ಪಬ್ಲಿಕ್ ಟಿವಿ ವರದಿಗಾರರೆಂದು ಹಣ ವಸೂಲಿ ಮಾಡುತ್ತಿದ್ದ ನಾಲ್ವರ ಬಂಧಿಸಿದ ಹರಿಹರ ಪೋಲೀಸ್
ದಾವಣಗೆರೆ : ಪಬ್ಲಿಕ್ ಟಿವಿ ವರದಿಗಾರರೆಂದು ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಹರಿಹರ ಗ್ರಾಮಾಂತರ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕೊಂಡಜ್ಜಿ ಗ್ರಾಮದ ಗಿರೀಶ್ ಎಂಬುವವರು ಹೊಲ ಮಟ್ಟ ಮಾಡಲು ಹೊಲದಲ್ಲಿ ಮಣ್ಣು ತುಂಬುವಾಗ ಯಾರೋ 5 ಜನ ಬಂದು ನಾವು ಪಬ್ಲಿಕ್ ಟಿವಿ ವರದಿಗಾರರು ನೀವು ಮಣ್ಣನ್ನು ತುಂಬಲು ಪರವಾನಿಗೆ ಇದೆಯೇ ಎಂದು ಕೇಳಿ ಗಿರೀಶ್ ಇಲ್ಲ ಎಂದು ಹೇಳಿದಾಗ 50 ಸಾವಿರ ರೂಗಳಿಗೆ ಬೇಡಿಕೆ ಇಟ್ಟಿದ್ದಾರೆ. ಕೊಡದಿದ್ದರೆ ಟಿವಿಯಲ್ಲಿ ಸುದ್ದಿ ಬಿತ್ತರಿಸುವುದಾಗಿ ಹೆದರಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ವರಿಗಾರರೆಂದು ಗಿರೀಶ್ ಅವರನ್ನು ಹೆದರಿಸಿದ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಿ ಎಂದು ಪಬ್ಲಿಕ್ ಟಿವಿಯ ದಾವಣಗೆರೆ ಜಿಲ್ಲಾ ವರದಿಗಾರ ಪುನೀತ್ ಕುಮಾರ್ ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿನ ಆರೋಪಿತರ ಪತ್ತೆಗಾಗಿ ಪೊಲೀಸ್ ನಿರೀಕ್ಷಕ ಸತೀಶ್ ಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ವೀರಬಸಪ್ಪ ಕುಸಲಾಪುರ ಪಿಎಸ್‌ಐ ಇವರ ತಂಡ ಪ್ರಕರಣಕ್ಕೆ ಸಂಬಂಧಿಸಿದ ರಘು, ಬಲ್ಲೂರು ಕನ್ನಡಪರ ಸಂಘಟನೆ ತಾಲೂಕು ಅಧ್ಯಕ್ಷ, ನಾಗೇನಹಳ್ಳಿ ಗ್ರಾಮ, ಅಣ್ಣಪ್ಪ ಪಬ್ಲಿಕ್ 24 ಕನ್ನಡ ವರದಿಗಾರ, ಸಂತೋಷ ಗುಡಿಮನೆ ತುಂಗಾಭದ್ರ ಪತ್ರಿಕೆ ವರದಿಗಾರ, ಪಕ್ಕಿರೇಶ ಯಾದವ್ ಕನಸಿನ ಭಾರತ ವಾರಪತ್ರಿಕೆ ಬರಹಗಾರ, ಚಿಕ್ಕಬಿದರಿ ಗ್ರಾಮ, ಈ ನಾಲ್ಕು ಆರೋಪಿತರನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನೊಬ್ಬ ಆರೋಪಿತನಾದ ಸಾಬ್‌ಜಾನ್ ಪತ್ರಿಕೆ ವಿತರಕ ಕಮದೋಡು ಗ್ರಾಮ, ರಾಣೇಬೆನ್ನೂರು ಈತನು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಮೇಲ್ಕಂಡ ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ವೀರಬಸಪ್ಪ ಕುಸಲಾಪುರ ಪಿಎಸ್‌ಐ, ಎಎಸ್‌ಐ ರಾಮಚಂದ್ರಪ್ಪ ಹಾಗೂ ಸಿಬ್ಬಂದಿಯಾದ ಸೈಯದ್ ಗಫಾರ್, ದ್ವಾರಕೀಶ್, ರಮೇಶ್, ಹಜರತ್ ಅಲಿ, ಬಾಲರಾಜನಾಯ್ಕ್, ಚಾಲಕರಾದ ಸಿದ್ದಪ್ಪ ಇವರು ಸಿಬ್ಬಂದಿಗಳಾದ ನಿಂಗರಾಜ್, ಶಿವರಾಜ್ ಭಾಗವಹಿಸಿದ್ದರು.