Joguthi B. Manjamma;ಹರಿಹರ-ವಿದ್ಯಾರ್ಥಿಗಳು ಸದಾಕಾಲವೂ ಧೈರ್ಯದಿಂದ ಇರಬೇಕು- ಪದ್ಮಶ್ರೀ ಜೋಗುತಿ ಬಿ.ಮಂಜಮ್ಮನವರು

ಹರಿಹರ;Padma Shri Joguthi B. Manjamma ನಗರದ ಎಸ್.ಜೆ.ವಿ.ಪಿ ಕಾಲೇಜು ಮತ್ತು ಸ್ಪೂರ್ತಿ ಪ್ರಕಾಶನ ಸಂಸ್ಥೆಯ ಸಹಯೋಗದೊಂದಿಗೆ ಶ್ರೀಶೈಲ ಜಗದ್ಗುರುಗಳವರ 51ನೇ ಜನ್ಮದಿನ ಮತ್ತು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನೆಡದ ಮಹೀಳಾ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗು ಕರ್ನಾಟಕ ಜನಪದ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಮಾತ ಜೋಗುತಿ ಮಂಜಮ್ಮನವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಂತದೇ ಕಠಿಣವಾದ ಪರಿಸ್ಥಿತಿ ಎದುರಾದರು ಧೈರ್ಯದಿಂದ ಮುನ್ನುಗ್ಗಿ ಜೀವನದಲ್ಲಿ ಗುರಿ ಮುಟ್ಟಿ ಯಶಸ್ಸುಗಳಿಸಲು ಕರೆ ನೀಡಿದರು.

ಇತ್ತಿಚಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ಸಣ್ಣ ಸಣ್ಣ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳುತ್ತಿರುವುದು ಕಳವಳಕಾರಿಯಾಗಿದ್ದು, ಇದಕ್ಕೆಲ್ಲ ಕಾರಣ ಆತ್ಮವಿಶ್ವಾಸದ ಕೊರತೆ ಎಂದು ತೀಳಿಸಿದರು, ನಾನು ಜೀವನದಲ್ಲಿ ಅನೇಕ ಬಾರಿ ಅಪಮಾನ,ನಿಂದನೆಗಳನ್ನು ಅನುಭವಿಸಿದ್ದೆನೆ ಅಂದು ನಾನು ಅವುಗಳನ್ನು ಸಹಿಸಿಕೊಳದೇ ಒಂದು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೊಚನೆ ಮಾಡಿದ್ದುಂಟು ಆದರೆ ನನ್ನ ಸುಪ್ತ ಮನಸ್ಸಿನಲ್ಲಿ ಇದ್ದ ಧೈರ್ಯ ಮತ್ತು ಆತ್ಮ ವಿಶ್ವಾಸದ ಫಲವಾಗಿ ಇಂದು ಬದುಕಿ ಬಾಳಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದೆನೆ ಎಂದು ಭಾವುಕವಾಗಿ ನುಡಿದರು.

ಇಂದಿನ ಯುವ ಜನತೆ ಸಂಸ್ಕಾರತು ಜೀವನವನ್ನು ನೆಡಸಬೇಕು ತಂದೆ-ತಾಯಿ ಮತ್ತು ಗುರುವಿಗೆ ಸದಾಕಾಲವೂ ಚಿರರುಣಿಯಾಗಿರಬೇಕ ಎಂದು ತೀಳಿಸಿ ಮಾನವೀಯತೆ ಮತ್ತು ಸಮಾನತೆಯನ್ನು ಪ್ರೊತ್ಸಾಹಸಬೆಕೆಂದು ಕರೆ ನೀಡಿದರು. ಎಸ್.ಜೆ.ವಿ.ಪಿ ಪದವಿ ಕಾಲೇಜು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದು ಜಗದ್ಗುರುಗಳವರ ದೂರದೃಷ್ಟಿ ಮತ್ತು ಕಾರ್ಯದರ್ಶಿಗಳಾದ ಪ್ರಶಾಂತ್ ದುಗ್ಗತ್ತಿಮಠ್ ಅವರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ವಿದ್ಯಾಸಂಸ್ಥೆಯ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ಘಾಟಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳಾದ ಗಣಪತಿ ಮಾಳಂಜಿಯವರು ಮಾತನಾಡಿ ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ ಸಮಾಜದಲ್ಲಿ ಇಂದು ಎಲ್ಲಾ ರಂಗದಲ್ಲಿ ಪುರಷರಿಗೆ ಸಮಾನವಾಗಿ ಬೆಳಯುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ ಪ್ರಶಾಂತ್ ದುಗ್ಗತ್ತಿಮಠ್,

ನಗರಸಭೆ ಸದಸ್ಯರಾದ ಶ್ರೀಮತಿ ಅಶ್ವಿನಿ ಕೃಷ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿಗಳಾದ ಶ್ರೀಮತಿ ಗಾಯತ್ರಿ, ಸ್ಪೂರ್ತಿ ಪ್ರಕಶಾನದ ಅಧ್ಯಕ್ಷರಾದ ಬಸವರಾಜ್.ಎಂ ತೆಲಗಿ ವೀರಭದ್ರಪ್ಪ,ಮಲ್ಲಮ ನಾಗರಾಜ್,ಶಾರದಮ್ಮ,ಗುರು ದೇವ್,ವೀರಣ್ಣ ಶೆಟ್ಟರ್, ಮತ್ತು ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಾಸ್ತಾವಿಕವಾಗಿ ಪ್ರಾಚಾರ್ಯರಾದ ಡಾ.ಶಿವಗಂಗಮ್ಮಮಾತನಾಡಿದರು.ಶ್ರೀಮತಿ ರಶ್ಮೀ ಸ್ವಾಗತಿಸಿದರು. ವಿಶಾಲ್ ಬೆಂಚಳ್ಳಿ ವಂದಿಸಿದರು ಮತ್ತು ಕು.ನಳಿನಿಯವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೇರೆವೆರಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!