ಡಿಪ್ಲೊಮಾ ನೇರ ಪ್ರವೇಶಕ್ಕೆ ಸೆ.24 ರವರಗೆ ಅವಕಾಶ
ದಾವಣಗೆರೆ: ಸಿಪೆಟ್ ಮೈಸೂರು ಉದ್ಯೋಗಾದಾರಿತ ಡಿಪ್ಲೊಮಾಗೆ ನೇರ ಪ್ರವೇಶ ಪಡೆಯುವ ಕೊನೆಯ ದಿನವನ್ನು ಸೆ.24 ರವರೆಗೆ ವಿಸ್ತರಿಸಲಾಗಿದೆ.
ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಯು ಭಾರತ ಸರ್ಕಾರದ ರಸಾಯನ, ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದ ಪಾಲಿಮರ್, ಪೆಟ್ರೋಕೆಮಿಕಲ್ಸ್, ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ(ವಿಜ್ಞಾನ), ಐ.ಟಿ.ಐ (ಫಿಟ್ಟರ್, ಟರ್ನರ್ ಹಾಗೂ ಮೆಕ್ಯಾನಿಕಲ್) ಮತ್ತು ಬಿ.ಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ (ಡಿಪಿಟಿ)- 03 ವರ್ಷ, ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ (ಪಿಜಿಡಿ-ಪಿಪಿಟಿ)-02 ವರ್ಷ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2510618, ಪೋನ್ ಸಂಖ್ಯೆ: 9791431827, 9480253024, 9141075968 ಅಥವಾ ವೆಬ್‌ಸೈಟ್: ತಿತಿತಿ.ಛಿiಠಿeಣ.gov.iಟಿ ಅನ್ನು ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥ ಆರ್.ಟಿ.ನಾಗರಹಳ್ಳಿ ತಿಳಿಸಿದ್ದಾರೆ.