ರೈತರಿಗೆ ಸಿಗದ ನ್ಯಾಯ; ದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಕುರುಬೂರು ನಿಯೋಗ

Farmers do not get justice; Kuruburu delegation met the Union Minister in Delhi

ಕುರುಬೂರು ನಿಯೋಗ

ದೆಹಲಿ: ಕೇಂದ್ರ ಬಜೆಟ್ನಲ್ಲಿ ರೈತರ ಬಹುಕಾಲದ ಬೇಡಿಕೆಗಳು ಈಡೇರಿಲ್ಲ ಎಂದು ಬೇಸರಗೊಂಡಿದ್ದ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಸಚಿವ ಪ್ರಲ್ಹಾದ್ ಜೋಷಿ ಅವರನ್ನು ಭೇಟಿಯಾದರು.
ದೆಹಲಿಯ ಸಂಸತ್ ಭವನದಲ್ಲಿ ಇಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ರವರನ್ನು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಭೇಟಿ ಮಾಡಿ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.


ಇದೇ ವೇಳೆ, ಕೆಂದ್ರ ರಸಗೂಬ್ಬರ ಖಾತೆ ಸಚಿವ ಭಗವಂತ ಕೂಬಾ ರವರನ್ನು ಶಾಸ್ತ್ರಿ ಭವನದ ಸಚಿವಾಲಯದಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರೂ ಆದ ಕುರುಬೂರು ಶಾಂತಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ರೈತರ ಬೇಡಿಕೆಗಳು ಹೀಗಿವೆ:
 ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ ಹನಿ, ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಭೇಕು
 ಪ್ರಸಕ್ತ ವಾಗಿರುವ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಉತ್ಪಾದನಾ ಸಾಲ ಬಡ್ಡಿ ರಹಿತವಾಗಿರಬೇಕು ಕೃಷಿ ಭೂಮಿ ಮೌಲ್ಯದ ಶೇಕಡ 75ರಷ್ಟು ಸಾಲ ನೀಡುವಂತೆ ನೀತಿ ರೂಪಿಸಿ
 ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಮಾನದಂಡ ಕೈಬಿಡಬೇಕು
 ಕಬ್ಬಿನ ಎಫ್ ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಭೇಕು,
 ಆಕಸ್ಮಿಕ ಬೆಂಕಿಗೆ ಸುಟ್ಟು ಹೋದ ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳು ಶೆ 25% ರಷ್ಟು ಹಣ ಕಡಿತ ಮಾಡುವುದನ್ನು ನಿಲ್ಲಿಸಬೇಕು
 ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕನಿಷ್ಠ 9:5 ಕೆ ಇಳಿಸಬೇಕು ,ಕಬ್ಬು ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ಎಪ್ ಆರ್ ಪಿ ದರವನ್ನು 2023-24ನೆ ಸಾಲಿಗೆ ಕನಿಷ್ಠ ಟನ್ಗೆ 3500 ನಿಗದಿ ಮಾಡಬೇಕು,
 ಕಬ್ಬಿನಿಂದ ಉತ್ಪಾದಿಸುವ ಯತನಾಲ್ ನೀತಿ ಬದಲಾಯಿಸಿ ಮುಕ್ತ ಅವಕಾಶ ಕಲ್ಪಿಸಬೇಕು, ರೈತರ ಬೆಲ್ಲದ ಗಾಣದಲ್ಲಿ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು
 ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಪಸಲ್ ಬಿಮಾ ಬೆಳೆ ವಿಮೆ ಯೋಜನೆ ಜಾರಿ ತರಭೇಕು ಈ ಯೋಜನೆ ಕೆಲವು ತಿದ್ದುಪಡಿಗಳು ಆಗಬೇಕು
 ಅತಿವೃಷ್ಟಿ-ಅನಾವೃಷ್ಟಿ ಆಕಸ್ಮಿಕ ಬೆಂಕಿ ಪ್ರವಾಹ ಹಾನಿ ಬೆಳೆ ನಾಶ ಪರಿಹಾರ ಮಾನದಂಡ ವೈಜ್ಞಾನಿಕವಾಗಿ ಬದಲಾಗಬೇಕು
 ವನ್ಯಮೃಗಗಳ ಸಂರಕ್ಷಣೆ, ಮಾನವ ರಕ್ಷಣಾ ಕಾಯ್ದೆ ಕಾಡು ಪ್ರಾಣಿಗಳ ಹಾವಳಿ ತಡೆ ಕಾನೂನು1972 ಕ್ಕೆ ತಿದ್ದುಪಡಿ ತರಭೇಕುಕಾಡು ಪ್ರಾಣಿಗಳ ದಾಳಿಗೆ ತುತ್ತಾದ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತ 50 ಲಕ್ಷ ರೂಗಳಿಗೆ ಏರಿಸಬೇಕು
ಇದೇ ವೇಳೆ, ಕೇಂದ್ರ ಸರ್ಕಾರವೇ ಆರಂಭಿಸಿರುವ ,ಕೂರೂನ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲಾ ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಹೊಸ ಸಾಲ ಎಂದು ಪರಿಗಣಿಸಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಸಲು ಪುನಶ್ಚೇತನ ಸಾಲ ನೀಡಿ ಪ್ರೋತ್ಸಾಹಿಸಬೇಕು ಎಂಬ ಒತ್ತಾಯದ ಪತ್ರವನ್ನು ಕುರುಬೂರು ಶಾಂತಕುಮಾರ್ ಅವರು ಸಚಿವರಿಗೆ ನೀಡಿದರು,
ಕೃಷಿ ಸಾಲನೀತಿ, ಸಿಬಿಲ್ ಸ್ಕೋರ್ ಬಗ್ಗೆ, ಹಣಕಾಸು ಸಚಿವರ ಸಚಿವರ ಜೊತೆ ಮಾತುಕತೆ ನಡೆಸುವುದಾಗಿ ಸಚಿವ ಜೋಶಿ ಅವರು ತಿಳಿಸಿದರು, ರೈತರ ಈ ನಿಯೋಗದಲ್ಲಿ ಕಬ್ಬು ಬೆಗಾರರ ಸಂಘದ, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಎತ್ತಿನಗುಡ್ಡ, ಟಿ ನರಸೀಪುರ ತಾಲೂಕು ಉಪಾಧ್ಯಕ್ಷ ನಂಜುಂಡಸ್ವಾಮಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!