ಕ್ವಾಲಿಟೆಸ್ಟ್ ಕಂಪನಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ವಾಗತ ಕಿಟ್ ವಿತರಣೆ

ದಾವಣಗೆರೆ :ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕ್ವಾಲಿಟೆಸ್ಟ್ ಕಂಪನಿಯ ವತಿಯಿಂದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇತ್ತೀಚಿಗೆ ನಡೆದಿದ್ದ ಸಂದರ್ಶನ ಪ್ರಕ್ರಿಯೆಯಲ್ಲಿ ಕಾಲೇಜಿನ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.
ಆಯ್ಕೆಯಾದ ಈ 5 ವಿದ್ಯಾರ್ಥಿಗಳಿಗೆ ಕಂಪನಿಯ ವತಿಯಿಂದ ಸ್ವಾಗತ ಕಿಟ್ ( ವೆಲ್ಕಮ್ ಕಿಟ್) ನೀಡಲಾಯಿತು.
ಸ್ವಾಗತ ಕಿಟ್ ವಿತರಣೆಯನ್ನು ಕಂಪನಿಯ ಪರವಾಗಿ ಕಾಲೇಜಿನ ಆಡಳಿತಾಧಿಕಾರಿ ಶ್ರೀ ವೈಯೂ ಸುಭಾಷ್ ಚಂದ್ರ ಮತ್ತು ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿತರಿಸಿದರು.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ಸಂಪದ ಪಾವಟೇ ಮತ್ತು ಶ್ರೇಯ ಬಿಟಿ, ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಆರುಷಿ ಎಸ್ ಅಗಡಿ, ಅನುಷಾ ಜಿಎನ್ ಮತ್ತು ಎಂ ವೆಂಕಟ ಅನಿಲ್ ಕುಮಾರ್ ಸ್ವಾಗತ ಕಿಟ್ ಸ್ವೀಕರಿಸಿದ ವಿದ್ಯಾರ್ಥಿಗಳಾಗಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.