ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ! ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಟನ್ ರಸಗೊಬ್ಬರ ದಾಸ್ತಾನಿದೆ? ನೋಡಿ ನಿಮ್ಮ ಜಿಲ್ಲೆಯ ಮಾಹಿತಿ

ದಾವಣಗೆರೆ: ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 26.7 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಕೇಂದ್ರ ಸರ್ಕಾರ ಇದರ ಅನುಗುಣವಾಗಿ ಮಾಹೆವಾರು ರಾಜ್ಯಕ್ಕೆ ಹಂಚಿಕೆ ಮಾಡಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಏಪ್ರಿಲ್ ನಿಂದ ಜೂನ್ ವರೆಗೂ 12.5 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಇಲ್ಲಿಯವರೆಗೆ 14.51 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಸರಬರಾಜಾಗಿದ್ದು 7.34 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿರುತ್ತದೆ. ಜಿಲ್ಲೆಗಳಲ್ಲಿ 7.16 ಲಕ್ಷ ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರ ದಾಸ್ತಾನು ಇರುತ್ತದೆ.

ವಿಶೇಷವಾಗಿ ಜಿಲ್ಲೆಗಳಿಂದ ಡಿ.ಎ.ಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮುಂಗಾರು ಹಂಗಾಮಿಗೆ 4 ಲಕ್ಷ ಮೆಟ್ರಿಕ್ ಟನ್ ಡಿವಿಪಿ ಬೇಡಿಕೆ ಇದ್ದು ಈಗಾಗಲೇ 2.59 ಲಕ್ಷ ಮೆಟ್ರಿಕ್ ಟನ್ ಸರಬರಾಜಾಗಿದ್ದು 161 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿರುತ್ತದೆ. ಇನ್ನೂ 98 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ.

ಇದಲ್ಲದೇ ಕೇಂದ್ರ ಸರ್ಕಾರವು 60 ಸಾವಿರ ಮೆಟ್ರಿಕ್ ಟನ್ ಡಿ.ಎ.ಪಿ ರಸಗೊಬ್ಬರವನ್ನು ಪ್ರಸ್ತುತ ಮಾಹೆಯಲ್ಲಿ ಸರಬರಾಜು ಮಾಡಲು ಕ್ರಮವಹಿಸಿದೆ. ರೈತರು ಯಾವುದೇ ಅಪಪ್ರಚಾರದ ಮಾಹಿತಿಗೆ ಆತಂಕಕ್ಕೆ ಒಳಗಾಗದೇ ರಸಗೊಬ್ಬರವನ್ನು ತೆಗೆದುಕೊಳ್ಳಲು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿನಂತಿಸಿದ್ದಾರೆ. ಡಿ.ಎ.ಪಿ. ರಸಗೊಬ್ಬರದಲ್ಲಿನ ಪೋಷಕಾಂಶಗಳು ಕಂಪ್ಲೆಕ್ ರಸಗೊಬ್ಬರಗಳಲ್ಲಿಯೂ ಇದ್ದು ರೈತರು ಬೆಳೆಗಳಿಗೆ ಅವಶ್ಯಕತೆಗೆ ತಕ್ಕಂತೆ ಸಮತೋಲನ, ರಸಗೊಬ್ಬರ ಬಳಸಲು ಪ್ರಕಟಣೆ ಮೂಲಕ ಸೂಚಿಸಿದ್ದಾರೆ.

ಲಭ್ಯತೆ ಇರುವ ರಸಗೊಬ್ಬರ ದಾಸ್ತಾನು ವಿವರ(ದಿನಾಂಕ 10-06-2022 ರವರೆಗೆ) ಟನ್‌ಗಳಲ್ಲಿ:
ದಾವಣಗೆರೆಯಲ್ಲಿ 37300 ಟನ್, ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧ ರೀತಿಯ ರಸಗೊಬ್ಬರಗಳು ಒಟ್ಟು 31530 ಟನ್‌ಗಳಿವೆ. ಬೆಂಗಳೂರು ಗ್ರಾಮಾಂತರದಲ್ಲಿ 7350 ಟನ್, ಬೆಳಗಾಂ 60620 ಟನ್, ಬಳ್ಳಾರಿ ಹಾಗೂ ವಿಜಯನಗರದಲ್ಲಿ 46130 ಟನ್, ಬೆಂಗಳೂರು ನಗರ 13820 ಟನ್, ಬೀದರ್ 11550 ಟನ್, ಬಿಜಾಪುರ 33310 ಟನ್, ಚಿಕ್ಕಬಳ್ಳಾಪುರ 10470 ಟನ್, ಚಿಕ್ಕಮಗಳೂರು 24430 ಟನ್, ಚಿತ್ರದುರ್ಗ 13710 ಟನ್, ದಕ್ಷಿಣ ಕನ್ನಡ 10490 ಟನ್, ಧಾರವಾಡ 13300 ಟನ್, ಗದಗ 6320 ಟನ್, ಕಲಬುರಗಿ 28520 ಟನ್, ಹಾಸನ 33150 ಟನ್, ಹಾವೇರಿ 38640, ಕೊಡಗು 17370, ಕೋಲಾರ 8200, ಕೊಪ್ಪಳ 30420, ಮಂಡ್ಯ 32170, ಮೈಸೂರು 40750 ಟನ್, ರಾಯಚೂರು 61240 ಟನ್, ರಾಮನಗರ 3420 ಟನ್, ಶಿವಮೊಗ್ಗ 30160 ಟನ್, ತುಮಕೂರು 21180 ಟನ್, ಉಡುಪಿ 3460 ಟನ್, ಉತ್ತರ ಕನ್ನಡ 6240 ಟನ್, ಯಾದಗಿರಿ 31850 ಟನ್ ನಷ್ಟು ವಿವಿಧ ಹೆಸರಿನ ರಸಗೊಬ್ಬರಗಳು ಇವೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!