ಜಿಲ್ಲಾವಾರು ವಿಮಾಸಂಸ್ಥೆಗಳ ಬೆಳೆ ಪರಿಹಾರ ಇತ್ಯರ್ಥ! ಯಾವ ಜಿಲ್ಲೆ ಎಷ್ಟು ಬೆಳೆ ಪರಿಹಾರ ಇತ್ಯರ್ಥವಾಗಿದೆ ಗೊತ್ತಾ? ನೋಡಿ ನಿಮ್ಮ ಜಿಲ್ಲೆ ಮಾಹಿತಿ

ದಾವಣಗೆರೆ: 2021ರ ಮುಂಗಾರು ಹಂಗಾಮಿನಲ್ಲಿ ಜಿಲ್ಲಾವಾರು ಬೆಳೆ ಪರಿಹಾರವನ್ನು ವಿಮಾ ಸಂಸ್ಥೆಗಳಿ0ದ 590925 ಫಲಾನುಭವಿಗಳ 74917.18 ಲಕ್ಷ ರೂ. ಬೆಳೆ ಪರಿಹಾರ ಮೊತ್ತವನ್ನು ಲೆಕ್ಕಹಾಕಿದ್ದು, ಈ ಪೈಕಿ ಒಟ್ಟು 386266 ಫಲಾನುಭವಿಗಳ 60959.50 ಲಕ್ಷ ರೂ. ಮೊತ್ತವನ್ನು ಇತ್ಯರ್ಥಪಡಿಸಲಾಗಿರುತ್ತದೆ. ಉಳಿದಿರುವ 191417 ಫಲಾನುಭವಿಗಳ 13957.18 ಲಕ್ಷ ರೂ. ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ವಿಮಾ ಸಂಸ್ಥೆಗಳಿ0ದ ಪರಿಹಾರವಾದ ಜಿಲ್ಲಾವಾರು ಬೆಳೆಪರಿಹಾರದ ವಿವರ ಈ ಕೆಳಗಿನಂತಿದೆ:

ದಾವಣಗೆರೆ ಜಿಲ್ಲೆಯಲ್ಲಿ 7899 ಫಲಾನುಭವಿಗಳ 819.54 ಲಕ್ಷ ರೂ.ಗಳ ಬೆಳೆ ವಿಮಾ ಪರಿಹಾರ ಲೆಕ್ಕಹಾಕಲಾಗಿದ್ದು, 6853 ಫಲಾನುಭವಿಗಳ 643.65 ಲಕ್ಷ ರೂ. ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಇನ್ನೂ 1046 ಫಲಾನುಭವಿಗಳ 175.45 ಲಕ್ಷ ರೂ ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಬೇಕಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 6793 ಫಲಾನುಭವಿಗಳ 1832.71 ಲಕ್ಷ ರೂ.ಗಳ ಬೆಳೆ ವಿಮಾ ಪರಿಹಾರ ಲೆಕ್ಕ ಹಾಕಲಾಗಿದ್ದು, 5688 ಫಲಾನುಭವಿಗಳ 1612.28 ಲಕ್ಷ ರೂ. ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಇನ್ನೂ 1105 ಫಲಾನುಭವಿಗಳ 220.43 ಲಕ್ಷ ರೂ ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಬೇಕಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ 8515 ಫಲಾನುಭವಿಗಳ 864.72 ಲಕ್ಷ ರೂ.ಗಳ ಬೆಳೆ ವಿಮಾ ಪರಿಹಾರ ಲೆಕ್ಕ ಹಾಕಲಾಗಿದ್ದು, 8334 ಫಲಾನುಭವಿಗಳ 843.01 ಲಕ್ಷ ರೂ. ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಇನ್ನೂ 181 ಫಲಾನುಭವಿಗಳ 21.71 ಲಕ್ಷ ರೂ ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಬೇಕಾಗಿದೆ.

ಹಾವೇರಿ ಜಿಲ್ಲೆಯಲ್ಲಿ 61191 ಫಲಾನುಭವಿಗಳ 7200.18 ಲಕ್ಷ ರೂ.ಗಳ ಬೆಳೆ ವಿಮಾ ಪರಿಹಾರ ಲೆಕ್ಕ ಹಾಕಲಾಗಿದ್ದು, 50197 ಫಲಾನುಭವಿಗಳ 5739.21 ಲಕ್ಷ ರೂ. ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಇನ್ನೂ 10994 ಫಲಾನುಭವಿಗಳ 1460.97 ಲಕ್ಷ ರೂ ಬೆಳೆ ವಿಮಾ ಪರಿಹಾರ ಇತ್ಯರ್ಥ ಪಡಿಸಬೇಕಾಗಿದೆ.

2021ರ ಮುಂಗಾರು ಹಂಗಾಮಿನಲ್ಲಿ ಜಿಲ್ಲಾ ವಾರು ಬೆಳೆ ವಿಮೆ ಪರಿಹಾರ ಲೆಕ್ಕಾಚಾರ, ಅನುಷ್ಠಾನ, ವಿಮಾ ಸಂಸ್ಥೆಯವರಿ0ದ ಇತ್ಯರ್ಥಪಡಿಸಿರುವ ಮತ್ತು ಇತ್ಯರ್ಥಪಡಿಸಲು ಬಾಕಿ ಇರುವ ಬೆಳೆ ವಿಮೆ ಪರಿಹಾರದ ಮೊತ್ತದ ವಿವರವನ್ನು ನೀಡಲಾಗಿದ್ದು, ಒಟ್ಟು 30 ಜಿಲ್ಲೆಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿರುವ ಚಾರ್ಟ್ನಲ್ಲಿದ್ದು ನಿಮ್ಮ ಜಿಲ್ಲಾ ಮಾಹಿತಿ ನೋಡಬಹುದು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!