ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ,ಬಿ,ಎ, ಪದವಿ ಕೋರ್ಸ್ ಬಂದಿದ್ದು ಹೇಗೆ ಗೊತ್ತಾ.?

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ,ಬಿ,ಎ, ಪದವಿ ಕೋರ್ಸ್ ಬಂದಿದ್ದು ಹೇಗೆ ಗೊತ್ತಾ.?

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದಿಂದ ಎಂ, ಬಿ,ಎ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ನ ವಿದ್ಯಾರ್ಥಿ ಗಳಿಗೆ ಓರಿಯೆಂಟೇಶನ ಕೋರ್ಸ್ ನ ಕುರಿತು ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು , ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ ಶಂಕರ್ .ಶೀಲಿ ಉದ್ಘಾಟಿಸಿ ಮಾತನಾಡಿದ ಅವರು ಎಂ,ಬಿ,ಎ, ಪದವಿಯ ಮಹತ್ವ ಮತ್ತು ಅವಕಾಶಗಳ ಬಗ್ಗೆ ಹಣಕಾಸಿನ ಹೊಡಿಕೆಯ ಬಗ್ಗೆ ತಿಳಿಸಿದರು . ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ,ಬಿ,ಎ, ಪದವಿ ಕೋರ್ಸ್ ತರಲು ಶ್ರಮಿಸಿದ ಅನುಭವಗಳ ಬಗ್ಗೆ ಸುದೀರ್ಘವಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ವ್ಯಕ್ತ ಪಡಿಸಿದರು , ಅದೇ ರೀತಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ನಾರಯಣಸ್ವಾಮಿ ಕೆ ಐ , ಕ್ಯೂ , ಎ , ಸಿ ಕೋ ಆರ್ಡಿನೇಟರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು , ವ್ಯಕ್ತಿತ್ವ ವಿಕಸನದ ಬಗ್ಗೆ ಹಾಗೂ ವ್ಯವಹಾರ ಹೇಗೆ ಮಾಡಬೇಕು ಅದಕ್ಕೆ ಬೇಕಾದ ಕೌಶಲ್ಯಗಳ ಬಗ್ಗೆ ತಂತ್ರಜ್ಞಾನದ ಬಗ್ಗೆ ಮಹತ್ವದ ಮಾಹಿತಿಯನ್ನು ತಿಳಿಸಿ ಕೊಟ್ಟರು , ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್ ಆರ್ ಅಂಜನಪ್ಪರವರು ಎಂ ಬಿ ಎ ಪದವಿದರರು ಅತಿಥಿಗಳು ನಿಡಿದ ಸಲಹೆ ಸೂಚನೆಗಳನ್ನು ಅನುಸರಿಸಬೇಕು ಎಂದು ಅಧ್ಯಕ್ಷತೆಯ ನುಡಿಗಳನ್ನು ಹಂಚಿಕೊಂಡರು , ಈ ಕಾರ್ಯಕ್ರಮದಲ್ಲಿ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನೀತಾ ಕೆ ಬಿ ಅವರು ಎಲ್ಲಾ ಅತಿಥಿ ಗಣ್ಯರಿಗೆ ಸ್ವಾಗತವನ್ನು ಕೋರಿದರು , ಈ ಕಾರ್ಯಕ್ರಮದಲ್ಲಿ ಪ್ರೊ ಬಸವರಾಜ . ತಹಶೀಲದಾರ , ಪ್ರೊ ಭೀಮಣ್ಣ . ಸುಣಗಾರ ಬೋದಕ/ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು .ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!