ಗಣೇಶ ಚತುರ್ಥಿಗೆ ಅವಕಾಶ ನೀಡಲು ಬಿಜೆಪಿ ಶಾಸಕರಿಗೆ ಮನವಿ
ದಾವಣಗೆರೆ: ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಲು ಆಗ್ರಹಿಸಿ. ಶ್ರೀರಾಮಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಾಸಕ ಎಸ್.ವಿ.ರಾಮಚಂದ್ರಪ್ಪ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ
ಸರ್ಕಾರ ನಿಷೇಧ ವಿಧಿಸಿದೆ.ಆದ್ರೆ ಎಲ್ಲ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಖಂಡನಾರ್ಹ . ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಜೀವನ ಕಷ್ಟಕರವಾಗಿದ್ದು . ಗಣೇಶನಮೂರ್ತಿ ತಯಾರಿಸುವ ಕಾರ್ಮಿಕರು ನಾಲ್ಕಾರು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸುತ್ತಾರೆ ಶಾಮಿಯಾನ . ವಿದ್ಯುದ್ದೀಪ , ವಾದ್ಯವೃಂದ ಮುಂತಾದವರು ಅವಲಂಬಿತರಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗುತ್ತದೆ . ಕೋವಿಡ್ ನಿಯಮ ಪಾಲಿಸಿ ಮಾಲ್ ಗಳು , ಚಿತ್ರಮಂದಿರ . ಚುನಾವಣೆ , ರಾಜಕೀಯ ಸಮಾವೇಶ ಮುಂತಾದವುಗಳು ನಡೆಯುತ್ತಿವೆಯೋ ಅದೇ ರೀತಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕು .
ಜನಾಶೀರ್ವಾದ ರಾಜಕೀಯ ಕಾರ್ಯಕ್ರಮಕ್ಕೆ ಇರದ ನಿರ್ಬಂಧ ಗಣಪತಿ ಹಬ್ಬಕ್ಕೆ ಯಾಕೆ ಶಾಲಾ ಕಾಲೇಜುಗಳು ತೆರೆದಿದ್ದು ಗಣಪತಿ ಹಬ್ಬಕ್ಕೆ ಯಾಕೆ ನಿಷೇಧ
ಧಾರ್ಮಿಕ ಆಚರಣೆಗೆ ಚ್ಯುತಿ ಬರದಂತ , ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಈಗಿರುವ ನಿರ್ಬಂಧ ತೆಗೆದು ಹೊಸ ಕೋವಿಡ್ ನಿಯಮಾವಳಿಗಳನ್ನು ರೂಪಿಸಿ ಗಣೇಶಹಬ್ಬಕ್ಕೆ ಅನುಕೂಲವಾಗುವಂತ ಹೊಸ ಆದೇಶ ಹೊರಡಿಸಲು ಸರ್ಕಾರಕ್ಕೆ ಆಗ್ರಹಿಸಿದರು ಈ ಸಂದರ್ಭದಲ್ಲಿ ಶ್ರೀರಾಮ್ ಸೇನೆಯ ರಾಜ್ಯ ಸಂಪರ್ಕ ಪ್ರಮುಖ ಪರಶುರಾಮ್ ನಡುಮನೆ, ವಿನೋದ್ ರಾಜ್, ಕರಾಟೆ ರಮೇಶ್, ಶ್ರೀಧರ್, ಸುನಿಲ್ ವಾಲಿ, ರಘು ಮಾರ್ಕಂಡಯ್ಯ ಇನ್ನಿತರರು ಹಾಜರಿದ್ದರು