ಕುತಂತ್ರ,ಸುಳ್ಳು ಬಿಜೆಪಿ ರಕ್ತದಲ್ಲಿಯೇ ಇದೆ – ಕೆ.ಎಲ್.ಹರೀಶ್ ಬಸಾಪುರ

- ದಾವಣಗೆರೆ :ದಾವಣಗೆರೆ ಲೋಕಸಭಾ ಸದಸ್ಯರಾದ ಜಿ.ಎಂ. ಸಿದ್ದೇಶ್ವರ್ ರವರು ಚುನಾವಣೆಯಲ್ಲಿ ಹಣ ಹಂಚುವುದು ಕಾಂಗ್ರೆಸ್ ರಕ್ತದಲ್ಲಿಯೇ ಬಂದಿದೆ ಎಂದು ಉಡಾಫೆ ಹಾಗೂ ಆಧಾರ ರಹಿತ ಹೇಳಿಕೆ ನೀಡಿದ್ದು ಇದನ್ನು ತೀವ್ರವಾಗಿ ಖಂಡಿಸಲಾಗುವುದು.
ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಕುತಂತ್ರ ಹಾಗೂ ಸುಳ್ಳು ಹೇಳಿಯಾದರೂ ಚುನಾವಣೆ ಗೆಲ್ಲುತ್ತೇವೆ ಎಂದು ತಮ್ಮ ಪಕ್ಷದ ಸಚಿವರು ಹಾಗೂ ಮಾಜಿ ಸಚಿವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ, ಇದರ ಅರ್ಥ ನಿಮ್ಮ ಪಕ್ಷದ ರಕ್ತದಲ್ಲಿಯೇ ಕುತಂತ್ರ ಮತ್ತು ಸುಳ್ಳು ಅಡಗಿರಬೇಕು, ಹಾಗಾಗಿ ನೀವು ಬೇರೆಯವರ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದೀರಾ.
ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ರವರು ಚುನಾವಣೆಯಲ್ಲಿ ಕುತಂತ್ರದಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ, ಸಚಿವರಾದ ಕೆ.ಎಸ್. ಈಶ್ವರಪ್ಪ ನವರೂ ಬಹಿರಂಗಸಭೆಯಲ್ಲಿಯೇ ಕಾರ್ಯಕರ್ತರಿಗೆ, ಮತದಾರರಿಗೆ ಸುಳ್ಳು ಹೇಳಿ… ನೀವು ಹೇಳುವುದು ಸುಳ್ಳು ಸತ್ಯವೊಂದು ಅವರಿಗೆಲ್ಲಿ ಗೊತ್ತಾಗುತ್ತದೆ ಎಂದು ಪ್ರಚೋದನೆ ನೀಡಿದ್ದಾರೆ, ಸಂಸದರು ಇದನ್ನು ಮರೆತು ಹಣ ಮತ್ತು ಅಧಿಕಾರದ ದರ್ಪದಿಂದ ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳುವುದನ್ನ ಬಿಡಬೇಕು.
*ಕೆ.ಎಲ್.ಹರೀಶ್ ಬಸಾಪುರ.*