ವಾಣಿಜ್ಯ ಶಾಸ್ತ್ರ ಅಧ್ಯಾಪಕರ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವೇದಿಕೆಯ ಅಧ್ಯಕ್ಷರಾಗಿ ಹರಿಹರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ ಕರಿಬಸಪ್ಪನವರು ಅವಿರೋಧವಾಗಿ ಆಯ್ಕೆಯಾದರು.
ವೇದಿಕೆ ಕಾರ್ಯದರ್ಶಿಯಾಗಿ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು ಎಸ್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎವಿಕೆ ಮಹಿಳಾ ಕಾಲೇಜಿನ ಪ್ರೊ ನೀಲಾಂಬಿಕಾರವರು ಸಹ ಕಾರ್ಯದರ್ಶಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಮಂಜುನಾಥ್ ಜೆ ಎಮ್ ಹಾಗೂ ವೇದಿಕೆಯ ಖಜಾಂಚಿಯಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಾಬು ಕೆ ಎ ರವರು ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರುಗಳಾಗಿ ರಾಜಶೇಖರಪ್ಪ ಜಿ ಎಲ್ ಸುನೀತಾ ಕೆ ಬಿ ಮಂಜುನಾಥ್ ದೇವೆoದ್ರಪ್ಪ ರಾಕೇಶ್ ಶಂಕ್ರಯ್ಯ ಪಿ ಸಿದ್ದಮ್ಮನವರು ವಿನೋದ್ ಕುಮಾರವರು ಅರವಿಂದ್ ಕುಮಾರ್ ಉಷಾ ಕೆ ಆರ್ ಹಾಗೂ ವೆಂಕಟೇಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇದಿಕೆಯು ಅಧ್ಯಾಪಕರ ಕುಂದುಕೊರತೆಗಳು ಹಾಗೂ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಈ 2ವರ್ಷಗಳ ಅವಧಿಗೆ ಎಲ್ಲ ಪದಾಧಿಕಾರಿಗಳನ್ನು ಹಿಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಹಾಗೂ ಎಲ್ಲಾ ಅಧ್ಯಾಪಕ ಮಿತ್ರರು ಅದಕ್ಕೆ ಸಮ್ಮತಿ ಸೂಚಿಸುತ್ತಾರೆ .