Durgambika Devi: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನಿಂದ ನವರಾತ್ರಿ ಉತ್ಸವ ಆಚರಣೆ – ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಪ್ರತಿ ವರ್ಷದಂತೆ ಈ ವರ್ಷವೂ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನಿಂದ ನವರಾತ್ರಿ ಉತ್ಸವವನ್ನು ಕೋವಿಡ್ ನಿಯಮಾವಳಿ ಅನ್ವಯ ಆಚರಿಸಲಾಗುವುದು ಎಂದು ಶಾಸಕ, ಟ್ರಸ್ಟ್‌ನ ಗೌರವ ಅಧ್ಯಕ್ಷರೂ ಆದ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಪ್ರಸಾದ ನಿಲಯದಲ್ಲಿ ಟ್ರಸ್ಟ್‌ನ ಸರ್ವ ಸದಸ್ಯರು ಸಭೆ ನಡೆಸಿ ತೆಗೆದುಕೊಂಡ ತೀರ್ಮಾನದಂತೆ ಈ ವರ್ಷವೂ ನವರಾತ್ರಿ ಉತ್ಸವ ಆಚರಿಸುತ್ತೇವೆ. ಕಳೆದ ಬಾರಿ ಕೋವಿಡ್ ಸೋಂಕು ಹೆಚ್ಚಿದ್ದ ಕಾರಣ ಆಚರಿಸಲು ಆಗಿರಲಿಲ್ಲ. ಈ ಬಾರಿ ನಿಯಮ ಪಾಲನೆ ಮಾಡಿ ಉತ್ಸವ ಆಚರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರದೇವತೆ ಶ್ರೀದುರ್ಗಾಂಬಿಕಾ ದೇವಿದೇವಸ್ಥಾನ ಟ್ರಸ್ಟ್‌ನ ಸದಸ್ಯರುಗಳಾದ ಯಜಮಾನ್ ಮೋತಿವೀರಣ್ಣ,ಜೋಗಪ್ಪನವರ ಕೊಟ್ರಬಸಪ್ಪ, ಹನುಮಂತರಾವ್ ಸಾವಂತ್,ಗೌಡ್ರು ಚನ್ನಬಸಪ್ಪ, ಹೆಚ್.ಬಿ.ಗೋಣೆಪ್ಪ, ಸಾಳಂಕಿ ಉಮೇಶ್,ಬಿ.ಕೆ.ರಾಮಕೃಷ್ಣ, ಸೊಪ್ಪಿನವರ ಗುರುರಾಜ್, ಹನುಮಂತರಾವ್ಜಾಧವ್, ಮುಖಂಡರುಗಳಾದ ಮಹಾನಗರ ಪಾಲಿಕೆ ಸದಸ್ಯಜಿ.ಡಿ.ಪ್ರಕಾಶ್, ಯಶವಂತರಾವ್ ಜಾಧವ್, ಕರಿಗಾರ ಬಸಪ್ಪ,ಬಳ್ಳಾರಿ ಷಣ್ಮುಖಪ್ಪ, ಪಿ.ಜೆ.ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಕವಿರಾಜ್ ಮತ್ತಿತರರಿದ್ದರು.