ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ದಾವಣಗೆರೆ : ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಜ.05, ಮತ್ತು 06 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.05 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹೊರಟು ಮ.02 ಗಂಟೆಗೆ ಮಾಯಕೊಂಡ ಹೋಬಳಿಯ ಬೋರಗೊಂಡನಹಳ್ಳಿ ಆಗಮಿಸುವರು. ನಂತರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೋರಗೊಂಡನಹಳ್ಳಿಯ ಹೆಚ್ ಗಿರಿಯಾಪುರ ಗ್ರಾಮದಲ್ಲಿ ನಿರ್ಮಿಸಿರುವ ಹಮಾಲರ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮ.03 ಗಂಟೆಗೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಿಸಿರುವ ಕೆ.ಆರ್ ಮಾರುಕಟ್ಟೆಯ ಮುಚ್ಚು ಹರಾಜುಕಟ್ಟೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ಹಾಗೂ ಸಾರ್ವಜನಿಕರ ಭೇಟಿ ಮಾಡುವರು. ರಾತ್ರಿ 7.30 ಗಂಟೆಗೆ ಜಿ.ಎಂ.ಐ.ಟಿ ಕಾಲೇಜಿನಲ್ಲಿ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಜಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಭಾಗದ ಎಲ್ಲಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷರುಗಳ ಸಭೆಯಲ್ಲಿ ಭಾಗವಹಿಸುವರು. ನಂತರ ಜಿ.ಎಂ.ಐ.ಟಿ ಗೆಸ್ಟ್‍ಹೌಸ್‍ನಲ್ಲಿ ವಾಸ್ತವ್ಯ ಮಾಡುವರು.
ಜ.06 ರಂದು ಬೆಳಿಗ್ಗೆ 9 ಗಂಟೆಗೆ ಜಿ.ಎಂ.ಐ.ಟಿ ಗೆಸ್ಟ್ ಹೌಸ್ ನಿಂದ ಹೊರಟು 9.05 ಕ್ಕೆ ಹರಿಹರದಲ್ಲಿರುವ ಪಂಚಮಸಾಲಿ ಮಠದ ಸ್ವಾಮೀಜಿಯವರ ದರ್ಶನ ಮತ್ತು ಆರ್ಶಿವಾದ ಪಡೆಯುವರು. ಬೆ.9.50ಕ್ಕೆ ಬೆಳ್ಳೂಡಿಗೆ ಆಗಮಿಸಿ ಶ್ರೀಕನಕ ಗುರುಪೀಠ ಮಠದ ಸ್ವಾಮೀಜಿಯವರ ದರ್ಶನ ಮತ್ತು ಆರ್ಶಿವಾದ ಪಡೆಯುವರು. ಹಾಗೂ ಬೆ.10.35ಕ್ಕೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿ ಸ್ವಾಮೀಜಿಯವರ ದರ್ಶನ ಮತ್ತು ಆರ್ಶಿವಾದ ಪಡೆಯುವರು. ಬೆ.11.30ಕ್ಕೆ ನಗರದ ತ್ರಿಶೂಲ್ ಕಲಾಭವನಕ್ಕೆ ಆಗಮಿಸಿ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಜಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವರು. ಮ.1.15ಕ್ಕೆ ಜಿ.ಎಂ.ಐ.ಟಿ ಗೆಸ್ಟ್ ಹೌಸ್‍ಗೆ ತಲುಪುವರು. ನಂತರ ಮ.2.30ಕ್ಕೆ ಜಿ.ಎಂ.ಐ.ಟಿ ಗೆಸ್ಟ್ ಹೌಸ್ ನಿಂದ ಕೇಂದ್ರಸ್ಥಾನ ತಲುಪುವರೆಂದು ಪ್ರಕಟಣೆ ತಿಳಿಸಿದೆ.