆ. ಸ್ವೀಡಿಷ್‌ ಸೆಕ್ಸ್‌ ಫೆಡರೇಷನ್‌ ಈ ಟೂರ್ನಮೆಂಟ್‌ ಅನ್ನು ಆಯೋಜನೆ ಮಾಡಲಿದೆ.

ಎಷ್ಟು ವಾರಗಳ ಕಾಲ ಈ ಚಾಂಪಿಯನ್‌ಷಿಪ್‌ ನಡೆಯಲಿದೆ ಎನ್ನುವ ಮಾಹಿತಿ ಸದ್ಯ ಅಪೂರ್ಣವಾಗಿದ್ದು, ಒಂದು ದಿನಕ್ಕೆ 6 ಗಂಟೆಗಳ ಕಾಲ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಬೇಕಿದೆ. ಈ ಸಮಯದಲ್ಲಿ, ಸ್ಪರ್ಧಿಗಳು, ತಮ್ಮ ಲೈಂಗಿಕ ಕ್ರಿಯೆ ಅಥವಾ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸರಿಸುಮಾರು 45 ನಿಮಿಷಗಳಿಂದ ಒಂದು ಗಂಟೆಯವರೆಗಿನ ಸಮಯ ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.

ವರದಿಗಳ ಪ್ರಕಾರ, ಈಗಾಗಲೇ 20ಕ್ಕೂ ಅಧಿಕ ದೇಶದ ಸ್ಪರ್ಧಿಗಳು ಯುರೋಪಿಯನ್‌ ಸೆಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್‌ನ ವಿಜೇತರನ್ನು ಮೂರು ತೀರ್ಪುಗಾರರು ಮತ್ತು ಪ್ರೇಕ್ಷಕರ ರೇಟಿಂಗ್‌ಗಳ ಸಂಯೋಜನೆಯ ಮೂಲಕ ನಿರ್ಧರಿಸಲಾಗುತ್ತದೆ.

ಅಂತಿಮ ಮೌಲ್ಯಮಾಪನದ ಸಮಯದಲ್ಲಿ, ಪ್ರೇಕ್ಷಕರಿಂದ 70% ಮತಗಳನ್ನು ಪರಿಗಣಿಸಲಾಗುತ್ತದೆ, ಆದರೆ ಉಳಿದ 30% ತೀರ್ಪುಗಾರರ ಮತಗಳಿಂದ ಬರುತ್ತದೆ. ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್‌ನ ಸ್ಪರ್ಧಿಗಳು ಸೆಡಕ್ಷನ್, ಓರಲ್‌ ಸೆಕ್ಸ್‌, ಸಂಭೋಗ, ಸ್ಪರ್ಧಿಗಳ ವಸ್ತ್ರವಿನ್ಯಾಸ ಇತ್ಯಾದಿ ಸೇರಿದಂತೆ 16 ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!