ಕಬ್ಬು ಅಡಿಕೆ ರೈತರ ಸಂಕಷ್ಟಿಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಜಿಬಿ ವಿನಯ್ ಕುಮಾರ್ ಸರ್ಕಾರಕ್ಕೆ ಅಗ್ರಹ
ದಾವಣಗೆರೆ : ಜಿಲ್ಲೆಯಲ್ಲಿ ಈಗಾಗಲೇ ಬೆಳೆದು ನಿಂತಿರುವ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಾದ ಕಬ್ಬು ಮತ್ತು ಅಡಿಕೆ ಬೆಳೆಗಳು ನೀರಿನ ಕೊರತೆಯಿಂದಾಗಿ ಹಾಗೂ ಈ ಬಾರಿಯ ವಿಪರೀತ ಬೇಸಿಗೆ ಬಿಸಿಲಿನಿಂದಾಗಿ ತಾಪಮಾನದ ವೈಪರಿತ್ಯದಿಂದ ಬೆಳೆಗಳ ಒಣಗಿ ಹೋಗಿ ರೈತರಿಗೆ ಅಪಾರ ನಷ್ಟ ಉಂಟಾಗಿದ್ದು ಕೂಡಲೇ ನಷ್ಟ ತುಂಬಿಕೊಡಲು ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಬಳಗದ ವಿನಯ್ ಮಾರ್ಗ ಟ್ರಸ್ಟ್ ಅಧ್ಯಕ್ಷರು ಕೂಡ ಆಗಿರುವ ಜಿಬಿ ವಿನಯ್ ಕುಮಾರ್ ಕಕ್ಕರಗೊಳ್ಳ ಆಗ್ರಹಪಡಿಸಿದರು.
ಸುಮಾರು 2500 ಕಬ್ಬು ಬೆಳೆ ಒಣಗಿದ್ದು ಅದರಂತೆ ನೀರಿಲ್ಲದೆ ಬೋರ್ವೆಲ್ ಗಳಲ್ಲಿ ನೀರು ಬತ್ತಿ ಹೋಗಿ ಸಾವ್ರ ಎಕರೆ ಅಡಿಕೆ ಒಣಗಿಹೋಗುತ್ತಿದ್ದು ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರಿಗೆ ಲಕ್ಷಾಂತರ ರೂಪಾಯಿಗಳ ಪರಿಹಾರವನ್ನು ಒದಗಿಸಲು ಜಿಲ್ಲಾಧಿಕಾರಿಗಳ ಮೂಲಕ ವಿನಯ್ ಕುಮಾರ ಮನವಿ ಮಾಡಿದರು.
ದೇಶದ ಬೆನ್ನೆಲುಬು ರೈತ, ಬೆಳೆದರೆ ಮಾತ್ರ ಅನ್ನ ಅಂತಹ ರೈತ ಇಂದು ಸಂಕಷ್ಟದಿರಿದ್ದಾರೆ. ತಾನು ಭೂಮಿಯಲ್ಲಿ ಬಿತ್ತುವ ಬೀಜ ಹಾಗೂ ಗೊಬ್ಬರವನ್ನು ಮಳೆಯನ್ನು ನಂಬಿಕೊಂಡು ಉಳುಮೆ ಮಾಡಿದ್ದಾನೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಕೆಲವೊಮ್ಮೆ ಕಳಪೆ ಬಿತ್ತನೆ ಬೀಜ ರಸಗೊಬ್ಬರಗಳಿಂದಲೂ ನಷ್ಟವನ್ನು ಅನುಭವಿಸುತ್ತಿದ್ದಾನೆ. ಶ್ರಮಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಲ ಆಗಿ ಸರ್ಕಾರ ಕೂಡ ಈ ನಡುವೆ ರೈತನಿಗೆ ನೆರವಿಗೆ ಬರಬೇಕಾಗಿದೆ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು ನಾಲ್ಕರಿಂದ ನಾಲ್ಕುವರೆ ಸಾವಿರದಷ್ಟು ಕಬ್ಬು ನಾಟಿ ಮಾಡಲಾಗಿದೆ ಒಂದು ಸಾವಿರದಿಂದ 1500 ಎಕರೆ ಸಾl ಅಡಿಕೆ ಬೆಳೆಯಲಾಗಿದೆ. ಈಗಾಗಲೇ ಜಿಲ್ಲೆಯ ರೈತ ಮುಖಂಡರು ಕಬ್ಬು ಬೆಳೆಗಾರರು ಅಡಿಕೆ ಮತ್ತು ಇತರೆ ಬೆಳೆಗಳ ಬೆಳೆಗಾರರು ಕೂಡ ಬೆಳೆಯ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ
ಒಂದು ಎಕರೆ ಕಬ್ಬು ಬೆಳೆಯಲು ಒಂದು 45 ಸಾವಿರ ಖರ್ಚು ವೆಚ್ಚವಾಗುತ್ತಿದೆ.
ಸಕ್ಕರೆ ಕಂಪನಿಯ ಮಾಲೀಕರು ರೈತರಿಗೆ ರೂ.30 ಸಾ.ಗಳನ್ನು ಸಾಲ ನೀಡಿರುತ್ತಾರೆ
ಕಳೆದ ವರ್ಷ ಜೂನ್ ನಿಂದ ನವಂಬರ್ ಅವಧಿಯಲ್ಲಿ ಕಬ್ಬಿನ ನಾಟಿ ಮಾಡಿದ್ದರು ಕೂಡ ತಮ್ಮ ಬೆಳೆ ನಿರೀಕ್ಷೆಯಲ್ಲಿ ರೈತರು ಇಲ್ಲ ಬೆಳೆ ಕೂಡ ಕೈಗೆ ಸಿಗದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ
ರೈತರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಲು ಜಿಲ್ಲಾ ಆಡಳಿತ ಮತ್ತು ಕರ್ನಾಟಕ ರಾಜ್ಯ ಸರ್ಕಾರ ನೆರವಿಗೆ ಬರುವಂತೆ ವೈಜ್ಞಾನಿಕ ಪದ್ಧತಿಯಲ್ಲಿ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ವಿನಯ್ ಕುಮಾರ್ ಈ ಸಂದರ್ಭದಲ್ಲಿ ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ರೈತರ ಜೊತೆ ಜಿಲ್ಲಾಡಳಿತ ಮತ್ತು ಸರ್ಕಾರ ಇರುತ್ತದೆ ಎಂಬ ಆತ್ಮಸ್ಥೈರ್ಯ ತುಂಬಬೇಕು ತಾಲೂಕ್ ಕೇಂದ್ರದಲ್ಲಿಯೂ ಕೂಡ ಸಹ ಉಪವಿಭಾಗ ಆ ಧಿಕಾರಿಗಳು,ತಹಸಿಲ್ದಾರರು ರೈತರ ಸಭೆಯನ್ನು ಕರೆದು ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಜಿಲ್ಲಾಡಳಿತ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರೈತರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲು ದಾವಣಗೆರೆ ಜಿಲ್ಲೆಯ ಸಮಸ್ತ ಸ್ವಾಭಿಮಾನಿ ಬಳಗ ರೈತರು ರೈತ ಮುಖಂಡರು ಆಗ್ರಹ ಪಡಿಸುವರು ಎಂದು ವಿನಯ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ತುರ್ಚಘಟ್ಟದ ಮುರುಡಪ್ಪ, ಚಿಕ್ಕಬೋದಾಳ್ ಅನಂತಪ್ಪ,ಕೆಬಿ ಪರಮೇಶ್ ಹದಡಿ ಷಣ್ಮುಖ ರಾಜು ಮೌರ್ಯ ಸಿದ್ದಲಿಂಗಪ್ಪ ಎಸ್ಎಂ ಆನೇಕಲ್ ವೀರಣ್ಣ ಪುರಂದರ ಲೋಕಿಕೆರೆ, ಶಿವಕುಮಾರ್ ಸಾಮ್ಳೆ,ಮಾಜಿ ನಗರಸಭಾ ಸದಸ್ಯ ಶಾಮನೂರ್ ಗೀತಾ ಮುರುಗೇಶ್ ರಿಯಾಜ್ ಖಾನ್ ಬಟ್ಲಗಟ್ಟೆ ಪರಶುರಾಮ್ ಸತೀಶ್ ಸೇರಿದಂತೆ ಹಲವಾರು ರೈತ ಪರ ಮುಖಂಡರುಗಳು ಪಾಲ್ಗೊಂಡಿದ್ದರು.