ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಉಸ್ತುವಾರಿ ಸಚಿವರಿಂದ ಚಾಲನೆ

ದಾವಣಗೆರೆ: ಸ್ಮಾರ್ಟ್‍ಸಿಟಿ ಕಾಮಗಾರಿಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉಧ್ಘಾಟನೆಯನ್ನು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ,ಎ, ಬಸವರಾಜ(ಬೈರತಿ) ನೆರವೇರಿಸಿದರು.
ಮಂಗಳವಾರ ಸ್ಮಾರ್ಟ್‍ಸಿಟಿ ವತಿಯಿಂದ ಹಮ್ಮಿಕೊಳ್ಳಲಾದ 10 ಕೋಟಿ ವೆಚ್ಚದ ರಿಂಗ್ ರಸ್ತೆ ಲೋಕಾರ್ಪಣೆ,5ಕೋಟಿ ವೆಚ್ಚದ ಲೇಸರ್ ಷೋ,6 ಕೋಟಿ ವೆಚ್ಚದ ಥೀಮ್ ಪಾರ್ಕ,4 ಕೋಟಿ ವೆಚ್ಚದ ವಿದ್ಯುತ್ ಚಿತಾಗಾರಗಳ ಕಾಮಗಾರಿಗಳ ಲೋಕಾರ್ಪಣೆಗೊಳಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸ್ಮಾರ್ಟ್‍ಸಿಟಿ ಕಾಮಗಾರಿಗಳು 2023 ರ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿವೆ, ಜೂನ್ ವರಗೆ ಕಾಮಗಾರಿಗಳ ಮಾಡಲು ಅವಕಾಶವಿದ್ದರೂ 3 ತಿಂಗಳು ಮೊದಲೇ ಮುಗಿಯಲಿವೆ. ಕಾಮಗಾರಿಗಳ ಗುಣಮಟ್ಟದ ಬಗೆಗೆ ದೂರುಗಳಿದ್ದರೆ ಗಮನಕ್ಕೆ ತಂದರೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮತ್ತೊಂದು ಚಿತಾಗಾರಕ್ಕೆ ಬೇಡಿಕೆ ಇದ್ದು ಚಿತಾಗಾರಕ್ಕೆ ಟೆಂಡರ್ ಕರೆಯಲು ಸೂಚಿಸಲಾಗಿದೆ. ಮಂಡಕ್ಕಿ ಭಟ್ಟಿ ಪ್ರದೇಶದ ಅಭಿವೃದ್ದಿ ಕೂಡ ಆಗಿದೆ ಆದರೆ ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ಸಮಯ ಹಿಡಿಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್,ಎ,ರವೀಂದ್ರನಾಥ್,ಮಹಾಪೌರರಾದ ಎಸ್,ಟಿ,ವೀರೇಶ್,ದೂಡ ಅಧ್ಯಕ್ಷರಾದ ದೇವರಮನೆ ಶಿವಕುಮಾರ್,ಪಾಲಿಕೆ ಸದಸ್ಯರಾದ ಶಿಲ್ಪ,ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,ಸಿಇಓ ವಿಜಯ ಮಹಾಂತೇಶ ದಾನಮ್ಮನವರ್,ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸ್ಮಾರ್ಟ್ ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರೆ ಹಾಗೂ ದಾವಣಗೆರೆ ವಿವಿ ಕುಲಪತಿ ಶರಣಪ್ಪ ವಿ ಹಲಸೆ, ಉಪ ಮಹಾಪೌರರಾದ ಶಿಲ್ಪಾ ಜಯಪ್ರಕಾಶ್, ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್, ರೇಖಾ ಸುರೇಶ್ ಗಂಡಗಳೆ, ಇತರೆ ಅಧಿಕಾರಿಗಳು ಇದ್ದರು.