g m Siddeshwar; ಜಿ ಎಂ ಹೆಚ್ ಚಾರಿಟಿಯಿಂದ ಬಡವರು ಮತ್ತು ನಿರ್ಗತಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ – ಡಾ ಜಿ ಎಂ ಸಿದ್ದೇಶ್ವರ*
ದಾವಣಗೆರೆ; g m Siddeshwar ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ ಮತ್ತು ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಹಿಮೋಫೀಲಿಯ ಸೊಸೈಟಿ , ಲೈಫ್ ಲೈನ್ ಬ್ಲಡ್ ಬ್ಯಾಂಕ್, ಜಿಎಂ ಹಾಸ್ಪಿಟಲ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಹರಪನಹಳ್ಳಿ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಬಡವರು ಮತ್ತು ನಿರ್ಗತಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗ ಒದಗಿಸುತ್ತಾ ಬಂದಿದೆ ಇದಲ್ಲದೆ ಮಹಿಳೆಯರಿಗೆ ಸ್ವಂತ ಉದ್ದಿಮೆ ನಡೆಸಲು ಬೇಕಾದ ಸಂಪನ್ಮೂಲ, ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ತರಬೇತಿ ಮತ್ತು ಮಾರ್ಗದರ್ಶನನ್ನು ನೀಡುತ್ತಾ ಬಂದಿದ್ದು, ಇಂದು ಈ ಚಾರಿಟಿ ಫೌಂಡೇಶನ್ ಬೃಹದಾಕಾರದಲ್ಲಿ ಬೆಳೆದು ನಿಂತಿದೆ ಎಂದು ಮಾನ್ಯ ಮಾಜಿ ಕೇಂದ್ರ ಸಚಿವರು ಮತ್ತು ದಾವಣಗೆರೆ ಲೋಕಸಭಾ ಸದಸ್ಯರಾದ ಜಿಎಂ ಸಿದ್ದೇಶ್ವರ ಹಿಂದಿಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಆರೋಗ್ಯ ಎಲ್ಲರ ಹಕ್ಕು, ಆರೋಗ್ಯವೇ ಭಾಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಚಾರಿಟಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಉಚಿತ ತಪಾಸಣೆಗೆ ಒಳಪಡಬೇಕೆಂದು ವಿನಂತಿಸಿ ಕೊಂಡರು.
ಮತ್ತೋರ್ವ ಅತಿಥಿಯಾಗಿ ಶ್ರೀ ಜಿ ಎಸ್ ಅನಿತ್ ಕುಮಾರ್ ಮಾತನಾಡಿ, ಸುಮಾರು 11 ನುರಿತ ವೈದ್ಯಕೀಯ ತಜ್ಞರುಗಳಿಂದ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಅಗತ್ಯವುಳ್ಳ ರೋಗಿಗಳಿಗೆ ಉಚಿತ ಔಷಧಿಗಳನ್ನು ವಿತರಿಸಲಾಗುವುದು ಮತ್ತು ಅಗತ್ಯತೆ ಕಂಡು ಬಂದಲ್ಲಿ ಉಚಿತವಾಗಿ ಆಪರೇಷನ್ ಟ್ರಸ್ಟ್ ವತಿಯಿಂದ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ 350 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ರಕ್ತದೊತ್ತಡ, ರಕ್ತಹೀನತೆ, ಮಧುಮೇಹ, ಕಣ್ಣಿನ ಸೋಂಕು, ಮೂಲವ್ಯಾಧಿ, ಪಾಶ್ವವಾಯು, ಸೊಂಟ ಮತ್ತು ಕಾಲಿನ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ನಡೆಸಲಾಯಿತು.
ರೋಗಿಗಳಿಗೆ ಉಚಿತ ಔಷಧಿಗಳು, ಶಿಲೀಂಧ್ರ ನಿವಾರಕ ಮುಲಾಮುಗಳು, ಕೆಮ್ಮಿನ ಸಿರಪ್ ಮತ್ತು ವಿಟಮಿನ್ ಪೂರಕಗಳನ್ನು ಸಹ ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚಾರಿಟಿ ಫೌಂಡೇಶನ್ ವತಿಯಿಂದ ಸದಸ್ಯರಾದ ಶ್ರೀ ಪ್ರಭುದೇವ್, ಸಂಯೋಜಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ನ್ಯಾಮತಿ ತಾಲೂಕಿನ ಮುಖಂಡರುಗಳು, ಆಶಾ ಕಾರ್ಯಕರ್ತರುಗಳು, ಸ್ವಯಂಸೇವಕರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.