ರೂ.10 ಸಾವಿರ ಮೊತ್ತದ ಗಾಂಜಾ ವಶ – ಆರೋಪಿ ಬಂಧನ

ದಾವಣಗೆರೆ: ಇಲಾಖೆ ತಂಡ ನಗರದ ಕುಂದುವಾಡ ರಸ್ತೆಯಲ್ಲಿ  ಡಿ.30 ರಂದು ದಾಳಿ ನಡೆಸಿ ಆರೋಪಿ ಸಂಜಯ್ ಎನ್.ಜಿ ಮಾರಾಟಮಾಡುತ್ತಿದ್ದ 10 ಸಾವಿರ ರೂಪಾಯಿ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಕುಂದವಾಡ ಮುಖ್ಯರಸ್ತೆ ಮತ್ತು ಪಿ.ಬಿ ರಸ್ತೆಯ ಕುಂದವಾಡ ಲಿಂಕ್ ರಸ್ತೆಯಲ್ಲಿನ ವಾರ್ಡ ನಂ:30ರ ವಿನಾಯಕ ನಗರದ ಅಶ್ವಿನಿ ಆಸ್ಪತ್ರೆಯ ಹತ್ತಿರದ ಮರದ ಕೆಳಗೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಸಂಜಯ್ ಎನ್.ಜಿ. ಬಿನ್ ಗದಿಗೆಪ್ಪ ಎನ್ನುವ ವ್ಯಕ್ತಿ ಅಕ್ರಮವಾಗಿ 231 ಗ್ರಾಂ ಒಣ ಗಾಂಜಾವನ್ನು ಮಾರಾಟ ಮಾಡುವ ಸಮಯದಲ್ಲಿ ಪತ್ತೆಹಚ್ಚಿ ಗಾಂಜಾ ಜಪ್ತಿ ಮಾಡಿಕೊಂಡು ಸುಮಾರು  10 ಸಾವಿರ ರೂ ಮೊತ್ತದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ರವಿ ಎಂ ಮರಿಗೌಡ್ರ, ಅಬಕಾರಿ ನಿರೀಕ್ಷಕರಾದ ರಶ್ಮಿ ಕೆ.ಆರ್, ಉಪನಿರೀಕ್ಷಕರಾದ ಮಂಜಪ್ಪ.ಎಂ ಅವರು ದಾಳಿ ನಡೆಸಿದ್ದರು.

 
                         
                       
                       
                       
                       
                       
                       
                      