Gas Cylinder Blast: ಮತ್ತೊಂದು ಗ್ಯಾಸ್ ಸಿಲಿಂಡರ್ ಸ್ಪೋಟ: ಒಂದೇ ಕುಟುಂಬದ 7 ಜನ ಸೇರಿದಂತೆ 9 ಮಂದಿಗೆ ಗಂಭೀರ ಗಾಯ

ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಡೀ ಮನೆಯಲ್ಲಿನ ವಸ್ತುಗಳು ಛಿದ್ರಗೊಂಡಿದ್ದು, ಮನೆಯ ಮೇಲ್ಛಾವಣಿಯ ಶೀಟ್ ಸಿಲಿಂಡರ್ ಸ್ಪೋಟಕ್ಕೆ ಪುಡಿ ಪುಡಿಯಾಗಿದೆ. 9 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ರಾಜ್ಯದ ಗಡಿಭಾಗದ ಹೊಸೂರು ಪಟ್ಟಣದ ರಾಮನಗರದ ಮನೆಯೊಂದರಲ್ಲಿ ನಡೆದಿದೆ.
ಭೀಮಸಿಂಗ್, ಅರವಿಂದ್, ರೂಬಿ, ಚಂದ್ರಾದೇವಿ, ಭೀಮ್ಸಿಂಗ್, ಹೃತಿಕ್, ಸಬೀರ್ ಮತ್ತು ಸಾಧಿಕ್ ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯಗಳಾಗಿದ್ದು, ಅಕ್ಕಪಕ್ಕದ ಮನೆಯಲ್ಲಿ ಮತ್ತಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಉತ್ತರ ಪ್ರದೇಶದಿಂದ ಹೊಸೂರಿಗೆ ಬಂದು ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕುಟುಂಬ ಇದಾಗಿದ್ದು, ಇಂದು ಬೆಳಿಗ್ಗೆ ಆಡುಗೆ ಮಾಡಲು ಗ್ಯಾಸ್ ಸ್ಟವ್ ಹಚ್ಚುತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.
ಪ್ರಕರಣ ಸಂಬಂಧ ಹೊಸೂರು ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
