ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಪ್ರತಿಷ್ಠಿತ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ

IMG-20210819-WA0020

ಬೆಂಗಳೂರು: ಪದ್ಮಭೂಷಣ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರಿಗೆ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಭಗವಾನ್ ಶ್ರೀ ಮಹಾವೀರ ಶಾಂತಿ ರಾಷ್ಟ್ರಪ್ರಶಸ್ತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಮನೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ಇದ್ದರು
*ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಅವರಿಗೆ ಸಂದ ಪ್ರಶಸ್ತಿಗಳು*

ಶ್ರೀಯುತರು ಶ್ರೀ ಧರ್ಮಸ್ಥಳ ಕ್ಷೇತ್ರದ ಧಮಾ೯ಧಿಕಾರಿಗಳಾಗಿ ಪದಗ್ರಹಣ ಮಾಡಿದ ಬಳಿಕ ಅವರ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ,ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಪರಿಗಣಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ, ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳ ವಿವರವಾದ ಪಟ್ಟಿ ಈ ಮುಂದಿನಂತಿದೆ:

1) 1977 – ಪೈ ಗೌರವ ಪ್ರಶಸ್ತಿ, ಕೊಲ್ಲಾಪುರ.

2) 1985 -ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರ.

3) 1993- ರಾಜಷಿ೯ ಪ್ರಶಸ್ತಿ, ಭಾರತದ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರಿಂದ ಪ್ರದಾನ.

4) 1994- ಗೌರವ ಡಾಕ್ಟರೇಟ್ ಪದವಿ, ಮಂಗಳೂರು ವಿಶ್ವವಿದ್ಯಾಲಯ.

5)1994- ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ನವದೆಹಲಿ.

6) ವರ್ಷದ ವ್ಯಕ್ತಿ ಪ್ರಶಸ್ತಿ, ಬೆಂಗಳೂರಿನಲ್ಲಿರುವ ಭಾರತದ ಪಬ್ಲಿಕ್ ರಿಲೇಶನ್ಸ್ ಸೊಸೈಟಿ.

7) 1995-ಪಿಕ್ಕಿ ಪ್ರಶಸ್ತಿ , ಭಾರತದ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಗ್ರಾಮೀಣಾಭಿವೃದ್ಧಿ ಮತ್ತು ಸ್ವ – ಉದ್ಯೋಗ ಕೇಂದ್ರ ರುಡ್ ಸೆಟ್ ಗಾಗಿ.

8) 1998-ಧರ್ಮ ರತ್ನಾಕರ ಗೌರವ ಪ್ರಶಸ್ತಿ,ಉಡುಪಿ.

9) 1999-ಇಂಡಿಯನ್ ಮಚ೯ಂಟ್ಸ್ ಛೇಂಬರ್ಸ್ ಅವಾರ್ಡ್-1998ರ ಗೌರವ ಪ್ರಶಸ್ತಿ ಮುಂಬೈ.

10) 2000- ಪದ್ಮಭೂಷಣ ಪ್ರಶಸ್ತಿ,ಭಾರತ ಸರ್ಕಾರ.

11) 2000- ಧರ್ಮಭೂಷಣ ಪ್ರಶಸ್ತಿ,ವೇಣೂರು.

12)ಲಿವಿಂಗ್ ಲೆಜೆಂಡ್ ಆಫ್ ದಿ ಸೆಂಚುರಿ ಪ್ರಶಸ್ತಿ ಗೌರವ ಮಂಗಳೂರಿನ ಲಯನ್ಸ್.

13) ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಶಾಶ್ವತ ಗೌರವ ಸದಸ್ಯತ್ವ.

14) ರೋಟರಿ ಇಂಟರ್
ನ್ಯಾಷನಲ್ ನಿಂದ ಸಫಾಯರ್ ಎಂಬ ಗೌರವ.

15) 2004-ವಾಟಿಕಾ ವರ್ಷದ ಕನ್ನಡಿಗ ಪ್ರಶಸ್ತಿ,ಕನ್ನಡ ಈ ಟಿವಿ.

16) ಗೌರವ ಫೆಲೋಶಿಪ್ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.

17) 2005 ಎಫ್ ಆರ್ ಸಿ ಪಿ ಎಸ್ (ಫೆಲೋಶಿಪ್ ಆಫ್ ದಿ ರಾಯಲ್ ಕಾಲೇಜ್ ಆಫ್ ಫಿಜಿಶಿಯನ್ಸ್ & ಸರ್ಜನ್ಸ್) ಪ್ರಶಸ್ತಿ,ಗ್ಲಾಸ್ಗೋ ಬ್ರಿಟನ್.

18) 2005- ಜಯಂಟ್ಸ್ ಇಂಟರ್ ನ್ಯಾಷನಲ್ ಪ್ರಶಸ್ತಿ.

19) 2007- ಡಾಕ್ಟರ್ ಆಫ್ ಸೈನ್ಸ್ (ಗೌರವ ಡಾಕ್ಟರೇಟ್) ಪದವಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ.

20) 2007- ರಾಜೀವ್ ಗಾಂಧಿ ಪ್ರಶಸ್ತಿ,ಮುಂಬೈನ ರೀಜಿನಲ್ ಕಾಂಗ್ರೆಸ್ ಕಮಿಟಿ.

21) 2008- ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ.

22) 2009- ಬಸವಶ್ರೀ ಪ್ರಶಸ್ತಿ, ಬೆಂಗಳೂರು.

23) 2009- ಗೌರವ ಡಾಕ್ಟರೇಟ್ ಪದವಿ, ಯು ಎಸ್ ಎ.ಯ ಡ್ರೀವ್ ವಿಶ್ವವಿದ್ಯಾಲಯ.

24) 2009-ಕರ್ನಾಟಕ ರತ್ನ ಪ್ರಶಸ್ತಿ,ಕರ್ನಾಟಕ ಸರ್ಕಾರ.

25) 2010-ನಾಡೋಜ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ.

26) 2010- ಗೌರವ ಡಾಕ್ಟರೇಟ್ ಪ್ರಶಸ್ತಿ,ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.

27) ಸಂಯಮ ಪ್ರಶಸ್ತಿ, ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಬೆಂಗಳೂರು.

28) 2011-ಡಿ.ದೇವರಾಜ ಅರಸು ಪ್ರಶಸ್ತಿ, ಕರ್ನಾಟಕ ಸರ್ಕಾರ.

29) 2011-ರಾಷ್ಟ್ರೀಯ ಸಿಡ್ಬಿ(SIDBI) ಪ್ರಶಸ್ತಿ, ಕೇಂದ್ರ ಸರ್ಕಾರವು ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ – ಉದ್ಯೋಗ ಕೇಂದ್ರ ರುಡಸೆಟ್ ಗಾಗಿ ಎಂ ಎಸ್ ಎಂ ಇ ಗಳಿಗೆ ಕೊಡಮಾಡುವ ಪ್ರಶಸ್ತಿ.

30) 2011- ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ.

31) 2011-ಜಿಂದಾಲ್ ಇಂಟರ್ನ್ಯಾಷನಲ್ ಅವಾರ್ಡ್.

32) 2012-ಆಶ್ಡೆನ್ ಗ್ರೀನ್ ಎನರ್ಜಿ ಗೋಲ್ಡ್ ಪ್ರಶಸ್ತಿ( ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗೆ) ಇಂಗ್ಲೆಂಡ್.

33) 2013- ದೇವಿ ಅಹಿಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ,ಇಂದೋರ, ಮಧ್ಯ ಪ್ರದೇಶ.

34) 2014-ಸ್ಕಾಚ್ ಆರ್ಥಿಕ ಸೇರ್ಪಡೆ ಸ್ವರ್ಣ ಪ್ರಶಸ್ತಿ,( ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗೆ).

35) 2014- ಮಕ್ಕಳ ಕಲ್ಯಾಣ ಸೇವಾ ಪ್ರಶಸ್ತಿ, ಕರ್ನಾಟಕ ಸರ್ಕಾರ.

36) 2015- ಪದ್ಮವಿಭೂಷಣ ಪ್ರಶಸ್ತಿ ,ಭಾರತ ಸರ್ಕಾರ.

37) 2016- ಸಮಾಜ ಮಹಾರತ್ನ ಪುರಸ್ಕಾರ ಪ್ರಶಸ್ತಿ, ಮಂಗಳೂರು.

38) 2017-ಅಂತರ್ ರಾಷ್ಟ್ರೀಯ ಮಾನ್ಯತೆ ಪ್ರಶಸ್ತಿ, ಎಸ್ ಡಿ ಎಂ ಐ ಎಂ ಡಿ, ಪಿಜಿಡಿಎಂ ಕೋರ್ಸ್ಗೆ ಅಮೆರಿಕ ಪ್ರಶಸ್ತಿ.

39) 2017- ಸಮನ್ವಯ ಶಿಕ್ಷಣ ಮೂಲಕ ಅಂಗವಿಕಲರ ಸಬಲೀಕರಣಕ್ಕೆ ಅತ್ಯುತ್ತಮ ಸಂಸ್ಥೆ ಎಂಬ ರಾಷ್ಟ್ರ ಪ್ರಶಸ್ತಿ,SDM ಮಂಗಳಜ್ಯೋತಿ ಸಮಗ್ರ ಶಾಲೆಗೆ ವಾಮಂಜೂರು.

40) 2017- ಇನ್ ಕ್ಲೂಸಿವ್ ಫೈನಾನ್ಸ್ ಇಂಡಿಯಾ ಆವಾಡ್ಸ್.

41) 2019- ಜೀವಮಾನ ಸಾಧಕ ಪ್ರಶಸ್ತಿ Zee ಕನ್ನಡ ವಾಹಿನಿಯ ವಷ೯ದ ಕನ್ನಡಿಗ ಪ್ರಶಸ್ತಿ.

42) 2020- ಏಷ್ಯಾದ ಶ್ರೇಷ್ಠ ನಾಯಕ ಪ್ರಶಸ್ತಿ, ಯು.ಆರ್. ಎಸ್ ಏಷ್ಯಾ ಒನ್ ಸಂಸ್ಥೆ.

43) 2020-ಶ್ರೀ ಭಗವಾನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನಾ೯ಟಕ ಸಕಾ೯ರ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!